ನವದೆಹಲಿ:ಆರ್ಥಿಕತೆಯಲ್ಲಿ ಚೈತನ್ಯವನ್ನು ಪುನರುಜ್ಜೀವನಗೊಳಿಸಲು ತೆರಿಗೆ ದರ ಕಡಿತವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೂಚಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ದರ ಹೊಂದಾಣಿಕೆ ಮತ್ತು ಕೆಲವು ಕ್ಷೇತ್ರಗಳಿಗೆ ಜಿಎಸ್ಟಿ ದರ ಕಡಿತದಿಂದ ಆರ್ಥಿಕತೆ ಸುಧಾರಿಸಲಿದೆ ಎಂದು ಎಸ್‌ಬಿಐ ಹೇಳಿದೆ.
ತೆರಿಗೆ ಕಡಿತವು ಆರ್ಥಿಕ ಚೇತರಿಕೆಗೆ ಸಹಾಯವಾಗಲಿದೆ: ಎಸ್‌ಬಿಐ
ತೆರಿಗೆ ದರ ಕಡಿತದಿಂದ ಆರ್ಥಿಕತೆಯನ್ನು ಪುನರುಜ್ಜೀವಗೊಳಿಸಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವರದಿಯಲ್ಲಿ ಹೇಳಿದೆ.
tax-cuts-can-do-wonders-for-economic-recovery-says-sbi-report
ಕಡಿಮೆ ಬಡ್ಡಿದರದಂತಹ ವಿತ್ತೀಯ ನೀತಿ ಕ್ರಮಗಳು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಮಿತಿಯನ್ನು ತಲುಪಲು ಸಹಾಯ ಮಾಡಿದೆ ಎಂದು ಎಸ್‌ಬಿಐ ತನ್ನ ವರದಿಯಲ್ಲಿ ತಿಳಿಸಿದೆ.
ವರದಿಯಲ್ಲಿ ಎಸ್‌ಬಿಐನ ಉನ್ನತ ಅರ್ಥಶಾಸ್ತ್ರಜ್ಞೆ ಸೌಮ್ಯ ಕಾಂತಿ ಘೋಷ್ ಅವರು ಸಾಲದ ಬೆಳವಣಿಗೆಯನ್ನು ಹೆಚ್ಚಿಸಲು ರಿಸರ್ವ್ ಬ್ಯಾಂಕ್ ಘೋಷಿಸಿದ ಹಲವಾರು ಕ್ರಮಗಳ ಹೊರತಾಗಿಯೂ, ಭವಿಷ್ಯದ ಅನಿಶ್ಚಿತತೆಯಿಂದಾಗಿ ಹೊಸ ಹೂಡಿಕೆಗೆ ಕಾರ್ಪೊರೇಟ್ ಇಚ್ಛೆ ಕಡಿಮೆಯಿದೆ ಎಂದು ಹೇಳಿದ್ದಾರೆ.