ಕರ್ನಾಟಕ

karnataka

By

Published : May 1, 2020, 3:56 PM IST

ETV Bharat / business

ವಿತ್ತೀಯ ಇಕ್ಕಟ್ಟಿನ ನಡುವೆ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಹುದ್ದೆಗೇರಿದ ತರುಣ್ ಬಜಾಜ್​

ಕೋವಿಡ್​-19 ಸಾಂಕ್ರಾಮಿಕ ರೋಗದಿಂದ ಆರ್ಥಿಕತೆಯು ಸಂಪೂರ್ಣವಾಗಿ ನೆಲಕಚ್ಚಿದೆ. ಇಂತಹ ಕಠಿಣ ಸವಾಲಿನ ಮಧ್ಯೆ ಉತ್ತರ ಬ್ಲಾಕ್​ನಲ್ಲಿನ ಹಣಕಾಸು ಸಚಿವಾಲಯದ ಉನ್ನತ ಹುದ್ದೆಗೆ ತರುಣ್ ಬಜಾಜ್ ಬಂದು ಕುಳಿತಿದ್ದಾರೆ.

Economic Affairs Secretary Tarun Bajaj
ತರುಣ್ ಬಜಾಜ್

ನವದೆಹಲಿ: ತರುಣ್ ಬಜಾಜ್ ಅವರು ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ವ್ಯಹಾರಗಳ ಕಾರ್ಯದರ್ಶಿಯಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡರು.

ಕೋವಿಡ್​-19 ಸಾಂಕ್ರಾಮಿಕ ರೋಗದಿಂದ ಆರ್ಥಿಕತೆಯು ಸಂಪೂರ್ಣವಾಗಿ ನೆಲಕಚ್ಚಿದೆ. ಇಂತಹ ಕಠಿಣ ಸವಾಲಿನ ಮಧ್ಯೆ ಉತ್ತರ ಬ್ಲಾಕ್​ನಲ್ಲಿನ ಹಣಕಾಸು ಸಚಿವಾಲಯದ ಉನ್ನತ ಹುದ್ದೆಗೆ ಏರಿದ್ದಾರೆ.

ಈ ಹುದ್ದೆ ವಹಿಸಿಕೊಳ್ಳುವ ಮೊದಲು ಬಜಾಜ್​, ಪ್ರಧಾನ ಮಂತ್ರಿ ಕಚೇರಿಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದರು. 1988ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದ ಬಜಾಜ್ ಅವರು ಗುರುವಾರ ನಿವೃತ್ತರಾದ ಅತಾನು ಚಕ್ರವರ್ತಿ ಅವರ ಸ್ಥಾನಕ್ಕೆ ನೇಮಕ ಆಗಿದ್ದಾರೆ.

ಅತಾನು ಚಕ್ರವರ್ತಿಯ ಅಧಿಕಾರ ವಹಿಸಿಕೊಂಡ ನಂತರ ಇಂದು ಆರ್ಥಿಕ ವ್ಯವಹಾರಗಳ (ಡಿಇಎ) ಹೊಸ ಕಾರ್ಯದರ್ಶಿಯಾಗಿ ತರುಣ್ ಬಜಾಜ್ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಹಣಕಾಸು ಸಚಿವಾಲಯ ಟ್ವೀಟ್​ನಲ್ಲಿ ತಿಳಿಸಿದೆ.

2015ರಲ್ಲಿ ಪ್ರಧಾನಿ ಕಚೇರಿಗೆ ಸೇರುವ ಮೊದಲು, ಬಜಾಜ್ ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದರು. ಆಗ ಬಹುಪಕ್ಷೀಯ ಧನಸಹಾಯ ಏಜೆನ್ಸಿಗಳ ವಿಭಾಗ ನೋಡಿಕೊಳ್ಳುತ್ತಿದ್ದರು. ಹಣಕಾಸು ಸೇವೆಗಳ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿ ಮತ್ತು ನಿರ್ದೇಶಕರಾಗಿ ಸಹ ಕೆಲಸ ಮಾಡಿರುವ ಅನುಭವವಿದೆ.

ABOUT THE AUTHOR

...view details