ಸಿಯೋಲ್: ಭಾರತ ಹೊರತುಪಡಿಸಿ ವಿಶ್ವದ ಯಾವುದೇ ದೊಡ್ಡ ರಾಷ್ಟ್ರದ ಆರ್ಥಿಕತೆಯೂ ಶೇ 7ರಷ್ಟು ಬೆಳವಣಿಗೆ ಸಾಧಿಸಿಲ್ಲ. ಮುಂದಿನೆ ಕೆಲವೇ ವರ್ಷಗಳಲ್ಲಿ ಭಾರತದ ಆರ್ಥಿಕತೆ ₹ 35.58 ಲಕ್ಷ ಕೋಟಿಗೆ ಏರಿಕೆ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಿಡಿಸಿದ್ದಾರೆ.
ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಮೋದಿ ಅವರು ಭಾರತ- ಕೊರಿಯಾ ಉದ್ಯಮಿಗಳನ್ನು ಉದ್ದೇಶಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಕ್ತ ಆರ್ಥಿಕ ನೀತಿಯ ಮೂಲಕ ಭಾರತ ಕಳೆದ ನಾಲ್ಕು ವರ್ಷಗಳಲ್ಲಿ ₹ 1.78 ಲಕ್ಷ ಕೋಟಿ ವಿದೇಶಿ ನೇರ ಬಂಡವಾಳ ಮುಖೇನ ಆಕರ್ಷಿಸಿದೆ ಎಂದು ಹೇಳಿದ್ದಾರೆ.
ವಿಶ್ವದ ಸುಲಭ ಉದ್ಯಮ ಸ್ಥಾಪನೆ ಶ್ರೇಣಿಯಲ್ಲಿ ಭಾರತ 77ನೇ ಶ್ರೇಯಾಂಕ ಪಡೆದಿದೆ. ಮುಂದಿನ ವರ್ಷದಲ್ಲಿ ಇದನ್ನು ಟಾಪ್- 50 ಒಳಗೆ ತರುವ ಪ್ರಯತ್ನ ನಡೆದಿವೆ. ಭಾರತ ಸಾಗರೋತ್ತರ ಉದ್ಯೋಮಿಗಳ ಹೂಡಿಕೆಗೆ ಅವಕಾಶಗಳ ಗಣಿಯನ್ನು ಸೃಜಿಸುತ್ತಿದೆ. ಕೇಂದ್ರ ಸರ್ಕಾರವು ಸಹ ಇದಕ್ಕೆ ಬೆಂಬಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.
ದಕ್ಷಿಣ ಕೊರಿಯಾ ಭಾರತದ ಸ್ನೇಹಯುತ ರಾಷ್ಟ್ರ. ಉಭಯ ರಾಷ್ಟ್ರಗಳ ನಡುವಿನ ಪಾರಂಪರಿಕ ಬಂಧನ ಸದೃಢವಾಗಿದೆ. ಭಾರತದಲ್ಲಿ ತಯಾರಿಸ, ಸ್ಟಾರ್ಟ್ ಅಪ್ ಇಂಡಿಯಾ, ಸ್ವಚ್ಛ ಭಾರತ್ ಅಭಿಯಾನ ಯೋಜನೆಗಳಲ್ಲಿ ದಕ್ಷಿಣ ಕೊರಿಯಾದ ಪಾಲುದಾರಿಕೆ ಪ್ರಮುಖವಾಗಿದೆ ಎಂದು ಶ್ಲಾಘಿಸಿದ್ದಾರೆ.
ಭಾರತದ ಪೂರ್ವದತ್ತ ನೋಡು ವಿದೇಶಾಂಗ ನೀತಿಯಲ್ಲಿ ದಕ್ಷಿಣ ಕೊರಿಯಾ ಜೊತೆಗಿನ ಸಂಬಂಧ ಮಹತ್ವದಾಗಿದೆ. ಭಾರತ- ದ. ಕೊರಿಯಾ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿದ್ದು, ಎರಡು ದೇಶಗಳ ನಡುವೆ ಸಾಂಸ್ಕೃತಿಕ ಮತ್ತು ಪಾರಂಪರಿಕ ಸಂಬಂಧಗಳು ಪ್ರಭಲವಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟರು.