ಮುಂಬೈ: ಎರಡನೇ ತ್ರೈಮಾಸಿಕದಲ್ಲಿ ಮುಂಗಡ ತೆರಿಗೆ ಸಂಗ್ರಹ ಸೇರಿದಂತೆ ಕೇಂದ್ರದ ಒಟ್ಟು ತೆರಿಗೆ ಜಮಾ ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ 15ರವರೆಗೆ ಶೇ 22.5ಕ್ಕೆ ಇಳಿದು 2,53,532.3 ಕೋಟಿ ರೂ.ಗೆ ತಲುಪಿದೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿದೆ.
ಲಭ್ಯವಿರುವ ತಾತ್ಕಾಲಿಕ ದತ್ತಾಂಶದ ಬಗ್ಗೆ ಐಟಿ ಇಲಾಖೆಯ ಮೂಲವು ಕೆಲವು ವಿವರಗಳನ್ನು ಹಂಚಿಕೊಂಡಿದೆ.
2019ರ ಸೆಪ್ಟೆಂಬರ್ 15ಕ್ಕೆ ಕೊನೆಗೊಂಡ ಇದೇ ಅವಧಿಯಲ್ಲಿ ಒಟ್ಟು ತೆರಿಗೆ ಸಂಗ್ರಹ 3,27,320.2 ಕೋಟಿ ರೂ.ಗಳಷ್ಟಿತ್ತು (73,788 ಕೋಟಿ ರೂ. ಕೊರತೆ: ಕರ್ನಾಟಕ ರಾಜ್ಯ ಬಜೆಟ್ನ 2,37,000 ಲಕ್ಷ ಕೋಟಿ ರೂ.ನಲ್ಲಿ ಮೂರನೇ ಒಂದು ಪಾಲು ಅಭಾವ ಕಂಡುಬರಲಿದೆ) ಎಂದು ಮುಂಬೈ ವಲಯದ ಆದಾಯ ತೆರಿಗೆ ಇಲಾಖೆಯ ಮೂಲಗಳು ಪಿಟಿಐಗೆ ದೂರವಾಣಿ ಮೂಲಕ ತಿಳಿಸಿವೆ.
ಪ್ರಸಕ್ತ ತ್ರೈಮಾಸಿಕದಲ್ಲಿ ಮುಂಗಡ ತೆರಿಗೆ ಸಂಖ್ಯೆಯನ್ನು ಹಂಚಿಕೊಳ್ಳಲು ಮೂಲವು ನಿರಾಕರಿಸಿದೆ. ಬ್ಯಾಂಕ್ಗಳು ದಿನದ ಅಂತ್ಯದ ವೇಳೆಗೆ ಅಂತಿಮ ಡೇಟಾ ನವೀಕರಿಸಲು ಸಾಧ್ಯವಾಗದೆ ಇರುವುದರಿಂದ ದತ್ತಾಂಶಗಳು ತಾತ್ಕಾಲಿಕವಾಗಿವೆ ಎಂದು ಹೇಳಿವೆ.
ಜೂನ್‌ನಿಂದ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ದೇಶವು ಸಂಪೂರ್ಣ ಲಾಕ್‌ಡೌನ್ ಆಗಿತ್ತು. ಒಟ್ಟು ತೆರಿಗೆ ಸಂಗ್ರಹವು ಶೇ 31ರಷ್ಟು ಕುಸಿದಿದೆ.