ನವದೆಹಲಿ :ಕೊರೊನಾ ವೈರಸ್ ನಿರ್ವಹಣೆ ಬಳಿಕ ಆರ್ಥಿಕತೆ ಚೇತರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
12 ಕೋಟಿ ಉದ್ಯೋಗ, 5 ಟ್ರಿಲಿಯನ್ ಆರ್ಥಿಕತೆ, ಪ್ರಶ್ನಿಸಿದ್ರೆ ಉತ್ತರವೂ ಮಾಯ : ಮೋದಿ ವಿರುದ್ಧ ರಾಹುಲ್ ಟ್ವೀಟ್ ಬಾಣ - Rahul Gandhi Latest news
ಮೋದಿ ಅವರ 'ನಗದು ರಹಿತ ಭಾರತ' ನಿಜವಾಗಿಯೂ ಕಾರ್ಮಿಕ, ರೈತ, ಸಣ್ಣ ವ್ಯಾಪಾರಿಗಳ ಮುಕ್ತ ಭಾರತವಾಗಿದೆ. 2016ರ ನವೆಂಬರ್ 8ರಂದು ತೆಗೆದುಕೊಂಡ ಭೀಕರ ನೋಟು ರದ್ಧತಿ ಪರಿಣಾಮ 2020ರ ಆಗಸ್ಟ್ 31ರಂದು ಅನಾವರಣಗೊಂಡಿತು..
ಇತ್ತೀಚೆಗಷ್ಟೇ, ಮೋದಿ ಅವರ 'ನಗದು ರಹಿತ ಭಾರತ' ನಿಜವಾಗಿಯೂ ಕಾರ್ಮಿಕ, ರೈತ, ಸಣ್ಣ ವ್ಯಾಪಾರಿಗಳ ಮುಕ್ತ ಭಾರತವಾಗಿದೆ. 2016ರ ನವೆಂಬರ್ 8ರಂದು ತೆಗೆದುಕೊಂಡ ಭೀಕರ ನೋಟು ರದ್ಧತಿಯ ಪರಿಣಾಮ 2020ರ ಆಗಸ್ಟ್ 31ರಂದು ಅನಾವರಣಗೊಂಡಿತು ಎಂದು ಟ್ವೀಟ್ ಮಾಡಿದ್ದರು. ಇಂದು ಮತ್ತೆ ಟ್ವೀಟ್ಗಳ ದಾಳಿ ಮುಂದುವರಿಸಿದ್ದಾರೆ.
12 ಕೋಟಿ ಉದ್ಯೋಗಗಳು ಕಾಣ್ಮರೆಯಾಗಿವೆ. 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಕಣ್ಮರೆಯಾಯಿತು. ಸಾಮಾನ್ಯ ನಾಗರಿಕರ ಆದಾಯ ಕಾಣೆಯಾಗಿದೆ. ದೇಶದ ಸಮೃದ್ಧಿ ಮತ್ತು ಭದ್ರತೆಯೂ ಮಾಯವಾಗಿದೆ. ಪ್ರಶ್ನೆ ಕೇಳಿದರೇ ಉತ್ತರ ಮಾಯವಾಗುತ್ತದೆ. ಅಭಿವೃದ್ಧಿಯೂ ಕಾಣುತ್ತಿಲ್ಲ ಎಂದು ರಾಹುಲ್ ಟ್ವಿಟರ್ನಲ್ಲಿ ಆಪಾದಿಸಿದ್ದಾರೆ.