ಕರ್ನಾಟಕ

karnataka

ETV Bharat / business

22 ದಿನದಲ್ಲಿ ಬಂತು ₹ 38,211 ಕೋಟಿ ವಿದೇಶಿ ಬಂಡವಾಳ - ಇಕ್ವಿಟಿ

ಜಾಗತಿಕ ಆರ್ಥಿಕತೆಯ ನಿಧಾನಗತಿಯ ಚೇತರಿಕೆ, ಚೀನಾ- ಅಮೆರಿಕದ ವಾಣಿಜ್ಯ ಸಮರದ ತಾತ್ಕಾಲಿಕ ಅಂತ್ಯ, ಯುಎಸ್​ದ ಫೆಡರಲ್​ ರಿಸರ್ವ್​ ಬಡ್ಡಿ ದರದಲ್ಲಿ ಏರಿಕೆ, ನಿರೀಕ್ಷಿತ ಮಟ್ಟದ ಕಾರ್ಪೊರೇಟ್‌ ಫಲಿತಾಂಶಗಳು ಸೇರಿದಂತೆ ಇತರೆ ನಡೆಗಳಿಂದ ವಿದೇಶಿ ಹೂಡಿಕೆಗೆ ಉತ್ತೇಜನ ನೀಡಿವೆ; ಹೂಡಿಕೆ ತಜ್ಞರ ಅಭಿಮತ

ವಿದೇಶಿ ಹೂಡಿಕೆ

By

Published : Mar 24, 2019, 5:25 PM IST

ನವದೆಹಲಿ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್​ಪಿಐ) ಮಾರ್ಚ್​ 1 ರಿಂದ 22ರವರೆಗೆ ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ₹ 38,211 ಕೋಟಿ ಹಣ ತೊಡಗಿಸಿದ್ದಾರೆ.

ಫೆಬ್ರವರಿ ತಿಂಗಳಲ್ಲಿ ವಿದೇಶಿ ಹೂಡಿಕೆದಾರರು ಇಕ್ವಿಟಿ ಮತ್ತು ಸಾಲದ ಬಂಡವಾಳ ಮಾರುಕಟ್ಟೆಯಲ್ಲಿ ₹ 11,182 ಕೋಟಿ ವಿನಿಯೋಗಿಸಿದ್ದರು. ಜಾಗತಿಕ ಮಟ್ಟದಲ್ಲಿ ವಿವಿಧ ಕೇಂದ್ರೀಯ ಬ್ಯಾಂಕ್​ಗಳು ತಮ್ಮ ವಿತ್ತೀಯ ನೀತಿಯ ದೃಷ್ಟಿಕೋನದಲ್ಲಿ ಬದಲಾವಣೆ ಮಾಡಿಕೊಂಡಿದ್ದರಿಂದ ಒಳ ಹರಿವು ಹೆಚ್ಚಳಕ್ಕೆ ಕಾರಣವಾಗಿದೆ. ಇದು ಮಾರ್ಚ್​ ತಿಂಗಳಲ್ಲಿ ಹೆಚ್ಚಿನ ಹೂಡಿಕೆಗೆ ನೆರವಾಗಿದೆ.

ಹೂಡಿಕೆ ದತ್ತಾಂಶದ ಪ್ರಕಾರ, ಇಕ್ವಿಟ್​ ಮಾರುಕಟ್ಟೆಯಲ್ಲಿ ₹ 27,424.18 ಕೋಟಿ ಹೂಡಿಕೆ ಆಗಿದ್ದರೇ, ಸಾಲದ ಮಾರುಕಟ್ಟೆಯ ನಿವ್ವಳ ಹೂಡಿಕೆ ₹ 10,787.02 ಕೋಟಿ ಮಾರ್ಚ್​ 1- 22ರ ನಡುವೆ ಹರಿದು ಬಂದಿದೆ. ಒಟ್ಟು ಎಫ್​ಪಿಐ ಪ್ರಮಾಣ ₹ 38,211.20ಗೆ ತಲುಪಿದೆ.

ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಇಂಧನ ಬೆಲೆಯ ಸ್ಥಿರ, 2019ರ ಕ್ಯಾಲೆಂಡರ್​ ವರ್ಷವನ್ನು ಅಸ್ಥಿರತೆಯೊಂದಿಗೆ ಸ್ವಾಗತಿಸಿದ ಜಾಗತಿಕ ಆರ್ಥಿಕತೆಯು ಚೇತರಿಕೆಯ ಹಾದಿಗೆ ಮರುಳಿದೆ. ಹೀಗಾಗಿ, ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯತ್ತ ಆತ್ಮವಿಶ್ವಾಸದಿಂದ ಹಿಮ್ಮುಖವಾಗಿದ್ದಾರೆ. ಲೋಕಸಭಾ ಚುನಾವಣೆಯ ನಂತರ ಸ್ಥಿರ ಸರ್ಕಾರ ಆಡಳಿತಕ್ಕೆ ಬರಲಿದೆ ಎಂಬ ಹೂಡಿಕೆದಾರರ ಮನೋಭಾವ ಇದಕ್ಕೆ ಸಹಾಯಕವಾಗಿದೆ ಎಂದು ಹೂಡಿಕೆ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ವಿದೇಶಿ ಬಂಡವಾಳ ಒಳಹರಿವು ಸಕಾರಾತ್ಮಕ ಬೆಳವಣಿಗೆಯಾಗಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಈ ತಿಂಗಳ ಹೂಡಿಕೆ ಪ್ರಮಾಣ ಹೆಚ್ಚಾಗಿದೆ. ದೇಶದ ಷೇರುಪೇಟೆಯ ಸ್ಥಿತಿ ಅನಿಶ್ಚಿತಯಿಂದ ಹೊರಬಂದಿದೆ. ವಿದೇಶಿ ಹೂಡಿಕೆದಾರರು ಎಚ್ಚರಿಕೆಯಿಂದ ವಹಿವಾಟು ನಡೆಸುತ್ತಿದ್ದಾರೆ ಎನ್ನುವುದನ್ನು ಇದು ಸೂಚಿಸುತ್ತಿದೆ.

ABOUT THE AUTHOR

...view details