ನವದೆಹಲಿ:ಕೃಷಿ ಕಾನೂನುಗಳನ್ನು ರಾತ್ರೋರಾತ್ರಿ ಪರಿಚಯಿಸಲಾಗಿಲ್ಲ. ಕಳೆದ 20-30 ವರ್ಷಗಳಿಂದ ವ್ಯಾಪಕ ಚರ್ಚೆಯ ನಂತರ ಅನುಷ್ಠಾನಕ್ಕೆ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಿಸಾನ್ ಕಲ್ಯಾಣ್ ಸಮ್ಮೇಳನದ ನಿಮಿತ್ತ ಮಧ್ಯಪ್ರದೇಶದ ರೈತರನ್ನು ಉದ್ದೇಶಿಸಿ ಹೊಸ ಕೃಷಿ ಕಾನೂನುಗಳ ಪ್ರಯೋಜನಗಳ ಕುರಿತು ಮಾತನಾಡಿದರು. ಕಿಸಾನ್ ಕಲ್ಯಾಣ್ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ, ಬ್ಲಾಕ್, ಜಿಲ್ಲೆ ಮತ್ತು ರಾಜ್ಯ ಮಟ್ಟ ಎಂಬ ನಾಲ್ಕು ಹಂತಗಳಲ್ಲಿ ಆಯೋಜಿಸಲಾಗುತ್ತಿದೆ.
ಕೃಷಿ ಕಾನೂನುಗಳನ್ನು ರಾತ್ರೋರಾತ್ರಿ ಪರಿಚಯಿಸಿಲ್ಲ. ಕಳೆದ 20-30 ವರ್ಷಗಳಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಈ ಸುಧಾರಣೆಗಳ ಬಗ್ಗೆ ವಿವರವಾದ ಚರ್ಚೆಗಳನ್ನು ನಡೆಸಿವೆ. ಕೃಷಿ ತಜ್ಞರು, ಅರ್ಥಶಾಸ್ತ್ರಜ್ಞರು ಮತ್ತು ಪ್ರಗತಿಪರ ರೈತರು ಸುಧಾರಣೆಗಳ ಬಗ್ಗೆ ಕೋರಿದ್ದರು. ಈ ಬಳಿಕವೇ ಜಾರಿಗೆ ತರಲಾಗಿದೆ ಎಂದು ಸ್ಪಷ್ಟನೆ ನೀಡಿದರು.
2004ರ ಬಳಿಕ ಭಾರತದಲ್ಲಿ ಮಸೂದೆಗಳ ವಿರುದ್ಧ ನಡೆದ ಪ್ರತಿಭಟನೆಗಳಿವು!
ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದು ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿ ದೆಹಲಿ ಗಡಿ ಭಾಗದಲ್ಲಿ ಪಂಜಾಬ್, ಹರಿಯಾಣ ಹಾಗೂ ಇತರ ರಾಜ್ಯಗಳ ರೈತರು ಮುಷ್ಕರ ನಡೆಸುತ್ತಿದ್ದಾರೆ. ಪ್ರತಿ ಪಕ್ಷಗಳು ಸಹ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸುತ್ತಿವೆ.
ಪ್ರಣಾಳಿಕೆಯಲ್ಲಿ ಕೃಷಿ ಸುಧಾರಣೆಗಳ ಬಗ್ಗೆ ಮಾತನಾಡಿದ ರಾಜಕೀಯ ಪಕ್ಷಗಳಿಂದ ಜನರು ಉತ್ತರಗಳನ್ನು ಪಡೆಯಬೇಕು. ನಾವು ಎಂಎಸ್ಪಿಯನ್ನು ತೆಗೆದುಹಾಕಲು ಬಯಸಿದರೆ, ಸ್ವಾಮಿನಾಥನ್ ಆಯೋಗದ ವರದಿಯನ್ನು ಏಕೆ ಕಾರ್ಯಗತಗೊಳಿಸುತ್ತೇವೆ? ನಮ್ಮ ಸರ್ಕಾರವು ಎಂಎಸ್ಪಿ ಬಗ್ಗೆ ಗಂಭೀರವಾಗಿದೆ. ಅದಕ್ಕಾಗಿಯೇ ನಾವು ಪ್ರತಿ ವರ್ಷ ಸಿಷನ್ ಬಿತ್ತನೆ ವೇಳೆ ಘೋಷಿಸುತ್ತೇವೆ. ಇದರಿಂದ ರೈತರಿಗೆ ಲೆಕ್ಕಾಚಾರ ಮಾಡುವುದು ಸುಲಭವಾಗುತ್ತದೆ ಎಂದು ಹೇಳಿದರು.
ರೈತರ ಹೆಸರಿನಲ್ಲಿ ಈ ಆಂದೋಲನ ಪ್ರಾರಂಭಿಸಿದವರು ಸರ್ಕಾರ ನಡೆಸುವಾಗ ಅಥವಾ ಸರ್ಕಾರದ ಭಾಗವಾಗಿದ್ದಾಗ ಅವರು ಏನು ಮಾಡಿದರು? ಇಂದು ನಾವು ಅವರ ಕಾರ್ಯಗಳನ್ನು ದೇಶವಾಸಿಗಳು ಮತ್ತು ರೈತರ ಮುಂದೆ ತರಲು ಬಯಸುತ್ತೇನೆ. ರಾಜಕೀಯ ಪಕ್ಷಗಳು ರೈತರನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು. ಕೃಷಿ ಕಾನೂನುಗಳು ಜಾರಿಗೆ ಬಂದು 6-7 ತಿಂಗಳು ಕಳೆದಿವೆ. ಆದರೆ, ಈಗ ಇದ್ದಕ್ಕಿದ್ದಂತೆ, ಸುಳ್ಳುಗಳನ್ನು ಹಬ್ಬಿಸಲಾಗುತ್ತಿದೆ ಎಂದರು.