ಕರ್ನಾಟಕ

karnataka

ETV Bharat / business

ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ದೇಸಿ ವಸ್ತುಗಳನ್ನು ಖರೀದಿಸಿ, ಪ್ರಚಾರ ಮಾಡೋಣ: ಪ್ರಧಾನಿ ಮೋದಿ

ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಭಾರತಕ್ಕೆ ಒಂದು ಪಾಠ ಕಲಿಸಿದೆ. ಅದು ಸ್ವಾವಲಂಬಿಗಳಾಗುವಂತ ಪಾಠ. ಇದು ನಮ್ಮ ಮುಂದಿರುವ ಏಕೈಕ ಮಾರ್ಗವಾಗಿದೆ. ಸ್ವಾವಲಂಬಿ ಭಾರತದಿಂದಾಗಿಯೇ ಜಗತ್ತಿಗೆ ಪ್ರಯೋಜನಕಾರಿಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

PM Modi
ಪ್ರಧಾನಿ ಮೋದಿ

By

Published : May 12, 2020, 9:40 PM IST

ನವದೆಹಲಿ: ಭಾರತದ ಉತ್ಪನ್ನಗಳನ್ನೇ ಖರೀದಿಸಿ, ಭಾರತದ ಉತ್ಪನ್ನಗಳ ಬಗ್ಗೆ ಪ್ರಚಾರ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕೊರೊನಾ ವೈರಸ್ ಕಾಳಗದಲ್ಲಿ ಸ್ವದೇಶಿ ಮಂತ್ರ ಜಪಿಸಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಭಾರತಕ್ಕೆ ಒಂದು ಪಾಠ ಕಲಿಸಿದೆ. ಅದು ಸ್ವಾವಲಂಬಿಗಳಾಗುವಂತಹ ಪಾಠ. ಇದು ನಮ್ಮ ಮುಂದಿರುವ ಏಕೈಕ ಮಾರ್ಗವಾಗಿದೆ. ಸ್ವಾವಲಂಬಿ ಭಾರತದಿಂದಾಗಿಯೇ ಜಗತ್ತಿಗೆ ಪ್ರಯೋಜನಕಾರಿಯಾಗಲಿದೆ. ಉದಾಹರಣೆಗೆ ನಮ್ಮ ದೇಶವು ಬಯಲು ಬಹಿರ್ದೆಸೆ ಮುಕ್ತ ಭಾರತ ಆದರೆ ಅದು ಪ್ರಪಂಚದ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸ್ಥಳೀಯ ಉತ್ಪಾದನೆಯು ಭಾರತಕ್ಕೆ ತುಂಬಾ ನೆರವಾಗಿದೆ. ನಮ್ಮ ದೇಸಿತನವೇ ನಮಗೆ ಸಹಾಯ ಮಾಡಲಿದೆ ಎಂಬುದನ್ನು ಈ ಸಂಕಷ್ಟ ನಮಗೆ ಕಲಿಸಿದೆ. ಆದ್ದರಿಂದ ನಾವು ಸ್ಥಳೀಯರಿಗೆ ಧ್ವನಿ ನೀಡಬೇಕು. ಸ್ಥಳೀಯವಾಗಿ ಉತ್ಪಾದನೆಯಾದ ವಸ್ತುಗಳನ್ನು ಖರೀದಿಸುವುದಷ್ಟೇ ಅಲ್ಲ ಅದನ್ನೂ ಪ್ರಚಾರ ಮಾಡಬೇಕು ಎಂದು ಕರೆ ನೀಡಿದರು.

ಲಸಿಕೆ ದೊರೆಯುವವರೆಗೂ ಸಾಮಾಜಿಕ ಅಂತರ ವೈರಸ್ ವಿರುದ್ಧದ ಅತಿದೊಡ್ಡ ಅಸ್ತ್ರವಾಗಿ ಉಳಿದಿದೆ. ಲಾಕ್‌ಡೌನ್ ಸಂಪೂರ್ಣವಾಗಿ ತೆಗೆದುಹಾಕಲಾಗುವುದಿಲ್ಲ ಎಂದರು.

ABOUT THE AUTHOR

...view details