ಮುಂಬೈ: ಆರೋಗ್ಯಕರವಾದ ಹಣಕಾಸು ಬೆಳವಣಿಗೆಯ ಮೇಲೆ ಬೀರುತ್ತಿರುವ ವ್ಯತಿರಿಕ್ತ ಪರಿಣಾಮಗಳನ್ನು ತಗ್ಗಿಸಲು, ಹಣದುಬ್ಬರದ ಏರಿಕೆ ಇಳಿಸಲು ಹಾಗೂ ಮಾರುಕಟ್ಟೆಯಲ್ಲಿ ಹಣದ ಹರಿವನ್ನು ಸರಾಗವಾಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷದಲ್ಲಿ ಐದನೇ ಬಾರಿಗೆ ಬಡ್ಡಿ ದರವನ್ನು ಕಡಿತಗೊಳಿಸುವ ಸಾಧ್ಯತೆ ಇದೆ.
ಬೈಕ್, ಕಾರು, ಗೃಹ ಸಾಲಗಾರರಿಗೆ ನಾಳೆ ಸಿಗಲಿದೆ ಮತ್ತೊಂದು ಗುಡ್ ನ್ಯೂಸ್..! - Home loan
ಭಾರತೀಯ ರಿಸರ್ವ್ ಬ್ಯಾಂಕ್ನ ವಿತ್ತೀಯ ನೀತಿ ಪರಾಮರ್ಶನ ಸಭೆ ಶುಕ್ರವಾರ ನಡೆಯಲಿದೆ. ಆರ್ಬಿಐನ ಗವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ರೆಪೊ ದರದಲ್ಲಿ ಕಡಿತಗೊಳುವ ಸಾಧ್ಯತೆ ದಟ್ಟವಾಗಿದೆ. ಈಗಿನ ಶೇ ಶೇ 5.40ರವ ರೆಪೊ ದರದಲ್ಲಿ 25 ಬೇಸಿಸ್ ಪಾಯಿಂಟ್( ಮೂಲ ದರ) ಕಡಿತವಾಗುವುದೆಂದು ನಿರೀಕ್ಷಿಸಲಾಗಿದೆ. ಇದು ಕಾರ್ಯಸಾಧ್ಯವಾದರೇ ವಾಹನ, ಗೃಹ ಸಾಲದ ಮೇಲಿನ ಬಡ್ಡಿಯ ದರ ಇಳಿಕೆಯಾಗಲಿದೆ. ಜೊತೆಗೆ ಠೇವಣಿಗಳ ಬಡ್ಡಿದರ ಸಹ ತಗ್ಗಲಿದೆ.
ಆರ್‌ಬಿಐ ತನ್ನ ಪ್ರಮುಖ ಸಾಲ ದರ ಅಥವಾ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಕಡಿತಗೊಳಿಸಿ ಶೇ 5.15ಕ್ಕೆ ಇಳಿಸಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಒಂದು ಕಡಿತ ಜಾರಿಯಾದರೇ ಈ ವರ್ಷದ ಇಲ್ಲಿಯವರೆಗೆ ಸಂಚಿತ ಕಡಿತ 135 ಬೇಸಿಸ್ ಪಾಯಿಂಟ್ಗಳು ಕಡಿತವಾದಂತೆ ಆಗಲಿದೆ. ಇದರಿಂದ ಬ್ಯಾಂಕ್ಗಳು ಪಡೆಯುವ ಸಾಲದ ಮೇಲಿನ ಬಡ್ಡಿದರ ಇಳಿಕೆ ಆಗಲಿದ್ದು, ಠೇವಣಿಗಳ ಮೇಲಿನ ಬಡ್ಡಿ ಸಹ ಕ್ಷೀಣಿಸಲಿದೆ.
ಇಂದು ನಡೆಯಲಿರುವ ಆರ್ಬಿಐನ ಗವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದಲ್ಲಿ ನಡೆಯಲಿರುವ ವಿತ್ತೀಯ ನೀತಿ ಪರಾಮರ್ಶನಾ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ನಡೆದಿದ್ದ ಸಭೆಯಲ್ಲೂ 35 ಬೇಸಿಸ್ ಪಾಯಿಂಟ್ಗಳನ್ನು ಕಡಿತಗೊಳಿಸಿ ಶೇ 5.40ಕ್ಕೆ ಇಳಿಸಲಾಗಿತ್ತು.