ಕರ್ನಾಟಕ

karnataka

ETV Bharat / business

ನಿರ್ಮಲಾ ಸೀತಾರಾಮನ್​ರ 'ಆತ್ಮ ನಿರ್ಭರ ಭಾರತ' ನಿರ್ಮಾಣದ ಘೋಷಣೆಗಳತ್ತ ದೇಶದ ಚಿತ್ತ

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಯಾವ ಕ್ಷೇತ್ರಗಳು ಮತ್ತು ಉದ್ಯಮಗಳಿಗೆ ಎಷ್ಟು ಮೊತ್ತ ಹಾಗೂ ಹೇಗೆ ನೀಡಲಾಗುವುದು ಎಂಬ ವಿವರಗಳನ್ನು ಬುಧವಾರ ಸಂಜೆ 4 ಗಂಟೆಗೆ ವಿವರಣೆ ನೀಡಲಿದ್ದಾರೆ. ವಿತ್ತ ಸಚಿವರ ಘೋಷಣೆಗಾಗಿ ಇಡೀ ದೇಶವೇ ಎದುರುನೋಡುತ್ತಿದೆ.

Finance Minister
ಹಣಕಾಸು ಸಚಿವೆ

By

Published : May 13, 2020, 3:37 PM IST

ನವದೆಹಲಿ: ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ (ಮಂಗಳವಾರ) ದೇಶವನ್ನುದ್ದೇಶಿಸಿ ಮಾತನಾಡಿ, 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು.

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಯಾವ ಕ್ಷೇತ್ರಗಳು ಮತ್ತು ಉದ್ಯಮಗಳಿಗೆ ಎಷ್ಟು ಮೊತ್ತ ಹಾಗೂ ಹೇಗೆ ನೀಡಲಾಗುವುದು ಎಂಬ ವಿವರಗಳನ್ನು ಇನ್ನೇನು ಕೆಲವೇ ನಿಮಿಷಗಳಲ್ಲಿ ಅಂದರೆ 4 ಗಂಟೆಗೆ ವಿವರಣೆ ನೀಡಿಲಿದ್ದಾರೆ. ವಿತ್ತ ಸಚಿವರ ಘೋಷಣೆಗಾಗಿ ಇಡೀ ದೇಶವೇ ಎದುರುನೋಡುತ್ತಿದೆ.

ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಇಂದು ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದ್ದು ,ಈ ನಿಟ್ಟಿನಲ್ಲಿ ಸಮಾಜದ ವಿವಿಧ ವರ್ಗಗಳಿಗೆ ಪ್ರಧಾನಿ ಮೋದಿ 20 ಲಕ್ಷ ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಿಸಿದ್ದರು. ಅದರ ವಿವರಗಳನ್ನು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೊಡಲಿದ್ದಾರೆ ಎಂದು ಹೇಳಿದ್ದರು.

ಪ್ರಮುಖ ಆರ್ಥಿಕ ಸುಧಾರಣೆಗಳನ್ನು ಸೂಚಿಸಿದ ಪ್ರಧಾನಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂದಿನ ಕೆಲವು ದಿನಗಳವರೆಗೆ ಆರ್ಥಿಕ ಪ್ಯಾಕೇಜ್ ಬಗ್ಗೆ ವಿವರವಾದ ಮಾಹಿತಿಯನ್ನು ಬುಧವಾರದಿಂದ ನೀಡಲಿದ್ದಾರೆ ಎಂದು ಹೇಳಿದರು.

ಈ ಹಿಂದಿನ ಆರ್ಥಿಕ ಪರಿಹಾರ ಪ್ಯಾಕೇಜ್‌ನಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು 1.7 ಲಕ್ಷ ಕೋಟಿ ರೂ. ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಘೋಷಿಸಿದ್ದರು. ಜನ್ ಧನ್​​ ಖಾತೆಯ ಮಹಿಳೆಯರಿಗೆ ಮಾಸಿಕ 500 ರೂ. ವರ್ಗಾವಣೆ, ಸೋಂಕಿತರ ರೋಗ ಆರೈಕೆಯ ನಿರ್ವಹಣೆಯಲ್ಲಿ ತೊಡಗಿರುವ ಆರೋಗ್ಯ ಸಿಬ್ಬಂದಿಗೆ 50 ಲಕ್ಷ ರೂ. ಜೀವ ವಿಮೆ ಯಂತಹ ಹಲವು ಯೋಜನೆ ಘೋಷಿಸಿದ್ದರು.

ABOUT THE AUTHOR

...view details