ನವದೆಹಲಿ:ಕಾರ್ಪೊರೇಟ್ ಸಂಸ್ಥೆಗಳಿಗೆ ಬ್ಯಾಂಕ್ಗಳನ್ನು ಸ್ಥಾಪಿಸಲು ಅನುಮತಿ ನೀಡುವ ಆರ್‌ಬಿಐನ ಆಂತರಿಕ ಕಾರ್ಯ ಸಮಿತಿಯ ಪ್ರಸ್ತಾಪವು 'ಬಾಂಬ್ ಶೆಲ್' ಆಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವ್ಯಾಪಾರಿ ಸಂಸ್ಥೆಗಳ ಒಳಗೊಳ್ಳುವಿಕೆಗೆ ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ಮಿತಿಗಳಿಗೆ ಅಂಟಿಕೊಳ್ಳುವುದು ಹೆಚ್ಚು ಉತ್ತಮ ಎಂದು ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಮತ್ತು ಮಾಜಿ ಡೆಪ್ಯುಟಿ ಗವರ್ನರ್ ವೈರಲ್ ಆಚಾರ್ಯ ಜಂಟಿಯಾಗಿ ಬರೆದ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ದೇಶದ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಬ್ಯಾಂಕ್ಗಳನ್ನು ಆರಂಭಿಸಲು ಅನುವಾಗಲು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ತಿದ್ದುಪಡಿ ತರಲು ಮತ್ತು ಬ್ಯಾಂಕ್ಗಳ ಪರವಾನಿಗೆ ನೀತಿಯ ಸಮಗ್ರ ಮರು ಪರಿಶೀಲನೆಗೆ ಭಾರತೀಯ ರಿಸರ್ವ್ ಬ್ಯಾಂಕ್ನ ಆಂತರಿಕ ಸಮಿತಿ ಶಿಫಾರಸು ಮಾಡಿದೆ. ಸಮಿತಿಯ ಈ ಸಲಹೆಯನ್ನು ರಾಜನ್ ಹಾಗೂ ಆಚಾರ್ಯರು ಖಂಡಿಸಿದ್ದಾರೆ.
ಅಸ್ಟ್ರಾಜೆನೆಕಾ ಕೊರೊನಾ ಲಸಿಕೆ ಫಲಿತಾಂಶಕ್ಕೆ ಜಿಗಿದ ಸೆನ್ಸೆಕ್ಸ್ ಗೂಳಿ!
ಸಂಪರ್ಕಿತ ಸಾಲ ನೀಡುವಿಕೆಯ ಇತಿಹಾಸವು ಏಕರೂಪವಾಗಿ ಹಾನಿಕಾರಕವಾಗಿದೆ. ಸಾಲಗಾರನ ಒಡೆತನದಲ್ಲಿ ಇದ್ದಾಗ ಬ್ಯಾಂಕ್ ಉತ್ತಮ ಸಾಲಗಳನ್ನು ಹೇಗೆ ಮಾಡಬಹುದು? ಇಂತಹ ಕ್ರಮವನ್ನು ತೆಗೆದುಕೊಂಡಿದ್ದೆ ಆದಲ್ಲಿ ದೇಶದ ದೊಡ್ಡ ಸಂಸ್ಥೆಗಳ ಕೈಗಳಲ್ಲಿ ಆರ್ಥಿಕ ಮತ್ತು ರಾಜಕೀಯ ಅಧಿಕಾರ ಕೇಂದ್ರೀಕರಿಸಿದಂತೆ ಆಗುತ್ತದೆ. ಒಂದು ವೇಳೆ ಇಂತಹ ಬ್ಯಾಂಕ್ಗಳು ವಿಫಲವಾದಲ್ಲಿ ಅದು ಬೊಕ್ಕಸದ ಮೇಲೆ ದೊಡ್ಡ ಹೊರೆ ಹಾಕಲಿದೆ ಎಂದರು.
ಸಾಂಸ್ಥಿಕ ಸಂಸ್ಥೆಗಳಿಗೆ ಬ್ಯಾಂಕ್ ಸ್ಥಾಪಿಸಲು ಅನುಮತಿಸುವುದು ಒಂದು ರೀತಿಯಲ್ಲಿ ವಿನಾಶಕಾರಿ ಆಗಬಹುದು. ಸಾಲಗಾರನೇ ಮಾಲೀಕನಾಗಿದ್ದರೆ ಏನಾಗಬಹುದು? ಕಾರ್ಪೋರೇಟ್ಗಳನ್ನು ಬ್ಯಾಂಕಿಗ್ ವಲಯಗಳಲ್ಲಿ ಅನುಮತಿಸಿದಲ್ಲಿ ಸಾಕಷ್ಟು ಸಾಲದಲ್ಲಿರುವ ಹಾಗೂ ರಾಜಕೀಯವಾಗಿ ಪ್ರಭಾವಿ ಆಗಿರುವ ಉದ್ಯಮ ಸಂಸ್ಥೆಗಳು ಬ್ಯಾಂಕ್ ಆರಂಭಿಸಲು ಲೈಸನ್ಸ್ಗಾಗಿ ಒತ್ತಡ ಹಾಕುವ ಸಾಧ್ಯತೆ ಇದೆ. ಇಂತಹ ನಡೆ ರಾಜಕಾರಣದಲ್ಲಿ ಹಣ ಬಲವನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.