ಕರ್ನಾಟಕ

karnataka

ETV Bharat / business

ಜಸ್ಟ್ 2​ ನಿಮಿಷಗಳಲ್ಲಿ ಇ - ಪ್ಯಾನ್​ ಕಾರ್ಡ್​​... ಪಡೆಯುವುದು ಹೇಗೆ, ಬೇಕಾದ ದಾಖಲೆ ಏನು?

ಡಿಜಿಟಲೀಕರಣದ ಭಾಗವಾಗಿ ಆದಾಯ ತೆರಿಗೆ ಇಲಾಖೆಯು ಆನ್‌ಲೈನ್‌ನಲ್ಲಿ ಇ- ಪ್ಯಾನ್​ ಕಾರ್ಡ್​ ನೀಡುವ ಸೇವೆಯನ್ನು ಶೀಘ್ರವೆ ಆರಂಭಿಸಲಿದೆ. ಕಾರ್ಡ್​ ಪಡೆಯುವವರು ತಮ್ಮ ಆಧಾರ್ ಕಾರ್ಡ್​ ಸಂಖ್ಯೆ ನಮೂದಿಸಿ ಇ-ಪ್ಯಾನ್ ಕಾರ್ಡ್​ ಪಡೆಯಬಹುದು. ಇದಕ್ಕೆ ಇನ್ನಷ್ಟು ದಿನ ಕಾಯಬೇಕಿದೆ.​

ಪ್ಯಾನ್ ಕಾರ್ಡ್​

By

Published : Nov 7, 2019, 7:50 AM IST

ನವದೆಹಲಿ:ಡಿಜಿಟಲೀಕರಣ ಉತ್ತೇಜಿಸುವ ಭಾಗವಾಗಿ ಆದಾಯ ತೆರಿಗೆ (ಐಟಿ) ಇಲಾಖೆಯು ಆನ್‌ಲೈನ್‌ನಲ್ಲಿ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಅನ್ನು ತ್ವರಿತವಾಗಿ ನೀಡುವ ಸೌಲಭ್ಯ ಆರಂಭಿಸಲು ಸಜ್ಜಾಗಿದೆ. ಇದು ಅರ್ಜಿದಾರರ ಕಾಯುವ ಸಮಯವನ್ನು ಕೊನೆಗೊಳಿಸಲಿದ್ದು, ಅರ್ಜಿದಾರ ತನ್ನ ಆಧಾರ್ ಡೇಟಾಬೇಸ್​​ನ ಮಾಹಿತಿ ಬಳಸಿಕೊಂಡು ಕೆಲವೆ ನಿಮಿಷಗಳಲ್ಲಿ ಪಡೆಯಬಹುದು.

ಮುಂದಿನ ಕೆಲವು ವಾರಗಳಲ್ಲಿ ಈ ಸೇವೆ ಉಚಿತವಾಗಿ ಆರಂಭವಾಗಲಿ ಎಂಬುದು ವರದಿಯಾಗಿದೆ. ಕಾರ್ಡ್​ ಕಳೆದುಕೊಂಡವರು ಹಾಗೂ ಹೊಸದಾಗಿ ಪಡೆಯಲು ಇಚ್ಛಿಸುವವರು ತಮ್ಮ ಆಧಾರ್ ಸಂಖ್ಯೆ ಜೋಡಿಸಿ ನಂತರ ನೋಂದಾಯಿತ ಮೊಬೈಲ್​ ನಂಬರ್​ನ​​ ಒಟಿಪಿ ಸಂಖ್ಯೆ ನಮೊದಿಸಿ ಎಲೆಕ್ಟ್ರಿಕ್ ಪ್ಯಾನ್ ಕಾರ್ಡ್​ ಪಡೆಯಬಹುದು.

ಆಧಾರ್ ಕಾರ್ಡ್​​ನಲ್ಲಿನ ವೈಯಕ್ತಿಕ ಡೇಟಾ ಹಾಗೂ ಕೆಲವು ಮೂಲ ಮಾಹಿತಿ ಹೊರತುಪಡಿಸಿ ಇತರ ಯಾವುದೇ ಡಾಕ್ಯುಮೆಂಟ್ ಅಪ್‌ಲೋಡ್ ಮಾಡುವ ಅಗತ್ಯವಿಲ್ಲ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹಂತಗಳು ಮುಗಿದ ಬಳಿಕ ಅರ್ಜಿದಾರರಿಗೆ ಡಿಜಿಟಲ್ ಸಹಿ ಮಾಡಿದ ಇ-ಪಾನ್ ನೀಡಲಾಗುತ್ತದೆ. ಅರ್ಜಿದಾರರ ಫೋಟೋ ಸೆರೆಹಿಡಿಯಲು ಕ್ಯೂಆರ್ ಕೋಡ್ ಹೊಂದಿರಲಿದೆ. ವರದಿಗಳ ಪ್ರಕಾರ, ಐಟಿ ಇಲಾಖೆಯು ಕಳೆದ ವಾರದಲ್ಲಿ 62,000 ಇ-ಪ್ಯಾನ್​​ಗಳನ್ನು ಬಿಡುಗಡೆ ಮಾಡಿದೆ. ಎಲ್ಲ ತೆರಿಗೆ ಪಾವತಿದಾರರಿಗೆ ಈ ಸೌಲಭ್ಯ ಲಭ್ಯವಾಗುವಂತೆ ಮಾಡಲು ಯೋಜಿಸುತ್ತಿದೆ.

ಇ-ಪ್ಯಾನ್ ಡೌನ್‌ಲೋಡ್ ಮಾಡುವುದು ಹೇಗೆ?

* ಅರ್ಜಿದಾರರು ಯುಟಿಐ-ಐಟಿಎಸ್ಎಲ್ ಮೂಲಕ ಇ-ಪ್ಯಾನ್‌ಗೆ ಅರ್ಜಿ ಸಲ್ಲಿಸಬಹುದು

* ಅಧಿಕೃತ ವೆಬ್‌ಸೈಟ್, ಎನ್‌ಎಸ್‌ಡಿಎಲ್ ಅಥವಾ ಯುಟಿಐಐಟಿಎಸ್ಎಲ್​ಗೆ ಹೋಗಿ ಹೊಸ ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿ ಫಾರ್ಮ್ 49ಎ (Apply for new PAN card (Form 49A) ಆಯ್ಕೆಯನ್ನು ಕ್ಲಿಕ್ ಮಾಡಿ

* ಇ-ಪ್ಯಾನ್ ಜೊತೆಗೆ ಪ್ಯಾನ್ ಕಾರ್ಡ್ ಪ್ರತಿ ಪಡೆಯಲು ಬಯಸಿದರೆ ₹ 107 ಶುಲ್ಕ ಪಾವತಿಸಬೇಕಾಗುತ್ತದೆ. ಇ-ಪ್ಯಾನ್ ಮಾತ್ರ ಅಗತ್ಯವಿದ್ದರೆ ಅದಕ್ಕೆ ₹ 66 ಶುಲ್ಕವಿದೆ

* ಅಗತ್ಯ ಮಾಹಿತಿಯನ್ನು ನಮೂದಿಸಿ (ಪ್ಯಾನ್ ಸಂಖ್ಯೆ, ಆಧಾರ್ ವಿವರ, ಜನ್ಮ ದಿನಾಂಕದಂತೆ)

* ಸಹಿ ಮಾಡಿದ ಚಿತ್ರ ಮತ್ತು ಇತ್ತೀಚಿನ ಛಾಯಾಚಿತ್ರ ನಿಗದಿತ ಸ್ವರೂಪದಲ್ಲಿ ಅಪ್‌ಲೋಡ್ ಮಾಡಿ

* ನೆಟ್ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೆಡಿಟ್ ಅಥವಾ ಡಿಡಿ ಮೂಲಕ ಶುಲ್ಕ ಪಾವತಿಸಿ

* ಪಾವತಿಯ ನಂತರ ಹೆಚ್ಚಿನ ಪತ್ರವ್ಯವಹಾರಕ್ಕಾಗಿ 15 ಅಂಕಿಯ ಸಂಖ್ಯೆ ನೀಡಲಾಗುವುದು

* ಸಂಖ್ಯೆ ಪರಿಶೀಲನೆಯ ನಂತರ ಪ್ಯಾನ್ ಕಾರ್ಡ್ ಅನ್ನು ನಿರ್ದಿಷ್ಟ ವಿಳಾಸಕ್ಕೆ ರವಾನಿಸಲಾಗುತ್ತದೆ

ABOUT THE AUTHOR

...view details