ಕರ್ನಾಟಕ

karnataka

ETV Bharat / business

ಹುಷಾರು ಮೋದಿ ಜೀ... ಕೇಂದ್ರ ಸರ್ಕಾರಕ್ಕೆ ಐಎಂಎಫ್​​ ಮುಖ್ಯಸ್ಥೆ ಕೊಟ್ರು ಎಚ್ಚರಿಕೆಯ ಸಂದೇಶ - economic

ಕಳೆದ ಹತ್ತು ವರ್ಷಗಳ ನಂತರ ಆರ್ಥಿಕತೆ ಇಷ್ಟೊಂದು ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದು ಇದೇ ಮೊದಲು. ಭಾರತ ಮತ್ತು ಬ್ರೆಜಿಲ್​​ನತಹ ಕೆಲವು ದೊಡ್ಡ ಉದಯೋನ್ಮುಖ ಮಾರುಕಟ್ಟೆಯ ಆರ್ಥಿಕತೆಗಳಲ್ಲಿ, ಈ ವರ್ಷ ನಿಧಾನಗತಿಯು ಸ್ಪಷ್ಟವಾಗಿದೆ. ಚೀನಾದಲ್ಲಿ, ಬೆಳವಣಿಗೆಯು ಕಳೆದ ಹಲವು ವರ್ಷಗಳಿಂದ ಕಂಡ ಬರುತ್ತಿದ ವೇಗವು ಕ್ರಮೇಣ ಕಡಿಮೆಯಾಗುತ್ತಿದೆ. ಅನಿಶ್ಚಿತ ಆರ್ಥಿಕ ದೃಷ್ಟಿಕೋನವು ಈಗಾಗಲೇ ತೊಂದರೆಗಳನ್ನು ಎದುರಿಸುತ್ತಿರುವ ದೇಶಗಳಿಗೆ ಇನ್ನಷ್ಟು ಸವಾಲುಗಳನ್ನು ಒಡ್ಡಲಿದೆ ಎಂದು ಐಎಂಎಫ್​ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ವಿಶ್ಲೇಷಿಸಿದರು.

ಸಾಂದರ್ಭಿಕ ಚಿತ್ರ

By

Published : Oct 9, 2019, 12:58 PM IST

ವಾಷಿಂಗ್ಟನ್​​:ಜಾಗತಿಕ ಆರ್ಥಿಕತೆಯು ಮಂದಗತಿಯಲ್ಲಿ ಸಾಗುತ್ತಿದ್ದು, ಇದು ಈ ವರ್ಷ ವಿಶ್ವದ 90 ಪ್ರತಿಶತದಷ್ಟು ನಿಧಾನಗತಿಯ ಬೆಳವಣಿಗೆಗೆ ಕಾರಣವಾಗಿದೆ. ಭಾರತದಂತಹ ಕೆಲವು ದೊಡ್ಡ ಉದಯೋನ್ಮುಖ ಮಾರುಕಟ್ಟೆಯ ಆರ್ಥಿಕತೆಗಳ ಮೇಲೆ ಇದರ ಪರಿಣಾಮ ಹೆಚ್ಚು ಸ್ಪಷ್ಟವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್​) ನೂತನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ತಿಳಿಸಿದ್ದಾರೆ.

ಮುಂದಿನ ವಾರದಲ್ಲಿ ಐಎಂಎಫ್​​ ಹಾಗೂ ವಿಶ್ವ ಬ್ಯಾಂಕ್​ನ ಜಂಟಿ ವಾರ್ಷಿಕ ಸಭೆ ನಡೆಯಲಿದೆ. ಇದರಲ್ಲಿ ಜಾಗತಿಕ ಆರ್ಥಿಕ ತಜ್ಞರು, ಹಣಕಾಸು ಸಚಿವರು, ಬ್ಯಾಂಕರ್​​ ಗಳು ಸೇರಿದಂತೆ ಹಲವು ಚಿಂತಕರು ವಿಶ್ವದ ಮುಂದಿನ ಆರ್ಥಿಕತೆ ಬಗ್ಗೆ ಎರಡೂ ಸಂಸ್ಥೆಗಳು ಯೋಜನೆ ಪ್ರಕಟಿಸಲಿದೆ.

ಐಎಂಎಫ್​ನ ನೂತನ ವ್ಯವಸ್ಥಾಪಕ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಂಡು ಸಾರ್ವಜನಿಕವಾಗಿ ಮಾತನಾಡಿದ ಅವರು, 2019ರ ಸಾಲಿನಲ್ಲಿ ಜಾಗತಿಕ ಆರ್ಥಿಕತೆ ಶೇ 90ರಷ್ಟು ನಿಧಾನಗತಿಯಲ್ಲಿ ಸಾಗಲಿದೆ. ಎರಡು ವರ್ಷಗಳ ಹಿಂದೆ ವಿಶ್ವದ ಆರ್ಥಿಕತೆ ಶೇ 75ರಷ್ಟು ಪ್ರಗತಿಯತ್ತ ಸಾಗುತ್ತಿತ್ತು ಎಂದರು.

ಕಳೆದ ಹತ್ತು ವರ್ಷಗಳ ನಂತರ ಆರ್ಥಿಕತೆ ಇಷ್ಟೊಂದು ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದು ಇದೇ ಮೊದಲು. ಭಾರತ ಮತ್ತು ಬ್ರೆಜಿಲ್​​ನಂತಹ ಕೆಲವು ದೊಡ್ಡ ಉದಯೋನ್ಮುಖ ಮಾರುಕಟ್ಟೆಯ ಆರ್ಥಿಕತೆಗಳಲ್ಲಿ, ಈ ವರ್ಷ ನಿಧಾನಗತಿಯು ಸ್ಪಷ್ಟವಾಗಿದೆ. ಚೀನಾದಲ್ಲಿ, ಬೆಳವಣಿಗೆಯು ಕಳೆದ ಹಲವು ವರ್ಷಗಳಿಂದ ಕಂಡ ಬರುತ್ತಿದ ವೇಗವು ಕ್ರಮೇಣ ಕಡಿಮೆಯಾಗುತ್ತಿದೆ ಎಂದರು.

ಅನಿಶ್ಚಿತ ಆರ್ಥಿಕ ದೃಷ್ಟಿಕೋನವು ಈಗಾಗಲೇ ತೊಂದರೆಗಳನ್ನು ಎದುರಿಸುತ್ತಿರುವ ದೇಶಗಳಿಗೆ ಇನ್ನಷ್ಟು ಸವಾಲುಗಳನ್ನು ಒಡ್ಡಲಿದೆ ಎಂದು ವಿಶ್ಲೇಷಿಸಿದರು.

ABOUT THE AUTHOR

...view details