ಕರ್ನಾಟಕ

karnataka

ETV Bharat / business

90ರ ದಶಕದ ಬಳಿಕ ಅರ್ಧಕ್ಕಿಳಿದ ಭಾರತದ ಬಡತನ: ವಿಶ್ವ ಬ್ಯಾಂಕ್​ ವರದಿ

ಬಡತನ ನಿರ್ಮೂಲನೆ ಮಾಡುವಲ್ಲಿ ಭಾರತ ಸರ್ಕಾರ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಿಶ್ವ ಬ್ಯಾಂಕ್, 1990 ದಶಕದ ಬಳಿಕ ಭಾರತದಲ್ಲಿನ ಬಡತನದ ಪ್ರಮಾಣವು ಅರ್ಧದಷ್ಟು ಇಳಿಕೆಯಾಗಿದೆ ಎಂದಿದೆ. ಭಾರತದ ಜಾಗತಿಕ ಅಭಿವೃದ್ಧಿಯಲ್ಲಿ ಭಾರತ ನಿರ್ಣಾಯಕ ಪಾತ್ರವಹಿಸುತ್ತಿದೆ ಎಂದು ಶ್ಲಾಘಿಸಿದೆ.

ಸಾಂದರ್ಭಿಕ ಚಿತ್ರ

By

Published : Oct 17, 2019, 8:13 PM IST


ವಾಷಿಂಗ್ಟನ್​: 1990 ದಶಕದ ಬಳಿಕ ಭಾರತದಲ್ಲಿನ ಬಡತನದ ಪ್ರಮಾಣವು ಅರ್ಧದಷ್ಟು ಇಳಿಕೆಯಾಗಿದ್ದು, 15 ವರ್ಷಗಳಿಂದ ವಾರ್ಷಿಕ ಶೇ 7ಕ್ಕಿಂತ ಹೆಚ್ಚು ಪ್ರಗತಿಯ ದರ ದಾಖಲಿಸಿದೆ ಎಂದು ವಿಶ್ವ ಬ್ಯಾಂಕ್ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ಬಡತನ ನಿರ್ಮೂಲನೆ ಮಾಡುವಲ್ಲಿ ಭಾರತ ಸರ್ಕಾರ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಿಶ್ವ ಬ್ಯಾಂಕ್, ಜಾಗತಿಕ ಅಭಿವೃದ್ಧಿಯಲ್ಲಿ ಭಾರತ ನಿರ್ಣಾಯಕ ಪಾತ್ರವಹಿಸುತ್ತಿದೆ. ಈ ಪ್ರಗತಿಯ ದರ ಯಥಾವತ್ತಾಗಿ ಮುಂದುವರಿಯಲಿದೆ. ಮುಂದಿನ ಹತ್ತು ವರ್ಷಗಳಲ್ಲಿ ಬಡತನ ತೀವ್ರ ಗತಿಯಲ್ಲಿ ಹೋಗಲಾಡಸಲಿದೆ ಎಂದು ಅಂದಾಜಿಸಿದೆ.

ಭಾರತದ ಪ್ರಸ್ತುತ ತನ್ನಲ್ಲಿ ಇರುವ ಸಂಪನ್ಮೂಲಗಳ ಗರಿಷ್ಠ ಬಳಕೆಯತ್ತ ಗಮನಹರಿಸಬೇಕಿದೆ. ನಗರ ಪ್ರದೇಶದಲ್ಲಿನ ಭೂಮಿಯ ಪರಿಣಾಮಕಾರಿ ಬಳಕೆ, ಕೃಷಿ ಚಟುವಟಿಕೆಗಳಿಗೆ ಆದ್ಯತೆ, ಮೂಲ ಸೌಕರ್ಯಕ್ಕೆ ಒತ್ತು, ಹೂಡಿಕೆಯತ್ತ ದೃಷ್ಟಿನೆಟ್ಟರೇ ಮುಂದಿನ ಹತ್ತು ವರ್ಷಗಳಲ್ಲಿ ಜಿಡಿಪಿ ಶೇ 8ರಿಂದ 10 ಪ್ರತಿಶತ ದಾಟಲಿದೆ ಎಂದು ಸಲಹೆ ನೀಡಿದೆ.

ಉದ್ಯೋಗ ಸೃಷ್ಟಿಯ ಅಗತ್ಯತೆಯ ಬಗ್ಗೆ ಒತ್ತಿ ಹೇಳಿದ ವರ್ಲ್ಡ್​ ಬ್ಯಾಂಕ್, ಪ್ರಸ್ತುತ 30 ಲಕ್ಷ ಉದ್ಯೋಗಗಳು ಸೃಷ್ಟಿ ಆಗುತ್ತಿವೆ. ಆದರೆ, ಪ್ರತಿ ವರ್ಷ ಒಂದು ಕೋಟಿಗೂ ಹೆಚ್ಚು ಮಂದಿ ಉದ್ಯೋಗದ ಅರ್ಹತೆ ಪಡೆಯುತ್ತಿದ್ದಾರೆ. ಅವರಿಗೆ ಉದ್ಯೋಗ ನೀಡುವತ್ತ ಸಹ ಗಮನ ನೀಡಬೇಕು ಎಂದು ತಿಳಿಸಿದೆ.

ABOUT THE AUTHOR

...view details