ನವದೆಹಲಿ: ದೇಶವನ್ನು ಹೆಚ್ಚು ಸ್ವಾವಲಂಬಿಯನ್ನಾಗಿಸುವ ಉದ್ದೇಶದಿಂದ ಆ್ಯಪಲ್ ಮತ್ತು ಆಲ್ಫಾಬೆಟ್ ಒಡೆತನದ ಗೂಗಲ್ಗೆ ಪರ್ಯಾಯವಾಗಿ ತನ್ನದೇ ಆದ ಆ್ಯಪ್ ಸ್ಟೋರ್ ಪ್ರಾರಂಭಿಸಲು ಸರ್ಕಾರ ಚಿಂತಿಸುತ್ತಿದೆ ಎಂದು ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.
ಗೂಗಲ್, ಆ್ಯಪಲ್ಗೆ ಪರ್ಯಾಯವಾಗಿ ಸ್ವಂತ ಆ್ಯಪ್ ಸ್ಟೋರ್ ಆರಂಭಿಸಲು ಮೋದಿ ಚಿಂತನೆ! - ಆ್ಯಪಲ್ ಆ್ಯಪ್ ಸ್ಟೋರ್
ಭಾರತದಲ್ಲಿ ಆ್ಯಂಡ್ರಾಯ್ಡ್ ಶೇ 97ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಆದ್ದರಿಂದ, ಭಾರತೀಯ ಸ್ಟಾರ್ಟ್ಅಪ್‌ಗಳನ್ನು ಮಧ್ಯಪ್ರವೇಶಿಸಿ, ಆ ವಿಭಾಗವನ್ನು ಕೈಗೆತ್ತಿಕೊಳ್ಳಬೇಕು. ಇಂತಹ ಮಹತ್ವದ ಉದ್ದೇಶದಿಂದ ಕೇಂದ್ರ ಸರ್ಕಾರವು ತನ್ನದೇ ಆದ ಆ್ಯಪ್ ಸ್ಟೋರ್ ಅನ್ನು ಪ್ರಾರಂಭಿಸಲು ಚಿಂತಿಸುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.
ಆ್ಯಪ್ ಸ್ಟೋರ್
ಇಂತಹ ಮಹತ್ವದ ಉದ್ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ತನ್ನ ಮೊಬೈಲ್ ಸೇವಾ ಆ್ಯಪ್ ಸ್ಟೋರ್ನ ಸಾಮರ್ಥ್ಯ ಹೆಚ್ಚಿಸಬಹುದು ಎಂದು ಮಾಹಿತಿ ನೀಡದೆ ವರದಿಯೊಂದು ತಿಳಿಸಿದೆ.
ಆ್ಯಂಡ್ರಾಯ್ಡ್ ಭಾರತದಲ್ಲಿ ಶೇ 97ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಆದ್ದರಿಂದ, ಭಾರತೀಯ ಸ್ಟಾರ್ಟ್ಅಪ್‌ಗಳನ್ನು ಮಧ್ಯಪ್ರವೇಶಿಸಿ, ಆ ವಿಭಾಗವನ್ನು ಕೈಗೆತ್ತಿಕೊಳ್ಳಬೇಕು. ಗೂಗಲ್ ಅಥವಾ ಆ್ಯಪಲ್ಗಿಂತ ಭಿನ್ನವಾಗಿ ಆ್ಯಪ್‌ಗಳನ್ನು ಹೋಸ್ಟ್ ಮಾಡಲು ಆ್ಯಪ್ ಸ್ಟೋರ್ ಶೇ 30ರಷ್ಟು ಶುಲ್ಕ ವಿಧಿಸುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.