ಮುಂಬೈ: ದೇಶೀಯ ಆರ್ಥಿಕ ಬೆಳವಣಿಗೆಯು ನಿಧಾನವಾಗಿದರೂ ದೇಶದ ಹಣಕಾಸು ವ್ಯವಸ್ಥೆಯು ಸದೃಢವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
2020ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಆರು ವರ್ಷಗಳ ಕನಿಷ್ಠ ಶೇ 4.5ಕ್ಕೆ ಇಳಿದಿದೆ. ಆರ್‌ಬಿಐ ತನ್ನ ಬೆಳವಣಿಗೆಯ ಮುನ್ಸೂಚನೆಯನ್ನು ಡಿಸೆಂಬರ್ ತಿಂಗಳ ವಿತ್ತೀಯ ಪರಿಶೀಲನೆಯಲ್ಲಿ 240 ಬೇಸಿಸ್ ಪಾಯಿಂಟ್‌ಗಳಿಂದ ಕಡಿತಗೊಳಿಸಿದ್ದು, ಹಣಕಾಸು ವರ್ಷಕ್ಕೆ ಶೇ 5ಕ್ಕೆ ಇಳಿಸಿತು.
ದೇಶೀಯ ಬೆಳವಣಿಗೆ ದುರ್ಬಲಗೊಂಡಿದ್ದರೂ ಭಾರತದ ಹಣಕಾಸು ವ್ಯವಸ್ಥೆಯು ಸ್ಥಿರವಾಗಿ ಉಳಿದಿದೆ ಎಂದು ಕೇಂದ್ರೀಯ ಹಣಕಾಸು ಸ್ಥಿರತೆ ವರದಿಯಲ್ಲಿ ಆರ್‌ಬಿಐ ತಿಳಿಸಿದೆ.
ಜಾಗತಿಕ ಮಟ್ಟದ ಅಪಾಯಗಳು, ಸ್ಥೂಲ ಆರ್ಥಿಕ ಪರಿಸ್ಥಿತಿಗಳ ಅಪಾಯದ ಗ್ರಹಿಕೆಗಳು, ಹಣಕಾಸು ಮಾರುಕಟ್ಟೆ ಅಪಾಯಗಳು ಮತ್ತು ಕಾರ್ಪೊರೇಟ್ ಸ್ಥಾನಗಳಂತಹ ಪ್ರಮುಖ ಅಪಾಯ ಗುಂಪುಗಳು ಹಣಕಾಸು ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಮಧ್ಯಮ ಗಾತ್ರದ ಅಡಚಣೆಗಳಿಂದ ಗ್ರಹಿಸಲಾಗಿದೆ ಎಂದು ವರದಿ ಹೇಳಿದೆ.
ದೇಶೀಯ ಬೆಳವಣಿಗೆ, ಹಣಕಾಸು, ಕಾರ್ಪೋರೆಟ್ ವಲಯ ಮತ್ತು ಬ್ಯಾಂಕ್ಗಳ ಆಸ್ತಿ ಗುಣಮಟ್ಟ ಸೇರಿದಂತೆ ವಿವಿಧ ರಂಗಗಳಲ್ಲಿನ ಅಪಾಯಗಳ ಗ್ರಹಿಕೆಯು 2019ರ ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ ಹೆಚ್ಚಾಗಿತ್ತು ಎಂದು ತಿಳಿಸಿದೆ.