ನವದೆಹಲಿ:ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ ದಾರರಿಗೆ ಸ್ಪಷ್ಟವಾದ ಸಂದೇಶ ರವಾನಿಸಿದ್ದು, ಹತ್ತು ಸಂಖ್ಯೆಯ ನಂಬರ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಹಂಚಿಕೊಳ್ಳದಂತೆ ಎಚ್ಚರಿಸಿದೆ.
ಪ್ಯಾನ್ ಕಾರ್ಡ್ದಾರರಿಗೆ ಐಟಿ ಇಲಾಖೆ ಖಡಕ್ ಸೂಚನೆ - ಪ್ಯಾನ್
ಬಹಳಷ್ಟು ತೆರಿಗೆದಾರರು ಟ್ವಿಟರ್‌ನಲ್ಲಿ ಆದಾಯ ತೆರಿಗೆಯ ರಿಟರ್ನ್ಸ್, ಐಟಿಆರ್ ಮರುಪಾವತಿ ಇತ್ಯಾದಿಗಳ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಐಟಿ ಇಲಾಖೆಯ ಸಾಮಾಜಿಕ ಮಾಧ್ಯಮ ತಂಡವು ಇಂತಹ ಸಮಸ್ಯೆಗಳಿಗೆ ಎಲ್ಲ ರೀತಿಯ ಮಾಹಿತಿಯನ್ನೂ ನೀಡಲಿದೆ. ಈ ನಿಟ್ಟಿನಲ್ಲಿ ನಮ್ಮ ತಂಡವನ್ನು ಸಂಪರ್ಕಿಸುವಂತೆ ಲಿಂಕ್ ಹಂಚಿಕೊಂಡು ಟ್ವೀಟ್ ಮಾಡಿದೆ.
ಬಹಳಷ್ಟು ತೆರಿಗೆದಾರರು ಟ್ವಿಟ್ಟರ್‌ನಲ್ಲಿ ಆದಾಯ ತೆರಿಗೆಯ ರಿಟರ್ನ್ಸ್, ಐಟಿಆರ್ ಮರುಪಾವತಿ ಇತ್ಯಾದಿ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಕೆಲವು ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಐಟಿ ಇಲಾಖೆಯ ಸಾಮಾಜಿಕ ಮಾಧ್ಯಮ ತಂಡವು ಇಂತಹ ಸಮಸ್ಯೆಗಳಿಗೆ ಎಲ್ಲ ವಿವಿಧ ಮಾಹಿತಿಯನ್ನು ತಿಳಿಸಲಿದೆ. ನಮ್ಮ ತಂಡವನ್ನು ಸಂಪರ್ಕಿಸುವಂತೆ ಲಿಂಕ್ ಹಂಚಿಕೊಂಡು ಟ್ವೀಟ್ ಮಾಡಿದೆ.
ಐಟಿ ತನ್ನ ಟ್ವಿಟ್ಟರ್ ಖಾತೆಯಲ್ಲಿ, 'ಪ್ಯಾನ್ ಕಾರ್ಡ್ದಾರರೇ ದಯವಿಟ್ಟು ನಿಮ್ಮ ಸಂಖ್ಯೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದನ್ನು ನಿಲ್ಲಿಸಿ, ದುರುಪಯೋಗ ಆಗುವುದನ್ನು ತಪ್ಪಿಸಿ' ಎಂದು ಕೋರಿಕೊಂಡಿದೆ.