ಕರ್ನಾಟಕ

karnataka

ETV Bharat / business

ಆರ್ಥಿಕತೆ ಮೇಲೆ ಕೊರೊನಾ ಎಫೆಕ್ಟ್: ಭಯ ಬೇಡ ಎಂದು ಸೀತಾರಾಮನ್ ಅಭಯ - Business News

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸಾರ್ವಜನಿಕ ವಲಯದ ಬ್ಯಾಂಕ್​ಗಳ ವಿಲೀನ ಪ್ರಕ್ರಿಯೆಯು ನಿಗದಿಯಂತೆ ನಡೆಯುತ್ತಿದೆ ಎಂದರು. ಸಾರ್ವಜನಿಕ ವಲಯದ 10 ಸರ್ಕಾರಿ ಬ್ಯಾಂಕ್​ಗಳನ್ನು ವಿಲೀನಗೊಳಿಸುವುದಾಗಿ ಸರ್ಕಾರ ಈ ಹಿಂದೆ ಘೋಷಿಸಿತ್ತು.

FM Nirmala Sitharaman
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

By

Published : Feb 26, 2020, 8:50 PM IST

ನವದೆಹಲಿ: ಕೊರೊನಾ ವೈರಸ್ ಏಕಾಏಕಿ ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದ್ದು, ಕೇಂದ್ರ ಇದನ್ನು ಬಹುಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕ್​ಗಳ ವಿಲೀನ ಪ್ರಕ್ರಿಯೆ ನಿಗದಿಯಂತೆ ನಡೆಯುತ್ತಿದೆ ಎಂದರು. ಸಾರ್ವಜನಿಕ ವಲಯದ 10 ಸರ್ಕಾರಿ ಬ್ಯಾಂಕ್​ಗಳನ್ನು ವಿಲೀನಗೊಳಿಸುವುದಾಗಿ ಸರ್ಕಾರ ಈ ಹಿಂದೆ ಘೋಷಿಸಿತ್ತು.

ಕೊರೊನಾ ವೈರಸ್ ಏಕಾಏಕಿ ಆರ್ಥಿಕತೆಯ ಮೇಲೆ ಉಂಟು ಮಾಡಲಿರುವ ಪರಿಣಾಮವನ್ನು ಆಡಳಿತರೂಢ ಸರ್ಕಾರವು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದರು. ಬ್ಯಾಂಕ್ ವಿಲೀನಗಳ ಬಗ್ಗೆ ಕೇಳಿದಾಗ, ಬ್ಯಾಂಕ್ ವಿಲೀನದ ಬಗ್ಗೆ ಯಾವುದೇ ಅನಿಶ್ಚಿತತೆಯಿಲ್ಲ. ವೇಳಾಪಟ್ಟಿಯ ಪ್ರಕಾರವೇ ಪ್ರಕ್ರಿಯೆಯು ಪ್ರಗತಿಯ ಹಂತದಲ್ಲಿದೆ ಎಂದು ಹೇಳಿದರು.

ABOUT THE AUTHOR

...view details