ಕರ್ನಾಟಕ

karnataka

ETV Bharat / business

ಕಾರು, ಬೈಕ್​ ವಿಮಾದಾರರಿಗೆ ಸಿಹಿ ಸುದ್ದಿ: ವೆಹಿಕಲ್​ ಇನ್ಸುರೆನ್ಸ್​​​​ ಕ್ಲೈಮ್​ ಇನ್ನು ಸರಳ.. ಹೇಗೆ ಗೊತ್ತೆ? - vehicle insurance

ಪ್ರೊಡಕ್ಟ್​ ಸ್ಟ್ರಕ್ಚರ್​​ ಫಾರ್​ ಮೋಟಾರ್​ ಓನ್ ಡ್ಯಾಮೆಜ್​ ಕವರ್​ ಕುರಿತ ಕಾರ್ಯನಿರತ ತಂಡವು ಖಾಸಗಿ ಕಾರುಗಳಿಗೆ ವಿಮೆ ಮಾಡಿದ ಮೊತ್ತವನ್ನು ಎರಡು ವಿಧದಲ್ಲಿ ಲೆಕ್ಕಾಚಾರ ಮಾಡುವಂತೆ ಶಿಫಾರಸು ಮಾಡಿದೆ. ಪ್ರಸ್ತುತ, ವಿಮಾದಾರರು ಕಾರಿನ ಮೌಲ್ಯವನ್ನು ಪಡೆಯಲು ಸಂಕೀರ್ಣ ಪ್ರಕ್ರಿಯೆಗಳನ್ನು ಅನುಸರಿಸುತ್ತಾರೆ. ಸವಕಳಿ ಮತ್ತು ವಿಮೆ ಮಾಡಿದ ಲೆಕ್ಕಾಚಾರವನ್ನು ಸರಳೀಕರಣಗೊಳಿಸಲಾಗುತ್ತಿದೆ ಎಂದು ಕರಡುನಲ್ಲಿ ತಿಳಿಸಲಾಗಿದೆ.

vehicle insurance
ವೆಹಿಕಲ್​ ಇನ್ಸುರನ್

By

Published : Nov 26, 2019, 3:04 PM IST

ನವದೆಹಲಿ:ಖಾಸಗಿ ಕಾರು ಮತ್ತು ದ್ವಿಚಕ್ರ ವಾಹನಗಳು ಸೇರಿದಂತೆ ಮೋಟಾರು ವಾಹನಗಳಿಗೆ ವಿಮಾ ಮೊತ್ತವನ್ನು ಲೆಕ್ಕಹಾಕಲು ಐಆರ್​ಡಿಎಐ, ವಾಹನಗಳ ನೂತನ ಅವಧಿ ಆಧಾರಿತ ಸವಕಳಿ ಸೂತ್ರವನ್ನು ಪ್ರಸ್ತಾಪಿಸಿದೆ.

ಪ್ರೊಡಕ್ಟ್​ ಸ್ಟ್ರಕ್ಚರ್​​​​​​ ಫಾರ್​ ಮೋಟರ್​ ಓನ್ ಡ್ಯಾಮೇಜ್​ ಕವರ್​ ಕುರಿತ ಕಾರ್ಯನಿರತ ತಂಡವು ಖಾಸಗಿ ಕಾರುಗಳಿಗೆ ವಿಮೆ ಮಾಡಿದ ಮೊತ್ತವನ್ನು ಎರಡು ವಿಧದಲ್ಲಿ ಲೆಕ್ಕಾಚಾರ ಮಾಡುವಂತೆ ಶಿಫಾರಸು ಮಾಡಿದೆ.

3 ವರ್ಷಗಳವರೆಗೆ ಹೊಸ ಖಾಸಗಿ ಕಾರುಗಳಿಗೆ ವಿಮೆ ಮಾಡಿದ ಮೊತ್ತವು ಇನ್ವಾಯ್ಸ್ ಮೌಲ್ಯ, ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕಗಳು ಮತ್ತು ತಯಾರಕರಿಂದ ವಿಧಿಸಲಾಗುವ ಎಲ್ಲ ಪರಿಕರಗಳ ಮೌಲ್ಯ ಒಳಗೊಂಡಂತೆ ಪ್ರಸ್ತುತದ ವಾಹನದ ರಸ್ತೆ ಬೆಲೆಯಲ್ಲಿ (ಆನ್​ ರೋಡ್ ಪ್ರೈಸ್​) ನಿಗದಿಪಡಿಸುವಂತೆ ಶಿಫಾರಸಿನಲ್ಲಿ ಹೇಳಲಾಗಿದೆ.

ಮೂರು ವರ್ಷಕ್ಕಿಂತ ಹಳೆಯ ವಾಹನಗಳಿಗೆ ಸವಕಳಿ ಮೌಲ್ಯ ಕ್ರಮೇಣ ಶೇ 40 ರಿಂದ ಶೇ 60 ರವರೆಗೆ 7 ವರ್ಷಗಳವರೆಗೆ ಹೆಚ್ಚಳವಾಗುತ್ತದೆ. 7 ವರ್ಷಗಳ ಹೊರತಾಗಿ ವಿಮಾದಾರ ಮೊತ್ತ ಬಗ್ಗೆ ವಿಮಾ ಕಂಪನಿಯೊಂದಿಗೆ ಮಾತುಕತೆ ನಡೆಸಬಹುದು.

ಪ್ರಸ್ತುತ, ವಿಮಾದಾರರು ಕಾರಿನ ಮೌಲ್ಯವನ್ನು ಪಡೆಯಲು ಸಂಕೀರ್ಣ ಪ್ರಕ್ರಿಯೆಗಳನ್ನು ಅನುಸರಿಸುತ್ತಾರೆ. ಸವಕಳಿ ಮತ್ತು ವಿಮೆ ಮಾಡಿದ ಲೆಕ್ಕಾಚಾರವನ್ನು ಸರಳೀಕರಣಗೊಳಿಸಲಾಗುತ್ತಿದೆ ಎಂದು ಕರಡಿನಲ್ಲಿ ತಿಳಿಸಲಾಗಿದೆ.

ಎರಡನೇ ಆಯ್ಕೆಯು ವಿಮೆಯ ಮೊತ್ತವು (ತಯಾರಕರು ಪಟ್ಟಿಮಾಡಿದ ವಾಹನದ ಪ್ರಸ್ತುತ ಬೆಲೆಯ ಶೇಕಡಾವಾರು ಪ್ರಮಾಣ) ಆರು ತಿಂಗಳವರೆಗೆ ಶೇ 95ರಿಂದ 7 ವರ್ಷಗಳವರೆಗೆ ಶೇ 40ಕ್ಕೆ ಇಳಿಕೆಯಾಗುತ್ತದೆ. ಈ ಸಂದರ್ಭದಲ್ಲಿ ವಿಮೆ ಮೊತ್ತ ಅಥವಾ ಸವಕಳಿ ದರವು ಏಳು ವರ್ಷಗಳ ನಂತರ ನೆಗೋಷಬಲ್ ಆಗಿರಲಿದೆ.

ವಿಮಾ ನಿಯಮಗಳನ್ನು ಗ್ರಾಹಕ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್​ಡಿಎಐ) ದಿಟ್ಟ ಹೆಜ್ಜೆ ಇಡುತ್ತಿದ್ದು, ದ್ವಿಚಕ್ರ ವಾಹನಗಳಿಗೂ ಅವಧಿ ಆಧಾರಿತ ಸವಕಳಿ ನೀತಿಯನ್ನು ಸೂಚಿಸಿದೆ.
ವಿಮೆ ಕಂಪನಿಗಳು ಐಡಿವಿಯನ್ನು (ವಿಮೆಯ ಘೋಷಿತ ಮೌಲ್ಯ) ಲೆಕ್ಕ ಹಾಕುತ್ತವೆ. ಅಂದರೆ ಇನ್‌ ವಾಯ್ಸ್‌ ವ್ಯಾಲ್ಯುನಲ್ಲಿ ಒಂದಿಷ್ಟನ್ನು ಕಡಿತ ಮಾಡುತ್ತವೆ. ಒಟ್ಟು ಮಾರುಕಟ್ಟೆ ದರಕ್ಕೂ ಐಡಿವಿಗೂ ವ್ಯತ್ಯಾಸ ಇರುತ್ತದೆ.

ABOUT THE AUTHOR

...view details