ಕರ್ನಾಟಕ

karnataka

ಮಂದಗತಿಯ ಆರ್ಥಿಕತೆ: ಮಾರುತಿ ಸುಜುಕಿಯ ಸಾವಿರಾರು ಉದ್ಯೋಗಿಗಳು ಈಗ ಅತಂತ್ರ..!

By

Published : Aug 27, 2019, 12:17 PM IST

ಸದ್ಯ ಪ್ರಮುಖ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿಯ ಸುಮಾರು ಮೂರು ಸಾವಿರ ತಾತ್ಕಾಲಿಕ ಉದ್ಯೋಗಿಗಳ ಒಪ್ಪಂದವನ್ನು ಮುಂದುವರೆಸಿಲ್ಲ ಎಂದು ಸಂಸ್ಥೆಯ ಮುಖ್ಯಸ್ಥ ಆರ್​.ಸಿ.ಭಾರ್ಗವ ತಿಳಿಸಿದ್ದಾರೆ.

ಮಂದಗತಿಯ ಆರ್ಥಿಕತೆ

ನವದೆಹಲಿ: ಮಂದಗತಿಯ ಆರ್ಥಿಕತೆ ದೇಶದ ಆಟೋಮೊಬೈಲ್ ಕ್ಷೇತ್ರಕ್ಕೆ ಬಲವಾದ ಹೊಡೆತ ನೀಡುತ್ತಿದ್ದು, ಬೇಡಿಕೆ ಕುಸಿತವಾದ ಹಿನ್ನೆಲೆಯಲ್ಲಿ ಉತ್ಪಾದನೆಯೂ ಇಳಿಕೆ ಮಾಡಲಾಗಿದೆ. ಇದರ ಜೊತೆಗೆ ಕಾರ್ಮಿಕರ ಉದ್ಯೋಗದ ಮೇಲೂ ಕರಿಛಾಯೆ ಆವರಿಸಿದೆ.

ಸದ್ಯ ಪ್ರಮುಖ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿಯ ಸುಮಾರು ಮೂರು ಸಾವಿರ ತಾತ್ಕಾಲಿಕ ಉದ್ಯೋಗಿಗಳ ಒಪ್ಪಂದವನ್ನು ಮುಂದುವರೆಸಿಲ್ಲ ಎಂದು ಸಂಸ್ಥೆಯ ಮುಖ್ಯಸ್ಥ ಆರ್​.ಸಿ.ಭಾರ್ಗವ ತಿಳಿಸಿದ್ದಾರೆ.

ಮೋದಿ ಸರ್ಕಾರಕ್ಕೆ ಬರೋಬ್ಬರಿ 1.76 ಲಕ್ಷ ಕೋಟಿ ರೂ. ವರ್ಗಾವಣೆ ಮಾಡಲು ಆರ್​ಬಿಐ ನಿರ್ಧಾರ

ಸುರಕ್ಷತಾ ಮಾನದಂಡಗಳು ಹಾಗೂ ಹೆಚ್ಚಿನ ತೆರಿಗೆಗಳು ಕಾರು ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿದೆ. ಇದು ಸದ್ಯದ ನಿಧಾನಗತಿಯ ಆರ್ಥಿಕತೆ ಸಂದರ್ಭದಲ್ಲಿ ಹೊರೆಯಾಗಿ ಪರಿಣಮಿಸಿದೆ ಎಂದು ಆರ್​.ಸಿ.ಭಾರ್ಗವ ಹೇಳಿದ್ದಾರೆ.

ಸತತ ಒಂಭತ್ತನೇ ತಿಂಗಳಿಂದ ಭಾರತದ ಆಟೋಮೊಬೈಲ್ ಕ್ಷೇತ್ರದ ಬೇಡಿಕೆ ಕುಸಿದ ಹಾದಿಯಲ್ಲೇ ಮುಂದುವರೆದಿದ್ದು, ಉದ್ಯೋಗಿಗಳು ಚಿಂತಿತರಾಗಿದ್ದಾರೆ. ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಉತ್ಪಾದನೆಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲು ಹೆಚ್ಚಿನ ಆಟೋಮೊಬೈಲ್​ ಸಂಸ್ಥೆಗಳು ತೀರ್ಮಾನಿಸಿವೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ABOUT THE AUTHOR

...view details