ಕರ್ನಾಟಕ

karnataka

ETV Bharat / business

ಉದ್ಯಮಿಗಳ ಜತೆ ಸೀತಾರಾಮನ್​ ಬಜೆಟ್ ಪೂರ್ವ ಮಾತುಕತೆ: ಯಾರೆಲ್ಲ ಉದ್ಯಮಿಗಳು ಭಾಗಿ?

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಣಕಾಸು ಸಚಿವಾಲಯ ಆಯೋಜಿಸಿದ್ದ ಸಭೆಯಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕಿನ ಉದಯ್ ಕೊಟಕ್, ಬಯೋಕಾನ್‌ನ ಕಿರಣ್ ಮಜುಂದಾರ್ ಶಾ ಸೇರಿದಂತೆ ಇಂಡಿಯಾ ಇಂಕಾ ಹಲವರು ಭಾಗವಹಿಸಿದ್ದರು.

Nirmala Sitharaman
ನಿರ್ಮಲಾ ಸೀತಾರಾಮನ್

By

Published : Dec 14, 2020, 3:22 PM IST

ನವದೆಹಲಿ:2021-22ನೇ ಸಾಲಿನ ಕೇಂದ್ರ ಬಜೆಟ್ ತಯಾರಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಉನ್ನತ ಕೈಗಾರಿಕೋದ್ಯಮಿಗಳ ಜತೆ ಬಜೆಟ್ ಪೂರ್ವ ಸಮಾಲೋಚನೆ ನಡೆಸಿದರು.

ಈ ವರ್ಷದ ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ಹಾನಿಗೊಳಗಾದ ಆರ್ಥಿಕತೆಯ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವಂತಹ ಹಾದಿಯನ್ನು ಕಂಡುಕೊಳ್ಳಲು ಹಾಗೂ ಸುಧಾರಣೆಯ ನಿರ್ಣಾಯಕ ಕ್ಷೇತ್ರಗಳನ್ನು ಗುರುತಿಸಲು ಉದ್ಯಮ ಮತ್ತು ಸರ್ಕಾರ ಒಟ್ಟಿಗೆ ಸಾಗುವ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.

ಉದ್ಯಮದ ಚಿಂತನೆಗಳು 2022ರ ಆರ್ಥಿಕ ವರ್ಷದಲ್ಲಿ ಸರ್ಕಾರದ ಬಜೆಟ್ ಮಂಡನೆಗೆ ಅಮೂಲ್ಯವಾದ ಒಳಹರಿವುಗಳಾಗಿವೆ.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆಯೋಜಿಸಿದ್ದ ಸಭೆಯಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕಿನ ಉದಯ್ ಕೊಟಕ್, ಬಯೋಕಾನ್‌ನ ಕಿರಣ್ ಮಜುಂದಾರ್ ಶಾ ಸೇರಿದಂತೆ ಇಂಡಿಯಾ ಇಂಕಾ ಹಲವರು ಭಾಗವಹಿಸಿದ್ದರು.

ಕೋವಿಡ್​​ ಸಾಂಕ್ರಾಮಿಕವು ಅಸಮಾನತೆ, ಅನ್ಯಾಯಗಳಿಗೆ ಭೂತಗನ್ನಡಿ: ಅಜೀಮ್​ ಪ್ರೇಮ್​ಜಿ

ಹಣಕಾಸು ಸಚಿವರೊಂದಿಗೆ ಹಣಕಾಸು ಕಾರ್ಯದರ್ಶಿ ಎ.ಬಿ. ಪಾಂಡೆ, ಡಿಇಎ ಕಾರ್ಯದರ್ಶಿ ತರುಣ್ ಬಜಾಜ್, ಮುಖ್ಯ ಆರ್ಥಿಕ ಸಲಹೆಗಾರ ಕೆ.ಸುಬ್ರಮಣಿಯನ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details