ಕರ್ನಾಟಕ

karnataka

ETV Bharat / business

ಸ್ವಾವಲಂಬನೆಯ ಮುಖೇನ ಹಳ್ಳಿಯ ಉತ್ಪನ್ನಗಳಿಗೆ ಜಾಗತಿಕ ಬ್ರ್ಯಾಂಡ್​: ವಿತ್ತ ಸಚಿವೆ ಸೀತಾರಾಮನ್ - ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

265 ಬಿಲಿಯನ್ ಡಾಲರ್ ಏಷ್ಯಾ ಖಂಡದಲ್ಲಿ ಜಪಾನ್ ನಂತರ ಅತಿದೊಡ್ಡ ಮೊತ್ತದ ಪರಿಹಾರ ಪ್ಯಾಕೇಜ್​ ಪ್ರಕಟಿಸಿದ್ದರು. ಈ ನಿಟ್ಟಿನಲ್ಲಿ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ಕರೆದಿದ್ದು ಅದರಲ್ಲಿ ಆರ್ಥಿಕ ಪ್ಯಾಕೇಜ್, ಆತ್ಮನಿರ್ಭರ್ ಭಾರತ್ ಅಭಿಯಾನ ಬಗ್ಗೆ ಸಂಪೂರ್ಣ ವಿವರ ನೀಡಿದ್ದಾರೆ.

Nirmala Sitharaman
ನಿರ್ಮಲಾ ಸೀತಾರಾಮನ್

By

Published : May 13, 2020, 4:30 PM IST

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎರಡನೇ ಹಂತದ 20 ಲಕ್ಷ ಕೋಟಿ ರೂ. ಮೌಲ್ಯದ ವಿಶೇಷ ಆರ್ಥಿಕ ಪ್ಯಾಕೇಜ್​ ಅನ್ನು ಕ್ಷೇತ್ರ ಹಾಗೂ ಉದ್ಯಮಿವಾರು ವಿವರ ನೀಡಲು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದ್ದು ಈ ನಿಟ್ಟಿನಲ್ಲಿ ಸಮಾಜದ ವಿವಿಧ ವರ್ಗಗಳಿಗೆ ನಿನ್ನೆ ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಿಸಿದ್ದರು. ಅದರ ವಿವರಗಳನ್ನು ಇಂದು ನಿರ್ಮಲಾ ಸೀತಾರಾಮನ್ ಕೊಟ್ಟಿದ್ದಾರೆ.

ಪ್ರಧಾನಿ ಮೋದಿ ಅವರು ಸಮಾಜದ ಹಲವು ವರ್ಗಗಳ ಜತೆ ವ್ಯಾಪಕ ಸಮಾಲೋಚನೆ ನಡೆಸಿದ ನಂತರ ಸಮಗ್ರ ದೃಷ್ಠಿಕೋನದೊಂದಿಗೆ ಈ ಪ್ಯಾಕೇಜ್ ರೂಪಿಸಿದ್ದಾರೆ. ಮೂಲಭೂತ ಬೆಳವಣಿಗೆಯನ್ನು ಉತ್ತೇಜಿಸಲು ಹಾಗೂ ಅತ್ಯಂತ ಸ್ವಾವಲಂಬಿ ಭಾರತವನ್ನು ನಿರ್ಮಿಸುವುದಕ್ಕಾಗಿ ಆತ್ಮನಿರ್ಭಾರ ಭಾರತ ಅಭಿಯಾನ ಎಂದು ಕರೆಯಲಾಗುತ್ತಿದೆ ಎಂದರು.

ಆತ್ಮನಿರ್ಭರ (ಸ್ವಾವಲಂಬಿ) ಭಾರತ ಎಂದರೆ ಭಾರತವು ಪ್ರತ್ಯೇಕತಾವಾದಿ ದೇಶ ಎಂದು ಅರ್ಥವಲ್ಲ. ಜಾಗತಿಕ ಮಟ್ಟದಲ್ಲಿ ಸ್ಥಳೀಯ ಬ್ರಾಂಡ್‌ಗಳನ್ನು ನಿರ್ಮಿಸುವುದು ಇದರ ಉದ್ದೇಶ. ಭೂ, ಕಾರ್ಮಿಕ, ನಗದು, ಕಾನೂನು ಮತ್ತು ಉದ್ಯಮಗಳು 'ಸ್ವಾವಲಂಬಿ ಭಾರತಕ್ಕೆ ಉತ್ಪಾದನೆಯ ಅಂಶಗಳಾಗಿವೆ. ಜಾಗತಿಕ ಮೌಲ್ಯ ಸರಪಳಿ ಏಕೀಕರಣವು ಪ್ರಧಾನಿ ಮೋದಿ ನಮ್ಮ ಮುಂದೆ ಇಟ್ಟಿರುವ ದೃಷ್ಟಿಯ ಒಂದು ಭಾಗವಾಗಿದೆ. ಇದು ಆತ್ಮವಿಶ್ವಾಸದ ರಾಷ್ಟ್ರವನ್ನು ಒಳಗೊಂಡಿದ್ದು, ಭಾರತವು ಜಗತ್ತಿಗೆ ತನ್ನ ಕೊಡುಗೆ ನೀಡುವುದನ್ನು ಮುಂದುವರಿಸುತ್ತದೆ ಎಂದರು.

ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು 'ಸ್ವಾವಲಂಬಿ ಭಾರತವನ್ನು ನಿರ್ಮಿಸಲು 20 ಟ್ರಿಲಿಯನ್ ವಿಶೇಷ ಆರ್ಥಿಕ ಪ್ಯಾಕೇಜ್ ನೆರವಾಗಲಿದೆ. ಈ ಕಷ್ಟದ ಸಮಯದಲ್ಲಿ ಬಡವರಿಗೆ ನೇರ ಪ್ರಯೋಜನಗಳನ್ನು ನೇರವಾಗಿ ವರ್ಗಾಯಿಸಲಾಗುತ್ತಿದೆ. ಆರ್ಥಿಕತೆ, ಮೂಲಸೌಕರ್ಯ, ತಂತ್ರಜ್ಞಾನ ಚಾಲಿತ ವ್ಯವಸ್ಥೆ, ಜನಸಂಖ್ಯಾಶಾಸ್ತ್ರ ಹಾಗೂ ಬೇಡಿಕೆ ಅಂಶಗಳು ಬೆಳವಣಿಗೆಯ ಆಧಾರ ಸ್ಥಂಬಗಳು ಎಂದರು ಹೇಳಿದರು.

ಪ್ರಧಾನಿ ಮೋದಿ ಅವರು ದಿಟ್ಟ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಗುಜರಾತ್ ಭೂಕಂಪದ ನಂತರ ಕಚ್ ಪ್ರದೇಶದ ಪುನರುತ್ಥಾನವಾಗಲಿ ಅಥವಾ ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ಪಿಪಿಇ ಉತ್ಪಾದನೆಯ ನಿರ್ಧಾರಗಳು ಇದಕ್ಕೆ ನಿದರ್ಶನ ಎಂದು ಹಣಕಾಸು ಖಾತೆಯ ರಾಜ್ಯಸಚಿವ ಅನುರಾಗ್ ಠಾಕೂರ್ ಹೇಳಿದರು.

ABOUT THE AUTHOR

...view details