ಕರ್ನಾಟಕ

karnataka

ETV Bharat / business

ಜಾಗತಿಕ ಷೇರು ಮಾರುಕಟ್ಟೆಗಳ ಹಿಂಜರಿಕೆ ನಡುವೆಯೂ ಏರುಗತಿಯಲ್ಲಿ ದಲಾಲ್​​​ ಸ್ಟ್ರೀಟ್​​​​ - ರಿಲಯನ್ಸ್ ಸೆಕ್ಯುರಿಟೀಸ್

ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಹಿನ್ನಡೆಯಾಗಿದ್ದರೂ, ಇಂದು ಮುಂಬೈ ಷೇರು ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ನಡೆಯುತ್ತಿದೆ.

http://10.10.50.80:6060//finalout3/odisha-nle/thumbnail/09-September-2021/13012135_613_13012135_1631162813535.png
http://10.10.50.80:6060//finalout3/odisha-nle/thumbnail/09-September-2021/13012135_613_13012135_1631162813535.png

By

Published : Sep 9, 2021, 12:13 PM IST

ಮುಂಬೈ: ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಕಂಡು ಬಂದ ಹಿಂಜರಿಕೆಯ ನಡುವೆಯೂ ಇಂದು ಉತ್ತಮ ಆರಂಭಿಕ ವಹಿವಾಟು ನಡೆದಿದೆ. ಆದರೆ, ಟಾಪ್ 30 ಷೇರು ಕಂಪನಿಗಳು ಕೊಂಚ ನಷ್ಟ ಅನುಭವಿಸಿವೆ.

ಟೆಕ್ ಮಹೀಂದ್ರಾ ಕಂಪನಿಯು ಸೆನ್ಸೆಕ್ಸ್​ನಲ್ಲಿ ಶೇಕಡಾ 1 ರಷ್ಟು ನಷ್ಟ ಅನುಭವಿಸಿದ್ದು, ಎಂ & ಎಂ, ಡಾ ರೆಡ್ಡಿ, ಆಕ್ಸಿಸ್ ಬ್ಯಾಂಕ್, ಸನ್ ಫಾರ್ಮಾ, ಟೈಟಾನ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಅನಂತರದ ಸ್ಥಾನದಲ್ಲಿವೆ.

ಮತ್ತೊಂದೆಡೆ, ಕೋಟಕ್ ಬ್ಯಾಂಕ್, ಭಾರ್ತಿ ಏರ್‌ಟೆಲ್, ಎಸ್‌ಬಿಐ, ಬಜಾಜ್ ಫಿನ್‌ಸರ್ವ್ ಮತ್ತು ನೆಸ್ಲೆ ಇಂಡಿಯಾ ಗಳಿಕೆಗಳಲ್ಲಿವೆ. ಹಿಂದಿನ ದಿನದ ವಹಿವಾಟಿನಲ್ಲಿ, 30-ಷೇರು ಸೂಚ್ಯಂಕವು 29.22 ಪಾಯಿಂಟ್‌ಗಳಷ್ಟು ಕಡಿಮೆಯಾಗಿ, ದಿನದ ವಹಿವಾಟು 58,250.26 ಅಂಕಗಳಲ್ಲಿ ಕೊನೆಗೊಂಡಿತ್ತು. ನಿಫ್ಟಿ 8.60 ಪಾಯಿಂಟ್‌ಗಳು ಕಡಿಮೆಯಾಗಿ,17,353.50 ಕ್ಕೆ ಇಳಿದಿತ್ತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐಗಳು) ಕ್ಯಾಪಿಟಲ್ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿದ್ದಾರೆ. ಆದ್ದರಿಂದ ತಾತ್ಕಾಲಿಕ ವಿನಿಮಯ ದತ್ತಾಂಶಗಳ ಪ್ರಕಾರ, ಅವರು ಬುಧವಾರ 802.51 ಕೋಟಿ ರೂಪಾಯಿಗಳ ಷೇರುಗಳನ್ನು ಆಫ್‌ಲೋಡ್ ಮಾಡಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ಕಂಡ ನಂತರ ದೇಶೀಯ ಮಾರುಕಟ್ಟೆಗಳು ಇತ್ತೀಚಿನ ವಹಿವಾಟಿನಲ್ಲಿ ಹಿನ್ನಡೆ ಅನುಭವಿಸಿದ್ದವು ಎಂದು ರಿಲಯನ್ಸ್ ಸೆಕ್ಯೂರಿಟೀಸ್​ ಹೇಳಿದೆ. ಏಷ್ಯಾದ ಇತರಡೆಗಳಲ್ಲಿ, ಹಾಂಕಾಂಗ್, ಟೋಕಿಯೋ ಮತ್ತು ಸಿಯೋಲ್‌ನಲ್ಲಿನ ಷೇರುಗಳು ಮಿಡ್-ಸೆಷನ್ ಡೀಲ್‌ಗಳಲ್ಲಿ ನಷ್ಟದೊಂದಿಗೆ ವಹಿವಾಟು ನಡೆಸುತ್ತಿದ್ದು, ಶಾಂಘೈ ಲಾಭದಲ್ಲಿದೆ.

ಅಂತಾರಾಷ್ಟ್ರೀಯ ತೈಲ ಬೆಂಚ್‌ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇಕಡಾ 0.22 ರಷ್ಟು ಏರಿಕೆಯಾಗಿ 72.76 ಡಾಲರ್‌ಗೆ ತಲುಪಿದೆ.

ABOUT THE AUTHOR

...view details