ಮುಂಬೈ:ಕೋವಿಡ್ ಪ್ರೇರಿತ ತಗ್ಗಿಸುವಿಕೆ ಹೊರತಾಗಿಯೂ ಭಾರತದ ಆರ್ಥಿಕ ಮೂಲಭೂತ ಅಂಶಗಳು ದೃಢವಾಗಿವೆ. ಇದರಿಂದಾಗಿ ಹೂಡಿಕೆದಾರರ ಆಸಕ್ತಿಯನ್ನು ಕಾಪಾಡಿಕೊಳ್ಳುತ್ತಿವೆ ಎಂದು ಮುಂಬೈ ಷೇರು ವಿನಿಮಯದ ಮುಖ್ಯಸ್ಥ ಅಭಿಪ್ರಾಯಪಟ್ಟರು.
ಐಎಎನ್‌ಎಸ್ ಜತೆಗಿನ ಸಂವಾದದಲ್ಲಿ ಬಿಎಸ್‌ಇ ಎಂಡಿ ಮತ್ತು ಸಿಇಒ ಆಶಿಶ್‌ಕುಮಾರ್ ಚೌಹಾಣ್ ಮಾತನಾಡಿ, ಈಕ್ವಿಟಿ ವಿಭಾಗದಲ್ಲಿ ಹೆಚ್ಚುತ್ತಿರುವ ಹೂಡಿಕೆದಾರರ ಭಾಗವಹಿಸುವಿಕೆ ಮತ್ತು ಇತ್ತೀಚಿನ ಕೈಗಾರಿಕಾ ಚೇತರಿಕೆ ಪ್ರವೃತ್ತಿಗಳ ಜೊತೆಗೆ ಭಾರತೀಯ ಆರ್ಥಿಕತೆಯ ಸ್ಥಿತಿಸ್ಥಾಪಕತ್ವ ಸ್ಪಷ್ಟವಾಗಿ ಕಾಣುತ್ತಿವೆ ಎಂದರು.
ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾದ ಮಿತವಾದ ಹೊರತಾಗಿಯೂ ಭಾರತೀಯ ಆರ್ಥಿಕತೆಯ ಮೂಲಭೂತ ಅಂಶಗಳು ದೃಢವಾಗಿ ಉಳಿದಿವೆ. ಜಿಡಿಪಿ ಬೆಳವಣಿಗೆಯು 2020-21ರ ಹಣಕಾಸು ವರ್ಷದ 2ನೇ ತ್ರೈಮಾಸಿಕದಿಂದ ಹಿಮ್ಮೆಟ್ಟುವ ನಿರೀಕ್ಷೆಯಿದೆ ಎಂದು ಹೇಳಿದರು.
ಇತ್ತೀಚಿನ ಕೃಷಿ ಮತ್ತು ಕಾರ್ಮಿಕ ಮಸೂದೆಗಳನ್ನು ಪರಿವರ್ತನೆಯಾಗಿ ನೋಡಲಾಗುತ್ತದೆ. ವಿದೇಶಿ ಹೂಡಿಕೆದಾರರು ನನ್ನ ದೃಷ್ಟಿಯಲ್ಲಿ ಇಂತಹ ಸುಧಾರಣೆಗಳತ್ತ ಗಮನ ಹರಿಸಿದ್ದಾರೆ. ಭಾರತದ ಆರ್ಥಿಕತೆಯು ಕಳೆದ ಕೆಲವು ತಿಂಗಳಲ್ಲಿ ಉತ್ಪಾದನೆ ಮತ್ತು ಸೇವೆಗಳು ಕ್ರಮೇಣ ಸುಧಾರಣೆಯೊಂದಿಗೆ ಸ್ಥಿರತೆಯ ಲಕ್ಷಣಗಳನ್ನ ತೋರಿಸಿವೆ ಎಂದರು.
ಭಾರತದ ಪ್ರಬಲ ಸೇವಾ ವಲಯದಲ್ಲಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಸತತ ನಾಲ್ಕು ತಿಂಗಳ ಸಂಕೋಚನದ ನಂತರ ಸರ್ಕಾರದ ಉತ್ತೇಜಕ ಉತ್ಪಾದನೆಯು ಮತ್ತೆ ವಿಸ್ತರಣೆಗೆ ಮರಳಿದೆ ಎಂದು ಅವರು ಹೇಳಿದರು.