ಕರ್ನಾಟಕ

karnataka

ETV Bharat / business

ಬಜೆಟ್ ತಯಾರಿ, ಲಸಿಕೆ ಖುಷಿಯಲ್ಲಿರುವ ಮೋದಿ ಸರ್ಕಾರ: ₹ 16 ಲಕ್ಷ ಕೋಟಿಯತ್ತ ನೋಡಿ ಎಂದ ತಜ್ಞರು! - ನಗದು ಕೊರತೆ ಇತ್ತೀಚಿನ ಕೊರತೆ

ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿಯ ಶೇ 3.5 ರ ಬಜೆಟ್ ಅಂದಾಜಿನ ಪ್ರಕಾರ ಇದು 100 ಪ್ರತಿಶತದಷ್ಟು ಹೆಚ್ಚಾಗುತ್ತದೆ. 2020ರ ಫೆಬ್ರವರಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ 2020-21ರಲ್ಲಿ ಸರ್ಕಾರವು ಹಣಕಾಸಿನ ಕೊರತೆಯನ್ನು 7.96 ಲಕ್ಷ ಕೋಟಿ ರೂ. ಅಥವಾ ಜಿಡಿಪಿಯ ಶೇ 3.5ರಷ್ಟು ಇರಿಸಿಕೊಂಡಿದೆ. ಇದರ ದ್ವಿಗುಣ ಎಂದರೇ 15.92‬ ಲಕ್ಷ ಕೋಟಿ ರೂ.ನಷ್ಟಾಗುತ್ತದೆ.

Fiscal deficit
ನಗದು ಕೊರತೆ

By

Published : Jan 9, 2021, 1:09 PM IST

ನವದೆಹಲಿ: ಭಾರತ ಸೇರಿದಂತೆ ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ವೈರಸ್​ ನಿಯಂತ್ರಣಕ್ಕೆ ಲಸಿಕೆ ಲಭ್ಯವಾಗಿದೆ. ಭಾರತೀಯ ಔಷಧ ನಿಯಂತ್ರಕರು ಸಹ ತುರ್ತು ನಿರ್ಬಂಧಿತ ಬಳಕೆಗಾಗಿ ಎರಡು ಲಸಿಕೆಗಳಿಗೆ ಅನುಮೋದನೆ ನೀಡಿದ್ದಾರೆ. ಇದರಿಂದ ದೇಶದ ಹಲವು ರಾಜ್ಯಗಳಲ್ಲಿ ಲಸಿಕೆ ತಾಲೀಮು ನಡೆಯುತ್ತಿದೆ. ಮೊತ್ತೊಂದು ಕಡೆ 2021-22ರ ಬಜೆಟ್ ಮಂಡನೆಗೆ ವಿತ್ತ ಸಚಿವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಆರ್ಥಿಕ ತಜ್ಞರು ಕೇಂದ್ರ ಸರ್ಕಾರಕ್ಕೆ ನಗದು ಕೊರತೆಯ ಎಚ್ಚರಿಕೆ ರವಾನಿಸಿದ್ದಾರೆ.

ಕೋವಿಡ್​ -19 ಬಿಕ್ಕಟ್ಟು ತಂದೊಡ್ಡಿದ ಆದಾಯ ಸಂಗ್ರಹಣೆ ಮಿತದಿಂದಾಗಿ ಭಾರತದ ಹಣಕಾಸಿನ ಕೊರತೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿಯ ಶೇ 7.5ರಷ್ಟಿದೆ ಎಂದು ತಜ್ಞರು ತಿಳಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿಯ ಶೇ 3.5 ರ ಬಜೆಟ್ ಅಂದಾಜಿನ ಪ್ರಕಾರ ಇದು 100 ಪ್ರತಿಶತದಷ್ಟು ಹೆಚ್ಚಾಗುತ್ತದೆ. 2020ರ ಫೆಬ್ರವರಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ 2020 - 21ರಲ್ಲಿ ಸರ್ಕಾರವು ಹಣಕಾಸು ಕೊರತೆಯನ್ನು 7.96 ಲಕ್ಷ ಕೋಟಿ ರೂ. ಅಥವಾ ಜಿಡಿಪಿಯ ಶೇ 3.5ರಷ್ಟು ಇರಿಸಿಕೊಂಡಿದೆ. ಇದರ ದ್ವಿಗುಣ ಎಂದರೇ 15.92‬ ಲಕ್ಷ ಕೋಟಿ ರೂ.ನಷ್ಟಾಗುತ್ತದೆ.

ಕೋವಿಡ್​-19 ಬಿಕ್ಕಟ್ಟಿನಿಂದ ಹಣಕಾಸಿಗಾಗಿ ಕಷ್ಟಪಟ್ಟ ಕೇಂದ್ರ ಸರ್ಕಾರವು ಮೇ ತಿಂಗಳಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ತನ್ನ ಮಾರುಕಟ್ಟೆ ಸಾಲ ಯೋಜನೆಯನ್ನು ಶೇ 50ರಷ್ಟು ಹೆಚ್ಚಿಸಿ 12 ಲಕ್ಷ ಕೋಟಿ ರೂ. ತೆಗೆದುಕೊಂಡು ಹೋಯಿತು.

ಮಾರ್ಚ್‌ನಲ್ಲಿ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಹಣಕಾಸಿನ ಕೊರತೆಯು ಶೇ 7.5ಕ್ಕೆ ತಲುಪುವ ನಿರೀಕ್ಷೆಯಿದೆ. ನಾವು ಹಣಕಾಸಿನ ಕೊರತೆಯನ್ನು 14.5 ಲಕ್ಷ ಕೋಟಿ ರೂ. ಅಥವಾ ಜಿಡಿಪಿಯ ಶೇ 7.5ರಷ್ಟು ಅಂದಾಜಿಸಿದ್ದೇವೆ ಎಂದು ಐಸಿಆರ್‌ಎಯ ಪ್ರಧಾನ ಅರ್ಥಶಾಸ್ತ್ರಜ್ಞ ಅದಿತಿ ನಾಯರ್ ಹೇಳಿದರು.

ಸಣ್ಣ ಉಳಿತಾಯ ಮತ್ತು ಖಜಾನೆ ಮಸೂದೆಯು 12 ಲಕ್ಷ ಕೋಟಿ ರೂ. ಸಾಲ ಪಡೆಯುವ ಕಾರ್ಯಕ್ರಮ ಹೊರತುಪಡಿಸಿ ಬಾಕಿ ಉಳಿಸಿಕೊಳ್ಳಲಿದೆ ಎಂದರು.

2020-21ನೇ ಸಾಲಿನಲ್ಲಿ ನಾಮಮಾತ್ರ ಜಿಡಿಪಿ ಅಥವಾ ಜಿಡಿಪಿ 194.82 ಲಕ್ಷ ಕೋಟಿ ರೂ. ತಲುಪುವ ಸಾಧ್ಯತೆಯಿದೆ. 2019-20ನೇ ಸಾಲಿನ ಜಿಡಿಪಿಯ ತಾತ್ಕಾಲಿಕ ಅಂದಾಜು 203.40 ಲಕ್ಷ ಕೋಟಿ ರೂ. ಎಂಬುದು 2020ರ ಮೇ 31ರಂದು ಬಿಡುಗಡೆಯಾದ ಅಂಕಿ - ಅಂಶಗಳಿಂದ ತಿಳಿದುಬರುತ್ತದೆ.

ಇದನ್ನೂ ಓದಿ: 2 ಲಕ್ಷದ ತನಕ ಚಿನ್ನಾಭರಣ ಖರೀದಿಗೆ ಪಾನ್​, ಆಧಾರ್ ಕಡ್ಡಾಯವೇ? ಹಣಕಾಸು ಸಚಿವಾಲಯ ಹೇಳುವುದೇನು?

2020-21ರ ಅವಧಿಯಲ್ಲಿ ನಾಮಮಾತ್ರ ಜಿಡಿಪಿಯಲ್ಲಿನ ಬೆಳವಣಿಗೆಯನ್ನು ಮೈನಸ್​ ಶೇ 4.2ರಷ್ಟು ಎಂದು ಅಂದಾಜಿಸಲಾಗಿದೆ. ಮೂಲ ಬೆಲೆಯಲ್ಲಿ ನಾಮ ಮಾತ್ರ ಜಿವಿಎ 2020-21ರಲ್ಲಿ 175.77 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, 2019-20ರಲ್ಲಿ 183.43 ಲಕ್ಷ ಕೋಟಿ ರೂ.ಗಳಷ್ಟಿದ್ದರೆ, ಶೇ 4.2ರಷ್ಟು ಸಂಕೋಚವಾಗಿದ್ದನ್ನು ತೋರಿಸುತ್ತದೆ.

ಈ ಹಿಂದೆ 12 ಲಕ್ಷ ಕೋಟಿ ರೂ.ಗಳಿಗೆ ಘೋಷಿಸಿದ್ದಕ್ಕಿಂತ ದೊಡ್ಡ ಪ್ರಮಾಣದ ಹಣಕಾಸು ಕೊರತೆಯನ್ನು ಕೇಂದ್ರ ಸರ್ಕಾರ ಭರಿಸಬೇಕಾಗಬಹುದು ಎಂದು ಇವೈ ಇಂಡಿಯಾದ ಮುಖ್ಯ ನೀತಿ ಸಲಹೆಗಾರ ಡಿ ಕೆ ಶ್ರೀವಾಸ್ತವ ಹೇಳಿದ್ದಾರೆ.

2020-21ರ ನಾಮಮಾತ್ರ ಜಿಡಿಪಿಯ ಶೇ 7ಕ್ಕಿಂತ ಹೆಚ್ಚಿರುವಂತೆ ಸರ್ಕಾರವು ತನ್ನ ಸಾಲದ ಗುರಿಯನ್ನು ಮೇಲ್ಮುಖವಾಗಿ ಪರಿಷ್ಕರಿಸಬಹುದು. 2021-22ರ ಬಜೆಟ್ ಅಂದಾಜುಗಳಲ್ಲಿ ಸೀಮಿತ ರೀತಿಯಲ್ಲಿ ಹಣಕಾಸಿನ ಬಲವರ್ಧನೆಯನ್ನು ಪುನಃ ಸ್ಥಾಪಿಸುವ ಕ್ರಮವನ್ನು ಸೂಚಿಸುತ್ತದೆ ಎಂದರು.

ಕೇಂದ್ರದ ಹಣಕಾಸಿನ ಕೊರತೆಯು ಎಫ್‌ವೈ'21 ರ ಮೊದಲ ಎಂಟು ತಿಂಗಳಲ್ಲಿ (ಏಪ್ರಿಲ್-ನವೆಂಬರ್) ಪೂರ್ಣ ವರ್ಷದ ಬಜೆಟ್ ಅಂದಾಜಿನ (ಬಿಇ) ಶೇ 10.7 ಲಕ್ಷ ಕೋಟಿ ರೂ.ಗೆ ವಿಸ್ತರಿಸಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 33 ರಷ್ಟು ಹೆಚ್ಚಾಗಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕತೆಯ ಮೊದಲ ತ್ರೈಮಾಸಿಕದಲ್ಲಿ ಅತ್ಯಂತ ಕಠಿಣವಾದ ಲಾಕ್‌ಡೌನ್ ಎದುರಿಸಿದ್ದರಿಂದ ಹಣಕಾಸಿನ ಕೊರತೆಯು ಜುಲೈನಲ್ಲಿಯೇ ಬಜೆಟ್ ಗುರಿ ಮಿರಿ ದಾಟಿತ್ತು.

ಸರ್ಕಾರದ ಒಟ್ಟು ಸ್ವೀಕೃತ 2020ರ ನವೆಂಬರ್ ಅಂತ್ಯದವರೆಗೆ 8,30,851 ಕೋಟಿ ರೂ. (ಬಿಇ 2020-21ರ ಶೇ 37ರಷ್ಟು) ಆಗಿತ್ತು. ಇದರಲ್ಲಿ 6,88,430 ಕೋಟಿ ರೂ. ತೆರಿಗೆ ಆದಾಯ (ಕೇಂದ್ರದಿಂದ ನಿವ್ವಳ), 1,24,280 ಕೋಟಿ ರೂ. ತೆರಿಗೆಯೇತರ ಆದಾಯ ಮತ್ತು 18,141 ಕೋಟಿ ರೂ. ಸಾಲ ರಹಿತ ಬಂಡವಾಳ ರಶೀದಿಗಳು ಸೇರಿವೆ. ಸಾಲೇತರ ಬಂಡವಾಳ ರಶೀದಿಗಳು ಸಾಲಗಳ ಮರುಪಡೆಯುವಿಕೆ ಮತ್ತು ಹೂಡಿಕೆ ಒಳಗೊಂಡಿರುತ್ತವೆ.

ABOUT THE AUTHOR

...view details