ಕರ್ನಾಟಕ

karnataka

ETV Bharat / business

ಔಷಧಗಳಿಗೂ ತಟ್ಟಿದ ಕೊರೊನಾ ಸೋಂಕು: ಕೇಂದ್ರದ ಅಚ್ಚರಿಯ ನಿರ್ಧಾರಕ್ಕೆ ದಂಗಾದ ಚೀನಾ - DGFT

ಚೀನಾದಲ್ಲಿ ಉದ್ಭವಿಸಿದ್ದ ಕೊರೊನಾ ವೈರಸ್​ ಸೋಂಕು ಏಕಾಏಕಿ ಭಾರತಕ್ಕೂ ವ್ಯಾಪಿಸಿಕೊಂಡಿದ್ದು ಪ್ಯಾರೆಸಿಟಮಲ್, ವಿಟಮಿನ್ ಬಿ 1 ಮತ್ತು ಬಿ 12 ಸೇರಿದಂತೆ 26 ಫಾರ್ಮಾ ಉತ್ಪನ್ನ ಮತ್ತು ಔಷಧಗಳ ಮೇಲೆ ಕೇಂದ್ರ ಸರ್ಕಾರ ರಫ್ತು ನಿರ್ಬಂಧ ಹೇರಿದೆ.

Pharma
ಔಷಧಿ

By

Published : Mar 3, 2020, 6:16 PM IST

Updated : Mar 3, 2020, 6:32 PM IST

ನವದೆಹಲಿ: ಚೀನಾದಲ್ಲಿ ಉದ್ಭವಿಸಿದ್ದ ಕೊರೊನಾ ವೈರಸ್​ ಸೋಂಕು ಏಕಾಏಕಿ ಭಾರತಕ್ಕೂ ವ್ಯಾಪಿಸಿಕೊಂಡಿದ್ದು ಪ್ಯಾರಸಿಟಮಾಲ್, ವಿಟಮಿನ್ ಬಿ 1 ಮತ್ತು ಬಿ 12 ಸೇರಿದಂತೆ 26 ಫಾರ್ಮಾ ಉತ್ಪನ್ನ ಮತ್ತು ಔಷಧಗಳ ಮೇಲೆ ಕೇಂದ್ರ ಸರ್ಕಾರ ರಫ್ತು ನಿರ್ಬಂಧ ಹೇರಿದೆ.

ಸಕ್ರಿಯ ಔಷಧ ಪದಾರ್ಥಗಳ (ಎಪಿಐ) ರಫ್ತು ಮತ್ತು ಸೂತ್ರೀಕರಣ ಒಪ್ಪಂದದಡಿ ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ), ವಾಣಿಜ್ಯ ಸಚಿವಾಲಯದಿಂದ ಪರವಾನಗಿ ಪಡೆದ ಉತ್ಪನ್ನಗಳಿಗೆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.

ದೇಶದ ವಾರ್ಷಿಕ ಎಪಿಐ ಆಮದು ಸುಮಾರು 3.5 ಬಿಲಿಯನ್ ಡಾಲರ್ ಇದ್ದು, ಸುಮಾರು 70 ಪ್ರತಿಶತದಷ್ಟು (2.5 ಬಿಲಿಯನ್ ಡಾಲರ್​) ಚೀನಾದಿಂದ ತರಿಸಿಕೊಳ್ಳಲಾಗುತ್ತದೆ. 'ಈ ಎಪಿಐಗಳಿಂದ ತಯಾರಿಸಿದ ನಿರ್ದಿಷ್ಟ ಎಪಿಐಗಳು ಮತ್ತು ಸೂತ್ರೀಕರಣಗಳ ರಫ್ತು ಮಾಡುವುದನ್ನು ಈ ತಕ್ಷಣದಿಂದಲೇ ಮುಂದಿನ ಆದೇಶದವರೆಗೂ ನಿಷೇಧಿಸಲಾಗಿದೆ' ಡಿಜಿಎಫ್​ಟಿ ಅಧಿಸೂಚನೆಯಲ್ಲಿ ತಿಳಿಸಿದೆ.

ಎಪಿಐ ಔಷಧಿ ವಸ್ತುಗಳ ಕಚ್ಚಾ ಉತ್ಪನ್ನಗಳಾಗಿದ್ದು, ಭಾರತವು ಚೀನಾದಿಂದ ಎಪಿಐ ಹೆಚ್ಚಿನ ಪ್ರಾಮಾಣದಲ್ಲಿ ಆಮದು ಮಾಡಿಕೊಂಡಿದ್ದರೂ ಸೀಮಿತ ಪ್ರಮಾಣದ ರಫ್ತು ಮಾಡುತ್ತದೆ. ಭಾರತದ ವಾರ್ಷಿಕ ಎಪಿಐ ರಫ್ತು ಪ್ರಮಾಣ 225 ಮಿಲಿಯನ್ ಡಾಲರ್​ನಷ್ಟಿದೆ.

ದೇಶದಲ್ಲಿ ಈ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುವುದರಿಂದ ರಫ್ತು ಮೇಲಿನ ನಿರ್ಬಂಧಗಳು ಮುಖ್ಯವಾಗಿದೆ. ಭಾರತದಲ್ಲಿ ಕೊರೊನಾ ವೈರಸ್ ಪೀಡಿತರ ಎರಡು ಪ್ರಕರಣಗಳು ದೃಢಪಟ್ಟಿದ್ದು, ಜನತೆಯ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಮಹತ್ವದಾಗಿದೆ.

ಪ್ಯಾರಸಿಟಮಾಲ್, ವಿಟಮಿನ್ ಬಿ1, ಬಿ6 ಮತ್ತು ಬಿ 12, ಟಿನಿಡಾಜೋಲ್, ಮೆಟ್ರೋನಿಡಜೋಲ್, ಅಸಿಕ್ಲೋವಿರ್, ಪ್ರೊಜೆಸ್ಟರಾನ್, ಕ್ಲೋರಂಫೆನಿಕೋಲ್, ಆರ್ನಿಡಾಜೋಲ್, ಕ್ಲೋರಂಫೆನಿಕಲ್, ಕ್ಲಿಂಡಮೈಸಿನ್, ನಿಯೋಮೈಸಿನ್ ಮತ್ತು ಪ್ಯಾರೆಸಿಟಮಾಲ್​ನಂತಹ ಔಷಧಿಗಳು ನಿಷೇಧಕ್ಕೆ ಒಳಪಟ್ಟಿವೆ.

Last Updated : Mar 3, 2020, 6:32 PM IST

ABOUT THE AUTHOR

...view details