ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಸಂಗ್ರಹಕ್ಕೆ ಸಂಬಂಧಿಸಿದ ನವೆಂಬರ್ ಮಾಸಿಕದ ವರದಿ ಹೊರಬಿದ್ದಿದೆ.
ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿಯಂತೆ ನವೆಂಬರ್ ತಿಂಗಳಲ್ಲಿ 1,03,492 ಕೋಟಿ ಜಿಎಸ್ಟಿ ಸಂಗ್ರಹವಾಗಿದ್ದು, ಕಳೆದ ಮೂರು ತಿಂಗಳಲ್ಲಿ ಏರಿಕೆ ಕಂಡಿದೆ.

ನವೆಂಬರ್ ತಿಂಗಳ ಸಂಗ್ರಹಣೆ ಜಿಎಸ್ಟಿ ಜಾರಿಗೊಂಡ ಬಳಿಕದ ಮೂರನೇ ಅತಿದೊಡ್ಡ ಸಂಗ್ರಹವಾಗಿದೆ. ಇದೇ ವರ್ಷದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲೂ ಜಿಎಸ್ಟಿ ಸಂಗ್ರಹ 1ಲಕ್ಷ ಕೋಟಿಯ ಗಡಿ ದಾಟಿತ್ತು.
ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ ಲಕ್ಷಕ್ಕಿಂತ ಕೆಳಗೆ ಕುಸಿದಿತ್ತು. ಜಿಎಸ್ಟಿ ಸಂಗ್ರಹದ ಹೆಚ್ಚಳ ಹಾಗೂ ಆರ್ಥಿಕತೆ ವೃದ್ಧಿಗೆ ಕಳೆದ ಕೆಲ ತಿಂಗಳಿನಿಂದ ಹಣಕಾಸು ಸಚಿವಾಲಯ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ.