ಕರ್ನಾಟಕ

karnataka

By

Published : Jul 18, 2020, 3:54 PM IST

ETV Bharat / business

ನಕಲಿ​ ಪೈಲೆಟ್​​,​ ಪರವಾನಗಿಯೂ ನಕಲಿ: ವಿಮಾನ ಪ್ರಾಧಿಕಾರವನ್ನೇ ಯಾಮಾರಿಸಿದ ಚಾಲಾಕಿಗಳು!

ಪಾಕಿಸ್ತಾನದಲ್ಲಿ ನಕಲಿ ಪರವಾನಗಿ ದಾಖಲಾತಿಗಳನ್ನು ಹೊಂದಿ ವಿಮಾನ ಹಾರಾಟ ನಡೆಸಿದ್ದಕ್ಕಾಗಿ ಕರ್ತವ್ಯದಿಂದ ಹೊರಗುಳಿದವರ ಸಂಖ್ಯೆ 93ಕ್ಕೆ ಏರಿಕೆಯಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Pak aviation
ಪಾಕಿಸ್ತಾನ ವಾಯುಯಾನ

ಇಸ್ಲಾಮಾಬಾದ್:ಪಾಕಿಸ್ತಾನದ ವಾಯುಯಾನ ಪ್ರಾಧಿಕಾರವು ಸಂಶಯಾಸ್ಪದ ಪರವಾನಗಿಗಳನ್ನು ಹೊಂದಿದ್ದ ಆಪಾದನೆಯಡಿ 15 ಪೈಲಟ್‌ಗಳನ್ನು ಸೇವೆಯಿಂದ ವಜಾಗೊಳಿಸಿದೆ.

ಪಾಕಿಸ್ತಾನದಲ್ಲಿ ನಕಲಿ ಪರವಾನಗಿ ದಾಖಲಾತಿಗಳನ್ನು ಹೊಂದಿ ವಿಮಾನ ಹಾರಾಟ ನಡೆಸಿದ್ದಕ್ಕಾಗಿ ಕರ್ತವ್ಯದಿಂದ ಹೊರಗುಳಿದವರ ಸಂಖ್ಯೆ 93ಕ್ಕೆ ಏರಿಕೆಯಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಅನುಮಾನಾಸ್ಪದ ಪರವಾನಗಿಗಳನ್ನು ಹೊಂದಿದ್ದಕ್ಕಾಗಿ ಕಳೆದ ತಿಂಗಳು ವಿಮಾನಯಾನ ಸಚಿವಾಲಯ, ತನಿಖೆಗೆ ಒಳಪಡಿಸಿದ 262 ಪೈಲೆಟ್‌ಗಳಲ್ಲಿ ಶುಕ್ರವಾರ ಅಮಾನತಾದವರೂ ಇದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಈಗಾಗಲೇ 28 ಇತರ ಪೈಲೆಟ್‌ಗಳ ಪರವಾನಗಿ ರದ್ದುಪಡಿಸಲಾಗಿದೆ. ಒಟ್ಟು 262 ಪೈಲಟ್‌ಗಳು ನಕಲಿ ಪರವಾನಗಿ ಹೊಂದಿರುವವರು ಎಂದು ತನಿಖಾ ಮಂಡಳಿಯ ಪತ್ತೆಹಚ್ಚಿದೆ. ಸರ್ಕಾರದ ಸೂಚನೆಯ ಮೇರೆಗೆ ಅವರನ್ನು ವಜಾಗೊಳಿಸಲಾಗಿದೆ ಎಂದು ವಿಮಾನಯಾನ ವಿಭಾಗದ ವಕ್ತಾರ ಅಬ್ದುಲ್ ಸತ್ತಾರ್ ಖೋಖರ್ ಹೇಳಿದ್ದಾರೆ.

ಈ 262 ಪೈಲಟ್‌ಗಳ ಪೈಕಿ 28 ಜನರ ಪರವಾನಗಿಯನ್ನು ರದ್ದುಗೊಳಿಸಲು ಫೆಡರಲ್ ಕ್ಯಾಬಿನೆಟ್ ಅನುಮೋದಿಸಿದೆ ಎಂದು ಅವರು ಹೇಳಿದರು.

ಈ 28 ಪೈಲಟ್‌ಗಳಿಗೆ ಯಾವುದೇ ಫ್ಲೈಯಿಂಗ್ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಸರಿಯಾದ ಕಾನೂನು ಕಾರ್ಯವಿಧಾನಗಳನ್ನು ತೆಗೆದುಕೊಂಡ ನಂತರ ಪೈಲಟ್‌ಗಳಿಗೆ ವಿಚಾರಣೆಗೆ ಅವಕಾಶ ನೀಡಲಾಯಿತು. ಈ ಬಳಿಕ ಅವರ ಪರವಾನಗಿಗಳನ್ನು ರದ್ದುಪಡಿಸಲಾಗಿದೆ. 93 ಪೈಲಟ್‌ಗಳ ಪರವಾನಗಿಗಳನ್ನು ಪರಿಶೀಲಿಸುವ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ಉಳಿದ 141 ಪ್ರಕರಣಗಳ ತನಿಖೆ ಒಂದು ವಾರದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಪೈಲಟ್‌ಗಳು ನಕಲಿ ಅಥವಾ ಸಂಶಯಾಸ್ಪದ ಪರವಾನಗಿಗಳನ್ನು ಹೊಂದಿದ್ದಾರೆ ಎಂದು ತಿಳಿಸುವ ವರದಿ ಬಹಿರಂಗವಾಗಿದ್ದು ಕಳೆದ ತಿಂಗಳು ಪಾಕಿಸ್ತಾನ ತನ್ನ ಮೂರನೇ ಒಂದು ಭಾಗದಷ್ಟು ಪೈಲೆಟ್‌ಗಳನ್ನು ಕೆಲಸದಿಂದ ತೆಗೆದು ಹಾಕಿತ್ತು.

ABOUT THE AUTHOR

...view details