ನವದೆಹಲಿ: ಬ್ಯಾಂಕ್‌ಗಳ ಬಡ್ಡಿ ಆದಾಯಕ್ಕೆ ಕುತ್ತು ತಂದಿರುವ ಕೆಟ್ಟ ಸಾಲ (ಬ್ಯಾಡ್ ಲೋನ್: ಕಂಪನಿ ಅಥವಾ ವ್ಯಕ್ತಿಗಾದ ನಷ್ಟದಿಂದಾಗಿ ಮರು ಪಾವತಿಯಾಗದೆ ಉಳಿದ ಸಾಲ) ವರ್ಗೀಕರಣದ ನಿಯಮಗಳನ್ನು ಸಡಿಲಿಸಲು ಕೇಂದ್ರ ಹಾಗೂ ಕೇಂದ್ರೀಯ ಬ್ಯಾಂಕ್ ಚಿಂತಿಸುತ್ತಿದೆ ಎನ್ನಲಾಗುತ್ತಿದೆ.
ಕೆಟ್ಟ ಸಾಲದಾತರಿಗೆ ಕೇಂದ್ರ, ಆರ್‌ಬಿಐ ಕೊಡಲಿದೆ ಸಿಹಿ ಸುದ್ದಿ... ಆದರೆ, ಕಂಡಿಷನ್ ಅಪ್ಲೈ..!
ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುವಿಕೆಯ ಮೂಲಕ ಏಕಾಏಕಿ ಹಾನಿಗೊಳಗಾದ ಬ್ಯಾಂಕ್ಗಳು, ವಾಯುಯಾನ ಮತ್ತು ಇತರ ಆದ್ಯತಾ ಕ್ಷೇತ್ರಗಳಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕೆಟ್ಟ ಸಾಲ

ಸಾಲವನ್ನು ಕೆಟ್ಟ ಸಾಲ ಎಂದು ವರ್ಗೀಕರಿಸಲು ಸರ್ಕಾರವು 30-60 ದಿನಗಳ ಕಾಲಾವಧಿಯನ್ನು ಹೆಚ್ಚಿಸುವ ಬಗ್ಗೆ ಚರ್ಚಿಸುತ್ತಿದೆ. ಪ್ರಸ್ತುತ 90 ದಿನಗಳವರೆಗೆ ಸಲ್ಲಿಸದ ಸಾಲವನ್ನು ಕೆಟ್ಟ ಸಾಲ ಎಂದು ವರ್ಗೀಕರಿಸಲಾಗಿದೆ.