ನವದೆಹಲಿ: ಭಾರತದ ಸೆಪ್ಟೆಂಬರ್ ಮಾಸಿಕದ ಸರಕು ವ್ಯಾಪಾರದ ಕೊರತೆಯು 2.91 ಶತಕೋಟಿ ಡಾಲರ್‌ಗಳಷ್ಟು ದಾಖಲಿಸಿದೆ ಎಂದು ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ.
ಸೆಪ್ಟೆಂಬರ್‌ನಲ್ಲಿ 21,345 ಕೋಟಿ ರೂ.ಗಳಷ್ಟು ಸರಕು ವ್ಯಾಪಾರ ಕೊರತೆ
ಒಟ್ಟಾರೆ ಆಮದು ವಹಿವಾಟು ಸೆಪ್ಟೆಂಬರ್‌ನಲ್ಲಿ ಶೇ 19.60ರಷ್ಟು ಕುಸಿದು 30.31 ಬಿಲಿಯನ್ ಡಾಲರ್‌ಗೆ ತಲುಪಿದೆ. ವರ್ಷದಿಂದ ವರ್ಷಕ್ಕೆ ರಫ್ತು ಶೇ 5.27ರಷ್ಟು ಏರಿಕೆಯಾಗಿ 27.40 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಂಕಿ ಅಂಶಗಳು ಹೇಳಿವೆ.
ವ್ಯಾಪಾರ ಕೊರತೆ
ಒಟ್ಟಾರೆ ವ್ಯಾಪಾರಿ ಆಮದು ಸೆಪ್ಟೆಂಬರ್‌ನಲ್ಲಿ ಶೇ 19.60ರಷ್ಟು ಕುಸಿದು 30.31 ಬಿಲಿಯನ್ ಡಾಲರ್‌ಗೆ ತಲುಪಿದೆ. ವರ್ಷದಿಂದ ವರ್ಷಕ್ಕೆ ರಫ್ತು ಶೇ 5.27ರಷ್ಟು ಏರಿಕೆಯಾಗಿ 27.40 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಂಕಿ ಅಂಶಗಳು ಹೇಳಿವೆ.
ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು ಸರಕುಗಳ ಆಮದು ಶೇ 40.06ರಷ್ಟು ಇಳಿದಿದ್ದು, 148.69 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ರಫ್ತು ಪ್ರಮಾಣ ಹಿಂದಿನ ವರ್ಷದ ಅವಧಿಯಿಂದ ಶೇ 21.43ರಷ್ಟು ಇಳಿದು 125.06 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ.