ಕರ್ನಾಟಕ

karnataka

By

Published : Jun 3, 2020, 4:21 PM IST

ETV Bharat / business

ಕಾನೂನು ಪ್ರಕ್ರಿಯೆ ಪೂರ್ಣ: 28 ದಿನಗಳಲ್ಲಿ ಮಲ್ಯ ಕರೆತರುವ ಹೊಣೆ ಮೋದಿ ಸರ್ಕಾರದ್ದು!

ಮೇ 14ರಂದು ವಿಜಯ್​ ಮಲ್ಯ ಅವರು ಯುಕೆ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಕೆಯು ಲಂಡನ್​ ಹೈಕೋರ್ಟ್​ವಜಾಗೊಳಿಸಿದೆ. ಇದರಿಂದ ಹಸ್ತಾಂತರದ ಹಾದಿಗೆ ಇದ್ದ ಅಡ್ಡಿ ತೆರವುಗೊಂಡಂತಾಗಿದೆ. ಈಗ ಮುಂದಿನ 28 ದಿನಗಳಲ್ಲಿ ನರೇಂದ್ರ ಮೋದಿ ಸರ್ಕಾರ ಅವರನ್ನು ಮರಳಿ ಕರೆತರಬೇಕಾಗುತ್ತದೆ. ಮೇ 14ರಿಂದ ಯುಕೆ ನ್ಯಾಯಾಲಯವು ಅವರ ಮನವಿ ತಿರಸ್ಕರಿಸಿ ಈಗಾಗಲೇ 20 ದಿನಗಳಿಗಿಂತ ಹೆಚ್ಚು ಸಮಯವಾಗಿದೆ.

Vijay Mallya
ವಿಜಯ್ ಮಲ್ಯ

ನವದೆಹಲಿ:ಎಲ್ಲ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಪರಾರಿಯಾದ ಉದ್ಯಮಿ ವಿಜಯ್ ಮಲ್ಯ ಅವರನ್ನು ಮುಂದಿನ ದಿನಗಳಲ್ಲಿ ಯಾವಾಗ ಬೇಕಾದರೂ ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ತಮ್ಮನ್ನು ಭಾರತಕ್ಕೆ ಹಸ್ತಾಂತರಿಸುವುದರ ವಿರುದ್ಧ ಇಂಗ್ಲೆಂಡ್​ (ಯುಕೆ) ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಲು ಹೈಕೋರ್ಟ್​ ಮೇ 14ರಂದು ತಡೆಯೊಡ್ಡಿತ್ತು. ಯುಕೆ ಸುಪ್ರೀಂಕೋರ್ಟ್‌ ಮೆಟ್ಟಿಲೇರುವ ಆಸೆಯಲ್ಲಿದ್ದ ಮಲ್ಯಗೆ ತೀವ್ರ ನಿರಾಸೆಯಾಗಿತ್ತು.

"ಮುಂಬರುವ ದಿನಗಳಲ್ಲಿ ನಾವು ಮಲ್ಯವನ್ನು ಶೀಘ್ರದಲ್ಲೇ ಭಾರತಕ್ಕೆ ಕರೆತರುತ್ತೇವೆ'' ಎಂದು ಜಾರಿ ನಿರ್ದೇಶನಾಲಯ ಇಲಾಖೆಯ ಉನ್ನತ ಮೂಲವೊಂದು ಐಎಎನ್‌ಎಸ್‌ಗೆ ತಿಳಿಸಿದೆ.

ಇಂಗ್ಲೆಂಡ್​​ನಲ್ಲಿ ಮಲ್ಯ ಅವರು ಯುಕೆ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಸುವುದನ್ನು ಹೈಕೋರ್ಟ್​ ತಡೆಯೊಡ್ಡಿದೆ. ಅವರನ್ನು ಹಸ್ತಾಂತರಿಸುವ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ನಾವು ಪೂರ್ಣಗೊಳಿಸಿದ್ದೇವೆ. ಸಿಬಿಐ ಮತ್ತು ಇಡಿ ತಂಡಗಳು ಈಗಾಗಲೇ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ಕೆಲಸ ಮಾಡುತ್ತಿವೆ ಎಂಬುದು ತಿಳಿದು ಬಂದಿದೆ.

ಭಾರತಕ್ಕೆ ಹಸ್ತಾಂತರ ಆದ ಬಳಿಕ ಅವರನ್ನು ನಾವೇ ಮೊದಲು ವಶಕ್ಕೆ ಪಡೆದುಕೊಳ್ಳುತ್ತೇವೆ. ಅವರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದು, ನಮ್ಮ ಏಜೆನ್ಸಿ ಎಂದು ಸಿಬಿಐನ ಮೂಲವೊಂದು ಹೇಳಿದೆ.

ಮೇ 14ರಂದು ವಿಜಯ್​ ಮಲ್ಯ ಅವರು ಯುಕೆ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಕೆಯು ಲಂಡನ್​ ಹೈಕೋರ್ಟ್​ವಜಾಗೊಳಿಸಿದೆ. ಇದರಿಂದ ಹಸ್ತಾಂತರದ ಹಾದಿಗೆ ಇದ್ದ ಅಡ್ಡಿ ತೆರವುಗೊಂಡಂತಾಗಿದೆ. ಈಗ ಮುಂದಿನ 28 ದಿನಗಳಲ್ಲಿ ನರೇಂದ್ರ ಮೋದಿ ಸರ್ಕಾರ ಅವರನ್ನು ಮರಳಿ ಕರೆತರಬೇಕಾಗುತ್ತದೆ. ಮೇ 14ರಿಂದ ಯುಕೆ ನ್ಯಾಯಾಲಯವು ಅವರ ಮನವಿ ತಿರಸ್ಕರಿಸಿ ಈಗಾಗಲೇ 20 ದಿನಗಳಿಗಿಂತ ಹೆಚ್ಚು ಸಮಯವಾಗಿದೆ.

ABOUT THE AUTHOR

...view details