ನವದೆಹಲಿ: ಡೈರಿ ಕ್ಷೇತ್ರವನ್ನು ಉತ್ತೇಜಿಸಲು 4,558 ಕೋಟಿ ರೂ. ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಇದರಿಂದ ಸುಮಾರು 95 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು.
ಡೈರಿ ಕ್ಷೇತ್ರದ ಉತ್ತೇಜನಕ್ಕೆ 4,558 ಕೋಟಿ ರೂ. ಅನುದಾನ ಕೊಟ್ಟ ಕೇಂದ್ರ - ಶ್ವೇತ ಕ್ರಾಂತಿ
ಡೈರಿ ಕ್ಷೇತ್ರವನ್ನು ಉತ್ತೇಜಿಸಲು 4,558 ಕೋಟಿ ರೂ. ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಲಾಗಿದೆ. ಇದು ಶ್ವೇತ ಕ್ರಾಂತಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅಭಿಪ್ರಾಯಪಟ್ಟರು.
ಪ್ರಕಾಶ್ ಜಾವಡೇಕರ್
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ದೇಶಿತ ಈ ಯೋಜನೆ ಶ್ವೇತ ಕ್ರಾಂತಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಬ್ವೆನ್ಷನ್ ಯೋಜನೆಯಡಿ ಈ ಲಾಭವನ್ನು ಶೇ 2 ರಿಂದ ಶೇ 2.5ಕ್ಕೆ ಹೆಚ್ಚಿಸಲು ಸಚಿವ ಸಂಪುಟ ನಿರ್ಧರಿಸಿದೆ. ಈ ಎರಡೂ ನಿರ್ಧಾರಗಳು ಕೃಷಿ ಸಮುದಾಯಕ್ಕೆ ಅನುಕೂಲವಾಗಲಿವೆ. ಕೃಷಿಕರ ಕಲ್ಯಾಣ ಯೋಜನೆಗಳ ಗುರಿ ಈಡೇರಿಸಲು ನೆರವಾಗಲಿವೆ ಎಂದರು.