ನವದೆಹಲಿ:ಹಲವು ರಾಜ್ಯಗಳಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳ ಆಗುತ್ತಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಕೊರೊನಾ ವೈರಸ್ ಲಸಿಕೆಗಳ ದೇಶೀಯ ಬೇಡಿಕೆ ಈಡೇರಿಸುವತ್ತ ಭಾರತ ಗಮನ ಹರಿಸಲಿದೆ. ಮುಂದಿನ ಕೆಲವು ತಿಂಗಳವರೆಗೆ ಲಸಿಕೆಗಳ ರಫ್ತು ವಿಸ್ತರಣೆ ಆಗುವುದಿಲ್ಲ ಎಂದು ಈ ಬಗ್ಗೆ ಬಲ್ಲ ಮೂಲಗಳು ತಿಳಿಸಿವೆ.
ಎಲ್ಲ ವಾಣಿಜ್ಯ ಒಪ್ಪಂದಮತ್ತು ರಫ್ತು ಬದ್ಧತೆಗಳನ್ನು ಗೌರವಿಸಲಾಗುವುದು. ಸಾಂಕ್ರಾಮಿಕ ರೋಗ ಎದುರಿಸಲು ಭಾರತವು ವಿಶ್ವದಾದ್ಯಂತದ ಹಲವು ದೇಶಗಳಿಗೆ ಸಹಾಯ ಮಾಡುವುದನ್ನು ಮುಂದುವರಿಸಲಿದೆ. ಇಲ್ಲಿಯವರೆಗೆ, ಭಾರತವು ಸುಮಾರು 80 ದೇಶಗಳಿಗೆ 60.4 ಮಿಲಿಯನ್ ಕೊರೊನಾ ವೈರಸ್ ಪ್ರತಿರೋಧಕ ಡೋಸ್ ಪೂರೈಸಿದೆ ಎಂದು ಹೇಳಿದರು.