ಕರ್ನಾಟಕ

karnataka

ಕೋವಿಡ್​ನಿಂದ ಭಾರತದ ಆರ್ಥಿಕತೆಗೆ ಹೆಚ್ಚು ಹಾನಿ: ಐಎಂಎಫ್​

By

Published : Sep 3, 2020, 3:04 PM IST

ಭಾರತದ ಜಿಡಿಪಿ ಶೇ -25.6 ರಷ್ಟು ದಾಖಲಾಗಿದೆ. ಇದು ಜಿ -20 ರಾಷ್ಟ್ರಗಳ ಜಿಡಿಪಿಯಲ್ಲಿ ಅತ್ಯಂತ ಕಡಿಮೆಯಾಗಿದೆ ಎಂದು ಗೀತಾ ಗೋಪಿನಾಥ್ ಹೇಳಿದ್ದಾರೆ.

gita gopinath
gita gopinath

ಹೈದರಾಬಾದ್:2020ರ ಜೂನ್​ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಪ್ರಪಂಚದ ಇತರ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತದ ಒಟ್ಟು ಜಿಡಿಪಿಗೆ ಅತಿ ಹೆಚ್ಚು ಹಾನಿಯಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.

ಭಾರತದ ಜಿಡಿಪಿ ಏಪ್ರಿಲ್-ಜೂನ್ ಅವಧಿಯಲ್ಲಿ ಶೇ -25.6 ರಷ್ಟು ದಾಖಲಿಸಿದ್ದು, ಇದು ಜಿ -20 ರಾಷ್ಟ್ರಗಳ ಜಿಡಿಪಿಯಲ್ಲಿ ಅತ್ಯಂತ ಕಡಿಮೆಯಾಗಿದೆ ಎಂದು ಟ್ವಿಟರ್‌ನಲ್ಲಿ ಗೀತಾ ಗೋಪಿನಾಥ್ ಹಂಚಿಕೊಂಡಿರುವ ಗ್ರಾಫ್ ತಿಳಿಸುತ್ತದೆ.

ಹಾನಿಗೊಳಗಾದ ಆರ್ಥಿಕತೆಯಲ್ಲಿ ಯುಕೆ ಆರ್ಥಿಕತೆಯು ಎರಡನೇ ಸ್ಥಾನದಲ್ಲಿದ್ದು, ಅದರ ಜಿಡಿಪಿ ಶೇ-20.4 ರಷ್ಟಿದೆ. ಯುಎಸ್ ಆರ್ಥಿಕತೆಯು ಶೇ -9.1 ಬೆಳವಣಿಗೆ ದಾಖಲಿಸಿದ್ರೆ, ಯುರೋಪಿಯನ್ ಯೂನಿಯನ್ ಶೇ-11.7 ರಷ್ಟು ಏರಿಕೆಯಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ ಚೀನಾದ ಆರ್ಥಿಕತೆ ಶೇ.12.3ರಷ್ಟು ಜಿಡಿಪಿ ಬೆಳವಣಿಯಾಗಿ ಯಶಸ್ವಿಯಾಗಿದೆ.

ABOUT THE AUTHOR

...view details