ಕರ್ನಾಟಕ

karnataka

ETV Bharat / business

ಜಾಗತಿಕ ಔಷಧ ಉದ್ಯಮವು ಭಾರತದ ಡಬ್ಲ್ಯುಟಿಒ ಪ್ರಸ್ತಾಪ ಬೆಂಬಲಿಸುತ್ತೆ: ಗೋಯಲ್ ವಿಶ್ವಾಸ

2020ರ ಅಕ್ಟೋಬರ್​​ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಎಲ್ಲಾ ಡಬ್ಲ್ಯುಟಿಒ (ವಿಶ್ವ ವಾಣಿಜ್ಯ ಸಂಸ್ಥೆ) ಸದಸ್ಯರಿಗೆ ಕೋವಿಡ್ -19 ತಡೆಗಟ್ಟುವಿಕೆ, ನಿಯಂತ್ರಣ ಅಥವಾ ಚಿಕಿತ್ಸೆಗೆ ಸಂಬಂಧ ಟ್ರಿಪ್ಸ್ ಒಪ್ಪಂದದ ಕೆಲವು ನಿಬಂಧನೆಗಳ ಅನುಷ್ಠಾನ, ಅರ್ಜಿ ಮತ್ತು ಜಾರಿಗೊಳಿಸುವ ಕುರಿತು ಮನ್ನಾ ಮಾಡುವ ಪ್ರಸ್ತಾಪ ಸಲ್ಲಿಸಿತ್ತು.

Goyal
Goyal

By

Published : Feb 25, 2021, 4:40 PM IST

ನವದೆಹಲಿ: ಸಾಂಕ್ರಾಮಿಕ ರೋಗ ಒಳಗೊಂಡ ಉದ್ದೇಶದಿಂದ ಬೌದ್ಧಿಕ ಆಸ್ತಿಯ ಬಗ್ಗೆ ಬಹುಪಕ್ಷೀಯ ಒಪ್ಪಂದದಲ್ಲಿ ಕೆಲವು ನಿಬಂಧನೆಗಳನ್ನು ಸಡಿಲಗೊಳಿಸುವ ಜಾಗತಿಕ ಔಷಧೀಯ ಉದ್ಯಮವು ವಿಶಾಲ ಹೃದಯದ ನಡೆ ಪ್ರದರ್ಶಿಸುತ್ತಿದೆ ಹಾಗೂ ಡಬ್ಲ್ಯುಟಿಒನಲ್ಲಿ ಭಾರತದ ಪ್ರಸ್ತಾಪ ಬೆಂಬಲಿಸುತ್ತದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಭರವಸೆ ವ್ಯಕ್ತಪಡಿಸಿದ್ದಾರೆ.

2020ರ ಅಕ್ಟೋಬರ್​​ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾವು ಎಲ್ಲಾ ಡಬ್ಲ್ಯುಟಿಒ (ವಿಶ್ವ ವಾಣಿಜ್ಯ ಸಂಸ್ಥೆ) ಸದಸ್ಯರಿಗೆ ಕೋವಿಡ್ -19 ತಡೆಗಟ್ಟುವಿಕೆ, ನಿಯಂತ್ರಣ ಅಥವಾ ಚಿಕಿತ್ಸೆಗೆ ಸಂಬಂಧ ಟ್ರಿಪ್ಸ್ ಒಪ್ಪಂದದ ಕೆಲವು ನಿಬಂಧನೆಗಳ ಅನುಷ್ಠಾನ, ಅರ್ಜಿ ಮತ್ತು ಜಾರಿಗೊಳಿಸುವ ಕುರಿತು ಮನ್ನಾ ಮಾಡುವ ಪ್ರಸ್ತಾಪ ಸಲ್ಲಿಸಿತ್ತು.

ಬೌದ್ಧಿಕ ಆಸ್ತಿ ಹಕ್ಕುಗಳು ಅಥವಾ ಟ್ರಪ್ಸ್​ನ ವ್ಯಾಪಾರ - ಸಂಬಂಧಿತ ಅಂಶಗಳ ಒಪ್ಪಂದವು ಜನವರಿ 1995ರಲ್ಲಿ ಜಾರಿಗೆ ಬಂದಿತ್ತು. ಬೌದ್ಧಿಕ ಆಸ್ತಿ (ಐಪಿ) ಹಕ್ಕುಗಳ ಹಕ್ಕುಸ್ವಾಮ್ಯ, ಕೈಗಾರಿಕಾ ವಿನ್ಯಾಸ, ಪೇಟೆಂಟ್‌ ಮತ್ತು ಬಹಿರಂಗಪಡಿಸದ ಮಾಹಿತಿ ಅಥವಾ ವ್ಯಾಪಾರ ರಹಸ್ಯಗಳ ರಕ್ಷಣೆಯ ಬಹುಪಕ್ಷೀಯ ಒಪ್ಪಂದವನ್ನು ಇದು ಒಳಗೊಂಡಿದೆ.

ಇದನ್ನೂ ಓದಿ: ಬಡವನಿಗೆ ಬರೆ, ಶ್ರೀಮಂತನಿಗೆ ಹೊರೆ: ಜಸ್ಟ್​ 21 ದಿನದಲ್ಲಿ 100 ರೂ. ಜಿಗಿದ ಸಿಲಿಂಡರ್ ಬೆಲೆ!

ಔಷಧ ಉದ್ಯಮವು ಪ್ರಪಂಚದಾದ್ಯಂತ ವೈಶಾಲ್ಯತೆಯನ್ನು ತೋರ್ಪಡಿಸುತ್ತಿದೆ. ಡಬ್ಲ್ಯುಟಿಒನಲ್ಲಿ ಭಾರತವು ಪ್ರಸ್ತಾಪಿಸಿರುವ ಟ್ರಿಪ್ಸ್ ಮನ್ನಾ ಬೆಂಬಲಿಸುತ್ತದೆ ಎಂಬುದು ನಮಗೆ ಖಾತ್ರಿಯಿದೆ. ಇದರಿಂದಾಗಿ ಇಡೀ ಪ್ರಪಂಚವು ಕೋವಿಡ್​-19 ಸಾಂಕ್ರಾಮಿಕದಿಂದ ಹೆಚ್ಚು ವೇಗವಾಗಿ ಹೊರಬರಲು ಮತ್ತು 'ವಿ' ಆಕಾರದ ಚೇತರಿಕೆಗೆ ಮರಳುತ್ತದೆ ಎಂದು ಔಷಧಗಳ ಕುರಿತಾದ ಎಫ್‌ಸಿಸಿಐ ವೆಬ್‌ನಾರ್‌ನಲ್ಲಿ ಗೋಯಲ್​ ಹೇಳಿದರು.

ಕನಿಷ್ಠ ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಆಫ್ರಿಕನ್ ರಾಷ್ಟ್ರಗಳು ಸೇರಿದಂತೆ ಡಬ್ಲ್ಯುಟಿಒ ಸದಸ್ಯ ಆತಿಥೇಯರು ಈ ಪ್ರಸ್ತಾಪ ಬೆಂಬಲಿಸುತ್ತಿರುವುದರಿಂದ ಅಭಿವೃದ್ಧಿ ಹೊಂದಿದ ಪ್ರಪಂಚವು ಒತ್ತಡದಲ್ಲಿದೆ ಎಂದರು.

ವಿಶ್ವ ಆರ್ಥಿಕತೆಗೆ 9 ಟ್ರಿಲಿಯನ್ ಡಾಲರ್ ವೆಚ್ಚವಾಗಬಲ್ಲ ಸಾಂಕ್ರಾಮಿಕ ರೋಗದ ವಿರುದ್ಧ ಜಗತ್ತು ಹೋರಾಡುತ್ತಿದೆ. ಪ್ರವಾಸೋದ್ಯಮ, ಆತಿಥ್ಯ ಮತ್ತು ಪ್ರಯಾಣದಂತಹ ಅನೇಕ ಕ್ಷೇತ್ರಗಳು ಕೋವಿಡ್​ನಿಂದಾಗಿ ಕುಸಿದಿವೆ. ಭಾರತ ಮತ್ತು ದಕ್ಷಿಣ ಆಫ್ರಿಕಾದ ಪ್ರಸ್ತಾಪವು ಹೆಚ್ಚು- ಹೆಚ್ಚು ದೇಶಗಳಿಗೆ ಔಷಧಗಳು ಮತ್ತು ಇತರ ಉತ್ಪನ್ನಗಳಿಗೆ ಸಮಾನ ಪ್ರವೇಶ ಪಡೆಯಲು ಅವಕಾಶ ನೀಡುತ್ತದೆ ಎಂದು ತಿಳಿಸಿದರು.

ABOUT THE AUTHOR

...view details