ಮಹಾರಾಷ್ಟ್ರ ಮತ್ತು ಪಂಜಾಬ್ ಸಹಕಾರಿ ಬ್ಯಾಂಕ್ ಲಿಮಿಟೆಡ್ನ (ಪಿಎಂಸಿ) ಹಗರಣವು ಸಹಕಾರಿ ಬ್ಯಾಂಕ್ಗಳ ನಡೆಯತ್ತ ದೇಶವೇ ನೋಡುವಂತಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವಹಿವಾಟು ಮತ್ತು ಗ್ರಾಹಕ ಸೇವೆಗಳ ಮೇಲೆ ನಿರ್ಬಂಧ ವಿಧಿಸಿದ ಬಳಿಕ ಬ್ಯಾಂಕ್ ಗ್ರಾಹಕರು ಭಯಭೀತರಾದರು. ಕೆಲವರು ಠೇವಣಿ ಹಿಂಪಡೆಯಲು ಆಗದೆ ಸಾವನ್ನಪ್ಪಿದರು. ‘ಭಾರತೀಯ ಬ್ಯಾಂಕ್ ಕ್ಷೇತ್ರ ಸುರಕ್ಷಿತ ಮತ್ತು ಸ್ಥಿರವಾಗಿದೆ ಯಾರೂ ಆತಂಕಪಡುವ ಅಗತ್ಯವಿಲ್ಲ' ಎಂದು ಆರ್‌ಬಿಐ ಸಾರ್ವಜನಿಕರಿಗೆ ಅಭಯ ನೀಡಿತು. ಇಂತಹ ಸನ್ನಿವೇಶದಲ್ಲಿ ಜನರಲ್ಲಿ ವಿಶ್ವಾಸ ಮೂಡಿಸಿ ಆರ್ಥಿಕ ಕ್ಷೇತ್ರದ ಒಟ್ಟಾರೆ ಆರೋಗ್ಯವನ್ನು ಮರುಸ್ಥಾಪಿಸಬೇಕಿದೆ. ಬ್ಯಾಂಕ್ ವಲಯದ ಮುಂದಿರುವ ಪ್ರಸ್ತುತ ಸ್ಥಿತಿಗತಿ, ಸವಾಲು ಮತ್ತು ಮುಂದಿನ ದಾರಿಗಳತ್ತ ಪರಿಶೀಲಿಸುವುದು ಈಗ ಮುಖ್ಯವಾಗಿದೆ.
ಪ್ರಸ್ತುತ ಸ್ಥಿತಿಗತಿ ಮತ್ತು ಸವಾಲುಗಳು
ಸಾಲದ ವಿತರಣೆಯಲ್ಲಿ ಸಹಕಾರಿ ಸಂಸ್ಥೆಗಳು ಪ್ರಮುಖ ಪಾತ್ರವಹಿಸುತ್ತವೆ. ಬ್ಯಾಂಕ್ಗಳಿರದ ಕಡಿಮೆ ಜನಸಂಖ್ಯೆ ಪ್ರದೇಶದಲ್ಲಿ ಇವುಗಳ ಕಾರ್ಯಚರಣೆ ಅಗತ್ಯವಾಗಿದೆ. ಸಹಕಾರಿ ಬ್ಯಾಂಕ್ಗಳು ಸಣ್ಣ ಸಾಲಗಾರರು, ಕಿರು ವ್ಯವಹಾರಗಳು, ಚಿಕ್ಕ ಸಮುದಾಯಗಳ ಸುತ್ತ ಕೇಂದ್ರೀಕೃತವಾಗಿವೆ. ಹೆಚ್ಚಿನ ಬಡ್ಡಿದರ ಮತ್ತು ವೈಯಕ್ತಿಕ ಹಿತಾಸಕ್ತಿಯಿಂದಾಗಿ ಠೇವಣಿದಾರರು ಈ ಬ್ಯಾಂಕ್ಗಳತ್ತ ಆಕರ್ಷಿತರಾಗುತ್ತಾರೆ. 2018ರ ಸಹಕಾರಿ ವ್ಯಸ್ಥೆಯಲ್ಲಿ 1,551 ನಗರ ಸಹಕಾರಿ ಬ್ಯಾಂಕ್ಗಳು (ಯುಸಿಬಿ) ಮತ್ತು 96,612 ಗ್ರಾಮೀಣ ಸಹಕಾರಿ ಬ್ಯಾಂಕ್ಗಳಿವೆ. ಆರ್‌ಬಿಐ ದತ್ತಾಂಶದ ಅನ್ವಯ, ನಗರ ಸಹಕಾರಿ ಸಂಸ್ಥೆಗಳು ಆಸ್ತಿಯ ಗುಣಮಟ್ಟ ಸುಧಾರಿಸಿದರೂ ಒಟ್ಟಾರೆ ಲಾಭಾಂಶ ಮಧ್ಯಮಗತಿಯಲ್ಲಿದೆ ಎಂದಿದೆ. 1,551 ಬ್ಯಾಂಕ್ಗಳಲ್ಲಿ 26 ನಿಯಂತ್ರಕ ‘ನಿರ್ದೇಶನ’ದ ಅಡಿ ಮತ್ತು 46 ಋಣಾತ್ಮಕ ಮೌಲ್ಯಗಳನ್ನ ಹೊಂದಿವೆ ಎಂದು ಹೇಳಿದೆ. ನಗರ ಸಹಕಾರಿ ಬ್ಯಾಂಕ್ಗಳಲ್ಲಿ ಹಗರಣಗಳು ಹೆಚ್ಚಾಗಿ ನಡೆಯುತ್ತಿವೆ. ಉದಾ: 2001ರಲ್ಲಿ ಗುಜರಾತ್‌ನಲ್ಲಿ ನಡೆದ ಮಾಧವ್‌ಪುರ ಕೋಆಪರೇಟಿವ್ ಬ್ಯಾಂಕ್ ಹಗರಣ. ಇತ್ತೀಚಿನ ಪಿಎಂಸಿ ಬ್ಯಾಂಕ್ ಹಗರಣ ಮೂರು ಸಮಸ್ಯೆಗಳನ್ನು ಒಳಗೊಂಡಿದೆ.1. ಹಣಕಾಸಿನ ಅಕ್ರಮಗಳು, 2. ಆಂತರಿಕ ನಿಯಂತ್ರಣ ಮತ್ತು ಬ್ಯಾಂಕಿಂಗ್ ವ್ಯವಸ್ಥೆಗಳ ವೈಫಲ್ಯ ಮತ್ತು 3. ಅದರ ಮಾನ್ಯತೆಗಳಲ್ಲಿನ ತಪ್ಪು/ ನಗದಿಗಿಂತ ಕಡಿಮೆ ವರದಿ. ಪಿಎಂಸಿ ತನ್ನ ಆಸ್ತಿಯ ಶೇ 73ರಷ್ಟು ಎಚ್ಡಿಐಎಲ್ಗೆ (ಹೌಸಿಂಗ್ ಡೆವಲಪ್‌ಮೆಂಟ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್) ಹಂಚಿಕೊಂಡಿದೆ. ಈ ಬ್ಯಾಂಕ್ ಆರ್‌ಬಿಐನ ಮೇಲ್ವಿಚಾರಣೆಯನ್ನು ಮರೆಮಾಚಲು 21,000ಕ್ಕೂ ಅಧಿಕ ನಕಲಿ ಖಾತೆಗಳನ್ನು ಸೃಜಿಸಿತ್ತು. ರಿಯಲ್ ಎಸ್ಟೇಟ್ ವಲಯದ ಒಂದು ಘಟಕಕ್ಕೆ ಭಾರಿ ಪ್ರಮಾಣದ ಲಾಭ ಮಾಡಿಕೊಡಲು ನಕಲಿ ಖಾತೆಗಳನ್ನು ಬಳಸಿಕೊಂಡಿದೆ ಎಂಬುದು ಈಗ ಬಹಿರಂಗವಾಗಿದೆ.
ಸಹಕಾರಿ ಬ್ಯಾಂಕ್ಗಳು 1966ರಲ್ಲಿ ನೇರವಾಗಿ ಆರ್‌ಬಿಐ ಕಣ್ಗಾವಲಿನಡಿ ಬಂದವು. ಆದರೆ, ಇವುಗಳು ಉಭಯ ನಿಯಂತ್ರಣ ಸಮಸ್ಯೆಗಳನ್ನು ಎದುರಿಸುತ್ತಿವೆ. ನಗರ ಸಹಕಾರಿ ಬ್ಯಾಂಕ್ಗಳನ್ನು ಆರ್‌ಬಿಐ ನಿಯಂತ್ರಿಸಿದರೇ ಸಹಕಾರಿ ಸಂಘಗಳನ್ನು ರಾಜ್ಯ ರಿಜಿಸ್ಟ್ರಾರ್‌ಗಳು ಸೇರಿದಂತೆ ಇತರರು ನಿಯಂತ್ರಿಸುತ್ತಾರೆ. ಆರ್‌ಸಿಎಸ್ ಚುನಾವಣೆಗಳ ನಿರ್ವಹಣೆ ಮತ್ತು ಅನೇಕ ಆಡಳಿತಾತ್ಮಕ ವಿಷಯಗಳ ಜೊತೆಗೆ ಆಡಿಟಿಂಗ್‌ನ ನಿಯಂತ್ರಣದಲ್ಲಿವೆ. ಆರ್‌ಬಿಐನದ್ದು ಮೇಲ್ವಿಚಾರಣೆಯ ಪರವಾನಗಿ ನೀಡುವುದು, ನಗದು ಮೀಸಲು, ಶಾಸನಬದ್ಧ ದ್ರವ್ಯತೆ ಮತ್ತು ಬಂಡವಾಳದ ಸಮರ್ಪಕ ಹಂಚಿಕೆ ಸೇರಿದಂತೆ ಬ್ಯಾಂಕ್ಗಳ ಪರಿಶೀಲನೆಯಂತಹ ನಿಯಂತ್ರಕ ಅಂಶಗಳಿಗಷ್ಟೆ ಸೀಮಿತವಾಗಿದೆ. ಸಹಕಾರಿ ಬ್ಯಾಂಕ್ಗಳ ಮೇಲೆ ಆರ್ಬಿಐಗೆ ಹೆಚ್ಚಿನ ನಿಯಂತ್ರಣ ಅಧಿಕಾರ ಹೊಂದಿಲ್ಲ.
ಆರ್‌ಬಿಐ 1993-2004ರ ಅವಧಿಯಲ್ಲಿ ಯುಸಿಬಿಗಳಿಗಾಗಿ ಸಕ್ರಿಯ ಪರವಾನಗಿ ನೀತಿ ಪರಿಚಯಿಸಿತು. ಸಹಕಾರಿ ಬ್ಯಾಂಕ್ಗಳ ಸಂಖ್ಯೆ ಏರಿಕೆಯಾದಂತೆ ಈ ಕ್ಷೇತ್ರದಲ್ಲಿ ಸಮಸ್ಯೆಗಳು ಮತ್ತು ಒತ್ತಡಗಳು ಹೆಚ್ಚಾದವು. ಆರ್‌ಬಿಐ ತಕ್ಷಣವೇ ಹೊಸ ಪರವಾನಗಿ ನೀಡುವುದನ್ನು ನಿಲ್ಲಿಸಿತು. ದುರ್ಬಲ ವಹಿವಾಟು, ಕಾರ್ಯಸಾಧುವಲ್ಲದ ಯುಸಿಬಿಗಳ ವಿಲೀನ/ ಸಂಯೋಜನೆ, ಮುಚ್ಚುವಿಕೆಯಂತಹ ಕ್ರಮಗಳಿಗೆ ಅದು ಮೊರೆ ಹೋಯಿತು.
ನಿಯಂತ್ರಕ ಪರಿಶೀಲನೆಗಳ ಹೊರತಾಗಿಯೂ ದುರ್ಬಲವಾದ ಕಾರ್ಪೊರೇಟ್ ಆಡಳಿತ, ವೃತ್ತಿಪರತೆಯ ಕೊರತೆ ಮತ್ತು ತಂತ್ರಜ್ಞಾನ ಅಳವಡಿಕೆಯಲ್ಲಿನ ಹಿಂಜರಿಕೆ ಇವುಗಳನ್ನು ಹೈರಾಣಾಗಿಸಿತ್ತು. ವಾಣಿಜ್ಯ ಬ್ಯಾಂಕ್ಗಳಂತೆ ವಿಸ್ತರಣೆ ಮತ್ತು ತಂತ್ರಜ್ಞಾನ ಅನುಷ್ಠಾನದಲ್ಲಿ ಸಹಕಾರಿ ಬ್ಯಾಂಕ್ಗಳು ಹಿಂದುಳಿದವು. ಪಾವತಿ ಬ್ಯಾಂಕ್ಗಳು, ಸಣ್ಣ ಹಣಕಾಸು ಬ್ಯಾಂಕ್ಗಳು ಮತ್ತು ಎನ್‌ಬಿಎಫ್‌ಸಿಗಳಿಂದ ಪ್ರಬಲವಾದ ಸ್ಪರ್ಧೆ ಎದುರಿಸಬೇಕಾಯಿತು. ಬಂಡವಾಳಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಸಹ ಇವೆ. ನಗರ ಸಹಕಾರ ಸಂಘಗಳು ಸಾರ್ವಜನಿಕ ಸಂಚಿಕೆ ಅಥವಾ ಪ್ರೀಮಿಯಂ ಷೇರು ವಿತರಣೆಯ ಮೂಲಕ ಬಂಡವಾಳ ಸಂಗ್ರಹಿಸಲು ಸಾಧ್ಯವಿಲ್ಲ.
ಸಹಕಾರಿ ಬ್ಯಾಂಕ್ಗಳ ಆಡಳಿತ ರಚನೆಯ ಸಮಸ್ಯೆ ಎಂದರೆ ವೃತ್ತಿಪರ ಮಂಡಳಿ ಹೊಂದಲು ಸಾಧ್ಯವಿಲ್ಲ. ಸಹಕಾರಿ ಬ್ಯಾಂಕ್ನ ನಿರ್ದೇಶಕರ ಮಂಡಳಿಯನ್ನು ಬ್ಯಾಂಕ್ನ ಸದಸ್ಯರು ಆಯ್ಕೆ ಮಾಡುತ್ತಾರೆ. ಬ್ಯಾಂಕ್ ನಿಯಂತ್ರಣಕ್ಕೆ ಪಡೆಯಲು ರಾಜಕಾರಣಿಗಳಿಂದ ಒತ್ತಡ ತಂತ್ರ ಹೆಚ್ಚಾಗಿ ನಡೆಯುತ್ತದೆ. ಅನೇಕ ರಾಜ್ಯಗಳಲ್ಲಿ ಈ ಸಂಸ್ಥೆಗಳ ರಾಜಕೀಯ ನಿಯಂತ್ರಣಕ್ಕೆ ಒಳಪಟ್ಟಿವೆ. ಆಡಳಿತಾತ್ಮಕ ಅಭಿವ್ಯಕ್ತಿ, ಸಾಲಗಳ ಹಂಚಿಕೆ, ಸಂಸ್ಥೆಗಳಲ್ಲಿ ಉದ್ಯೋಗ ನೀಡಿಕೆಯಲ್ಲಿ ಅವರು ಪ್ರಭಾವ ಬೀರುತ್ತಾರೆ.
ಮುಂದಿನ ನಡೆ ಏನು?