ಕರ್ನಾಟಕ

karnataka

ETV Bharat / business

ಬೆಣ್ಣೆಯಂತೆ ಕರಗಿದ ಚೀನಾ ಆರ್ಥಿಕತೆ: 3 ದಶಕದ ಕನಿಷ್ಠ ವೃದ್ಧಿ, ಭಾರತ ಹೆಚ್ಚು ಖುಷಿ ಪಡುವಂತಿಲ್ಲ!

ಅಮೆರಿಕದೊಂದಿಗಿನ ವ್ಯಾಪಾರ ಯುದ್ಧದ ಪ್ರಭಾವದ ಹೊರತಾಗಿಯೂ ಚೀನಾದ ಆರ್ಥಿಕ ಬೆಳವಣಿಗೆಯು ಮೂರು ದಶಕಗಳ ಕನಿಷ್ಠ ಮಟ್ಟವಾದ ಶೇ 6.1ಕ್ಕೆ ತಲುಪಿದ ಕಾರಣ ಭಾರತದ ಆರ್ಥಿಕತೆಯು ಇನ್ನೂ ವೇಗವಾಗಿ ಬೆಳೆಯಲಿದೆ ಎಂದು ತಜ್ಞರು ಹೇಳಿದ್ದಾರೆ.

India China
ಭಾರತ ಚೀನಾ

By

Published : Jan 17, 2020, 10:01 PM IST

ನವದೆಹಲಿ: ಅಮೆರಿಕದೊಂದಿಗಿನ ವ್ಯಾಪಾರ ಯುದ್ಧದ ಪ್ರಭಾವದ ಹೊರತಾಗಿಯೂ ಚೀನಾದ ಆರ್ಥಿಕ ಬೆಳವಣಿಗೆಯು ಮೂರು ದಶಕಗಳ ಕನಿಷ್ಠ ಮಟ್ಟವಾದ ಶೇ 6.1ಕ್ಕೆ ಇಳಿದಿದೆ. ತತ್ಪರಿಣಾಮ ಭಾರತದ ಆರ್ಥಿಕತೆಯೂ ಇನ್ನೂ ವೇಗವಾಗಿ ಬೆಳೆಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷ ಚೀನಾದ ಆರ್ಥಿಕತೆಯು ಶೇ 6.1ರಷ್ಟು ಏರಿಕೆಯಾಗಿದ್ದು, ಇದು ಕಳೆದ 29 ವರ್ಷಗಳಲ್ಲಿ ಅತ್ಯಂತ ಕಡಿಮೆ ಬೆಳವಣಿಗೆಯಾಗಿದೆ ಎಂದು ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಹೇಳಿದೆ. ದುರ್ಬಲವಾದ ದೇಶಿಯ ಬೇಡಿಕೆ ಮತ್ತು ಅಮೆರಿಕ ಜೊತೆಗಿನ 18 ತಿಂಗಳ ಸುದೀರ್ಘ ವ್ಯಾಪಾರ ಯುದ್ಧವು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ.

ಇತ್ತೀಚಿನವರೆಗೂ ಚೀನಾಕ್ಕಿಂತ ವೇಗವಾಗಿ ಬೆಳೆಯುತ್ತಿದ್ದ ಭಾರತದ ಜಿಡಿಪಿ 2020ರ ಮಾರ್ಚ್​ಗೆ ಕೊನೆಗೊಳ್ಳುವ ವರ್ಷದಲ್ಲಿ ಶೇ 5ರಷ್ಟು ವಿಸ್ತರಿಸಲಿದೆ ಎಂದು ಅಂದಾಜಿಸಲಾಗಿದೆ. ಇದು 11 ವರ್ಷಗಳಲ್ಲಿ ನಿಧಾನವಾದ ಬೆಳವಣಿಗೆಯಾಗಿರಲಿದೆ.

ಭಾರತದಲ್ಲಿ ಬೆಳವಣಿಗೆಯನ್ನು ಹೆಚ್ಚಿಸಲು ನಿರಂತರ ರಚನಾತ್ಮಕ ಸುಧಾರಣೆಗಳು ಅಗತ್ಯ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ. ಅದರ ಪ್ರಕಾರ, ಹಣಕಾಸಿನ ಉತ್ತೇಜನ ಮತ್ತು ಹಣಕಾಸು ವಲಯದ ಸುಧಾರಣೆಗಳ ಸಂಯೋಜನೆಯು ಹೂಡಿಕೆ ಮತ್ತು ಬಳಕೆಯನ್ನು ಹೆಚ್ಚಿಸಲಿದೆ. ಇದು ಆರ್ಥಿಕ ಬೆಳವಣಿಗೆಯ ಚೇತರಿಕೆಗೆ ಸಹಕಾರಿಯಾಗಲಿದೆ ಎಂದಿದೆ.

ದೇಶಿಯ ನಿರ್ಬಂಧಗಳು ಮತ್ತು ಹೂಡಿಕೆ ಚರಕದ ಮಂದಗತಿಯ ಚಲನೆಯನ್ನು ಗಮನದಲ್ಲಿಟ್ಟುಕೊಂಡು ಚೀನಾದ ಆರ್ಥಿಕ ಬೆಳವಣಿಗೆಯ ಕುಸಿತದಲ್ಲಿದೆ ಎಂದು ನಾವು ಸಮಾಧಾನ ಪಟ್ಟುಕೊಳ್ಳಬಾರದು ಎಂದು ಐಸಿಆರ್​ಎ​ ಪ್ರಧಾನ ಅರ್ಥಶಾಸ್ತ್ರಜ್ಞ ಅದಿತಿ ನಾಯರ್ ಎಚ್ಚರಿಸಿದ್ದಾರೆ.

ವಿಶ್ವಸಂಸ್ಥೆಯ ವರದಿ ಅಧ್ಯಯನವನ್ನು ಬಿಡುಗಡೆ ವೇಳೆ ಆರ್ಥಿಕ ಮತ್ತು ಸಾಮಾಜಿಕ ಆಯೋಗದ ಏಷ್ಯಾ ಮತ್ತು ಪೆಸಿಫಿಕ್ ವಿಭಾಗದ ಮುಖ್ಯಸ್ಥ ನಾಗೇಶ್ ಕುಮಾರ್ ಮಾತನಾಡಿ, ಭಾರತೀಯ ಆರ್ಥಿಕತೆಯ ಮೂಲಭೂತ ಅಂಶಗಳು ಎಂದಿನಂತೆ ಪ್ರಬಲವಾಗಿವೆ ಮತ್ತು ಮುಂಬರುವ ವರ್ಷಗಳಲ್ಲಿ ಈ ಬೆಳವಣಿಗೆ ಆರಂಭವಾಗಬೇಕು ಎಂದು ಹೇಳಿದ್ದಾರೆ.

ABOUT THE AUTHOR

...view details