ಕರ್ನಾಟಕ

karnataka

ETV Bharat / business

ವಿಜಯ್​ ಮಲ್ಯ ಕಥೆ ಇನ್ನು ಮುಗಿಯಿತು... ಆಸ್ತಿ ಹರಾಜು ಹಾಕಲು ಕೋರ್ಟ್​ ಗ್ರೀನ್​ ಸಿಗ್ನಲ್ - ವಿಜಯ್ ಮಲ್ಯ ಆಸ್ತಿ ಹರಾಜು

ವಿಜಯ್ ಮಲ್ಯ ಅವರಿಗೆ ಸೇರಿದ ಆಸ್ತಿಯನ್ನು ಹರಾಜು ಹಾಕಿ ಸಾಲ ಮರು ವಸೂಲು ಮಾಡಲು ಸ್ಟೇಟ್​ ಬ್ಯಾಂಕ್ ಆಪ್​ ಇಂಡಿಯಾ ಮತ್ತು ಇತರ ಬ್ಯಾಂಕ್​ಗಳಿಗೆ ವಿಶೇಷ ನ್ಯಾಯಾಲಯ (ಪಿಎಂಎಲ್​ಎ ಕೋರ್ಟ್​) ಆದೇಶಿಸಿದೆ.

Vijay Mallya
ವಿಜಯ್ ಮಲ್ಯ

By

Published : Jan 1, 2020, 10:10 PM IST

ನವದೆಹಲಿ: ನಾನಾ ಬ್ಯಾಂಕ್​ಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲಪಡೆದು ಮರುಳಿಸದೇ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ಉದ್ಯಮ ವಿಜಯ್ ಮಲ್ಯ ಅವರ ಆಸ್ತಿ ಹರಾಜು ಹಾಕಲು ನ್ಯಾಯಾಲಯ ಅನುಮತಿ ನೀಡಿದೆ.

ಮಲ್ಯ ಅವರಿಗೆ ಸೇರಿದ ಆಸ್ತಿಯನ್ನು ಹರಾಜು ಹಾಕಿ ಸಾಲ ಮರು ವಸೂಲು ಮಾಡಲು ಸ್ಟೇಟ್​ ಬ್ಯಾಂಕ್ ಆಪ್​ ಇಂಡಿಯಾ ಮತ್ತು ಇತರ ಬ್ಯಾಂಕ್​ಗಳಿಗೆ ವಿಶೇಷ ನ್ಯಾಯಾಲಯ (ಪಿಎಂಎಲ್​ಎ ಕೋರ್ಟ್​) ಆದೇಶಿಸಿದೆ.

ಈಗಾಗಲೇ 13,000 ಕೋಟಿ ರೂ. ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಎಸ್​ಬಿಐ ನೇತೃತ್ವದ ಬ್ಯಾಂಕ್​ಗಳ ಒಕ್ಕೂಟ ಈ ಸ್ವತ್ತುಗಳನ್ನು ಹರಾಜು ಹಾಕಲಿವೆ. ಜನವರಿ 18ರ ನಂತರವೇ ಆದೇಶ ಪಾಲಿಸುವಂತೆ ನ್ಯಾಯಲಯ ಷರತ್ತು ವಿಧಿಸಿದೆ.

ಅಕ್ರಮಣ ಹಣ ವರ್ಗಾವಣೆ ಆರೋಪ ಹೊತ್ತಿರುವ ವಿಜಯ್ ಮಲ್ಯ ಅವರು ಮಾರ್ಚ್​ 2016ರಲ್ಲಿ ಲಂಡನ್​ಗೆ ಪರಾರಿ ಆಗಿದ್ದರು. 2017ರಲ್ಲಿ ಅವರನ್ನು ಬಂಧಿಸಲಾಗಿದ್ದರೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ವಿವಿಧ ಬ್ಯಾಂಕ್​ಗಳಿಗೆ 9,000 ಕೋಟಿ ರೂ. ಸಾಲವನ್ನು ಪಾವತಿಸಬೇಕಿದೆ.

ABOUT THE AUTHOR

...view details