ಚೆನ್ನೈ: ವಿಮೆದಾರರ ಷೇರುಗಳ ಮಾರಾಟ ಆರ್ಥಿಕತೆ ಮತ್ತು ದುರ್ಬಲ ವರ್ಗಗಳ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಮಾ ಕ್ಷೇತ್ರದ ನೌಕರರನ್ನು ಪ್ರತಿನಿಧಿಸುವ ಲೈಫ್ ಇನ್ಸುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ (ಎಲ್‌ಐಸಿ) ಮೂರು ಒಕ್ಕೂಟಗಳು ಕೇಂದ್ರಕ್ಕೆ ಮನವಿ ಮಾಡಿವೆ.
ಫೆಡರೇಷನ್ ಆಫ್ ಎಲ್ಐಸಿ ಕ್ಲಾಸ್ I ಆಫೀಸರ್ಸ್ ಅಸೋಸಿಯೇಷನ್ಸ್, ನ್ಯಾಷನಲ್ ಫೆಡರೇಷನ್ ಆಫ್ ಇನ್ಸುರೆನ್ಸ್ ಫೀಲ್ಡ್ ವರ್ಕರ್ಸ್ ಆಫ್ ಇಂಡಿಯಾ ಮತ್ತು ಅಖಿಲ ಭಾರತ ವಿಮಾ ನೌಕರರ ಸಂಘ ಒಗ್ಗೂಡಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಬಗ್ಗೆ ಪತ್ರ ಬರೆದಿವೆ.
ಎಲ್ಐಸಿ ಹೂಡಿಕೆಯ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಹಣಕಾಸು ಸಚಿವಾಲಯವು ನಿನ್ನೆ (ಶುಕ್ರವಾರ) ಸಲಹಾ ಸಂಸ್ಥೆ, ಹೂಡಿಕೆ ಬ್ಯಾಂಕರ್ ಮತ್ತು ಹಣಕಾಸು ಸಂಸ್ಥೆಗಳಿಂದ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಪ್ರಸ್ತಾಪದ ಬಗ್ಗೆ ಸಲಹೆ ನೀಡಲು ಬಿಡ್ ಆಹ್ವಾನಿಸಿತ್ತು.