ಕರ್ನಾಟಕ

karnataka

ETV Bharat / business

ಕರ್ತವ್ಯ ನಿರತರಾಗಿರುವಾಗಲೇ ಮೃತರಾದರೆ  50 ಲಕ್ಷ ರೂ. ಪರಿಹಾರ - ಕೋವಿಡ್​ ಬಂದರು ಕಾರ್ಮಿಕರ ಪರಿಹಾರ

ಕೊರೊನಾ ವೈರಸ್ ಉದ್ದೇಶಿತ ಈ ಯೋಜನೆಯು 2020ರ ಸೆಪ್ಟೆಂಬರ್​ 30ವರೆಗೆ ಯಾವುದೇ ಸಾವು ಸಂಭವಿಸಿದರೂ ಪರಿಹಾರ ಘೋಷಿಸಿದೆ. ಆ ಬಳಿಕ ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.

port employees
ಬಂದರು

By

Published : Apr 28, 2020, 6:31 PM IST

ನವದೆಹಲಿ: ಕರ್ತವ್ಯ ನಿರ್ವಹಿಸುವಾಗ ಕೊವಿಡ್-19 ಕಾರಣದಿಂದ ಪ್ರಾಣಹಾನಿ ಉಂಟಾದ ಸಂದರ್ಭದಲ್ಲಿ ನೌಕರರ ಅವಲಂಬಿತ ಕುಟುಂಬ ಸದಸ್ಯರಿಗೆ 50 ಲಕ್ಷ ರೂ. ಪರಿಹಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಕೊರೊನಾ ವೈರಸ್ ಉದ್ದೇಶಿತ ಈ ಯೋಜನೆಯು 2020ರ ಸೆಪ್ಟೆಂಬರ್​ 30ವರೆಗೆ ಯಾವುದೇ ಸಾವು ಸಂಭವಿಸಿದರೇ ಪರಿಹಾರ ಘೋಷಿಸಿದೆ. ಆ ಬಳಿಕ ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.

ಕೊವಿಡ್​ನಿಂದಾಗಿ ಪ್ರಾಣ ಹಾನಿ ಉಂಟಾದ ಸಂದರ್ಭದಲ್ಲಿ ಬಂದರು ನೌಕರರು/ಕೆಲಸಗಾರರಿಗೆ ಪರಿಹಾರವನ್ನು ಘೋಷಿಸಲಾಗಿದೆ. ನೇರವಾಗಿ ಬಂದರು ಮತ್ತು ಇತರ ಗುತ್ತಿಗೆ ನೌಕರರಿಂದ ನೇಮಕವಾದ ಗುತ್ತಿಗೆ ಕಾರ್ಮಿಕರು ಸೇರಿದಂತೆ ಎಲ್ಲ ಬಂದರು ನೌಕರರಿಗೆ ಅನ್ವಯಿಸುತ್ತದೆ ಎಂದು ಬಂದರು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತವು 12 ಪ್ರಮುಖ ಬಂದರುಗಳಿವೆ. ದೀನದಯಾಳ್ (ಹಿಂದಿನ ಕಾಂಡ್ಲಾ), ಮುಂಬೈ, ಜೆಎನ್​ಪಿಟಿ, ಮರ್ಮ್​ ಗೋವಾ, ನವ ಮಂಗಳೂರು, ಕೊಚ್ಚಿನ್, ಚೆನ್ನೈ, ಕಾಮರಾಜರ್, ವಿ.ಒ. ಚಿದಂಬರನಾರ್, ವಿಶಾಖಪಟ್ಟಣಂ, ಪರಾದೀಪ್ ಮತ್ತು ಕೋಲ್ಕತ್ತಾ (ಹಲ್ದಿಯಾ) ಬಂದರುಗಳು ದೇಶದಲ್ಲಿವೆ.

ABOUT THE AUTHOR

...view details