ನವದೆಹಲಿ: ದೇಶೀಯ ವಾಹನ ವಲಯದಲ್ಲಿ ಯಾವುದೇ ಮಂದಗತಿಯಿಲ್ಲ. ಸರ್ಕಾರದಿಂದ ವಿಶೇಷ ಪ್ಯಾಕೆಜ್ ಪಡೆಯಲು ಮಾತ್ರ ಉದ್ಯಮವು ಅಳಲು ತೋಡಿಕೊಳ್ಳುತ್ತಿವೆ ಎಂದು ಟ್ರೇಡರ್ಸ್ ಸಂಘ ಸಿಎಐಟಿ ಮಂಗಳವಾರ ಹೇಳಿದೆ.
ವಾಹನೋದ್ಯಮ ಕುಸಿದಿಲ್ಲ, ಸರ್ಕಾರದ ಪ್ಯಾಕೆಜ್ಗಾಗಿ ಉದ್ಯಮಿಗಳ ಕೂಗು: ಸಿಎಐಟಿ
ಹೆಚ್ಚಿನ ದರದ ಜಿಎಎಸ್ಟಿಯಂತಹ ಅಂಶಗಳಿಂದ ಆಟೋ ಉದ್ಯಮ ಕುಸಿತ ಕಾಣುತ್ತಿದೆ. ಜಿಎಸ್ಟಿ ಸ್ಲ್ಯಾಬ್ ದರ, ಕೃಷಿ ಸಮಸ್ಯೆ, ನಿಶ್ಚಲ ವೇತನ ಮತ್ತು ದ್ರವ್ಯತೆ ನಿರ್ಬಂಧನೆಗಳಂತಹ ಅಂಶಗಳು ಕುಸಿತಕ್ಕೆ ಕಾರಣವಾಗಿವೆ. ದೇಶಿಯ ವಾಹನ ಕ್ಷೇತ್ರದಲ್ಲಿ ಯಾವುದೇ ಮಂದಗತಿಯಿಲ್ಲ. ಆದರೆ, ಸರ್ಕಾರದಿಂದ ಪ್ಯಾಕೆಜ್ ಪಡೆಯಲು ಉದ್ಯಮಿಗಳು ಆರ್ಥಿಕತ ಕುಸಿತದ ನೆಪ ಹೇಳುತ್ತಿದ್ದಾರೆ ಎಂದು ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ವಿಶ್ಲೇಷಿಸಿ ಆಪಾದಿಸಿದೆ.
ಹೊಸ ವಾಹನಗಳ ಬಿಡುಗಡೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಸಿಎಐಟಿ, ಕಂಪೆನಿಗಳು ಇತ್ತೀಚೆಗೆ ಹೆಚ್ಚಿನ ಸಂಖ್ಯೆಯ ಮುಂಗಡ ಬುಕ್ಕಿಂಗ್ ಪಡೆದುಕೊಂಡಿವೆ. ಅದು ಈ ವಲಯಕ್ಕೆ ಯಾವುದೇ ರೀತಿಯ ಮಂದಗತಿ ಬೆಳವಣಿಗೆಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದೆ.
ಸಿಎಐಟಿಯ ಜನರಲ್ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಮಾತನಾಡಿ, ಜಾಗತಿಕ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಹಬ್ಬದ ಸಮಯದಲ್ಲಿ ಘೋಷಿಸುವ ಬಿಗ್ ಬಿಲಿಯನ್ ಮಾರಾಟವನ್ನು ತಕ್ಷಣದಿಂದಲೇ ನಿಷೇಧಿಸಬೇಕು. ಇ-ಕಾಮರ್ಸ್ ವಲಯದ ಸಂಸ್ಥೆಗಳು ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮಾನದಂಡಗಳನ್ನು ಉಲ್ಲಂಘಿಸುತ್ತಿವೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.