ಮುಂಬೈ :ಇಂಡಿಯಾ ರೇಟಿಂಗ್ಸ್ ಮತ್ತು ರಿಸರ್ಚ್, ಭಾರತದ 2022ರ ಹಣಕಾಸು ವರ್ಷದ ನೈಜ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇ. 10.1ಕ್ಕೆ ಪರಿಷ್ಕರಿಸಿದೆ.
ಈ ಹಿಂದೆ ಶೇ.10.4ಕ್ಕೆ ಅಂದಾಜಿಸಿತ್ತು. ಕೊರೊನಾ ಎರಡನೇ ಅಲೆಯ ಹೆಚ್ಚಳ ಮತ್ತು ಚುಚ್ಚುಮದ್ದಿನ ನಿಧಾನಗತಿ ಉಲ್ಲೇಖಿಸಿ ವೃದ್ಧಿಯ ದರ ಪರಿಷ್ಕರಿಸಿದೆ.
ದೇಶದ ಬಹುತೇಕ ಭಾಗಗಳು ವೈದ್ಯಕೀಯ ಮೂಲಸೌಕರ್ಯಗಳ ಮೇಲೆ ಭಾರಿ ಒತ್ತಡ ಅನುಭವಿಸುತ್ತಿರುವ ಸಮಯದಲ್ಲಿ, ಮೇ ಮಧ್ಯದ ವೇಳೆಗೆ ಎರಡನೇ ಅಲೆಯು ಕಡಿಮೆಯಾಗಲು ನಿರೀಕ್ಷೆಯಿದೆ ಎಂದು ಸಂಸ್ಥೆ ಹೇಳಿದೆ.
ಈ ತಿಂಗಳ ಆರಂಭದಲ್ಲಿ ರಿಸರ್ವ್ ಬ್ಯಾಂಕ್ ಶೇ.10.5ರಷ್ಟು ಜಿಡಿಪಿ ಬೆಳವಣಿಗೆಯ ಅಂದಾಜು ಕಾಯ್ದುಕೊಂಡಿತ್ತು. ಆದರೆ, ಗವರ್ನರ್ ಶಕ್ತಿಕಾಂತ ದಾಸ್ ಏರುತ್ತಿರುವ ಪ್ರಕರಣಗಳನ್ನು ಚೇತರಿಕೆಗೆ ದೊಡ್ಡ ಅಡೆತಡೆ ಎಂದು ಹೇಳಿದ್ದಾರೆ.
ಇತರ ಏಜೆನ್ಸಿ ಮತ್ತು ವಿಶ್ಲೇಷಕರು ಎರಡನೇ ಅಲೆಯಿಂದಾಗಿ ತಮ್ಮ ಮುನ್ಸೂಚನೆಗಳನ್ನು ಪರಿಷ್ಕರಿಸುತ್ತಿದ್ದಾರೆ. 2021ರ ವಿತ್ತೀಯ ವರ್ಷದಲ್ಲಿ ಆರ್ಥಿಕತೆಯು ಶೇ.7.6ರಷ್ಟು ಕುಗ್ಗಿದೆ ಎಂದು ಅಂದಾಜಿಸಲಾಗಿದೆ.
ಲಾಕ್‌ಡೌನ್‌ಗಳನ್ನು ಸ್ಥಳೀಯವಾಗಿ ವಿಧಿಸಿದ್ದರು ಮೊದಲ ಅಲೆಯ ಗರಿಷ್ಠತೆಯ ಮೂರು ಪಟ್ಟು ದೈನಂದಿನ ಕೇಸ್ ಮುಟ್ಟಿದರೂ, ಎರಡನೇ ಅಲೆಯ ಪ್ರಭಾವವು ಮೊದಲಿನಂತೆ ಅಡ್ಡಿಯಾಗುವುದಿಲ್ಲ ಎಂದು ಇಂಡಿಯಾ ರೇಟಿಂಗ್ಸ್ ಹೇಳಿದೆ.