ನವದೆಹಲಿ: ಆರ್ಥಿಕ ಕುಸಿತದ ವ್ಯತಿರಿಕ್ತ ಪರಿಣಾಮವಾಗಿ ನವೆಂಬರ್ನಲ್ಲಿ ದೇಶೀಯ ವಾಹನಗಳ ಮಾರಾಟವು ಕಳೆದ ವರ್ಷಕ್ಕೆ ಹೊಲಿಸಿದರೆ ಶೇ 12.05ರಷ್ಟು ಇಳಿಕೆ ಕಂಡುಬಂದಿದೆ.
ವಾಹನೋದ್ಯಮದ ಬೆನ್ನತ್ತಿದ ಆರ್ಥಿಕ ಕುಸಿತ... ಮಾರಾಟದಲ್ಲಿ ಮತ್ತೆ ಶೇ 12ರಷ್ಟು ಇಳಿಕೆ
ದೇಶೀಯವಾಗಿ 2019ರ ನವೆಂಬರ್ ತಿಂಗಳಲ್ಲಿ 17,92,415 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 20,38,007 ವೆಹಿಕಲ್ಗಳು ಮಾರಾಟ ಆಗಿದ್ದವು. ಹೀಗಾಗಿ, ನವೆಂಬರ್ ಮಾಸಿಕದ ಒಟ್ಟಾರೆ ಮಾರಾಟವು ಶೇ 12.05ರಷ್ಟು ಕುಸಿದಂತಾಗಿದೆ ಎಂದು ಭಾರತೀಯ ವಾಹನಗಳ ತಯಾರಿಕಾ ಸಂಘಟನೆ ತಿಳಿಸಿದೆ.
ವಾಹನೋದ್ಯಮ
ಭಾರತೀಯ ವಾಹನಗಳ ತಯಾರಿಕಾ ಸಂಘಟನೆಯ (ಸಿಯಾಮಿ) ದತ್ತಾಂಶದ ಪ್ರಕಾರ, 2019ರ ನವೆಂಬರ್ ತಿಂಗಳಲ್ಲಿ 17,92,415 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 20,38,007 ವಾಹನಗಳು ಮಾರಾಟ ಆಗಿದ್ದವು. ಹೀಗಾಗಿ, ನವೆಂಬರ್ ಮಾಸಿಕದ ಒಟ್ಟಾರೆ ಮಾರಾಟವು ಶೇ 12.05ರಷ್ಟು ಕುಸಿದಂತಾಗಿದೆ.
ಪ್ರಯಾಣಿಕ ವಾಹನಗಳ ಮಾರಾಟ ವಿಭಾಗದಲ್ಲಿ ಶೇ 0.84 ಅಲ್ಪ ಇಳಿಕೆ ಕಂಡಬಂದಿದ್ದು, 2,63,773 ಉತ್ಪನ್ನಗಳು ಖರೀದಿಯಾಗಿವೆ ಎಂದು ಸಿಯಾಮಿ ಹೇಳಿದೆ.