ಕರ್ನಾಟಕ

karnataka

ETV Bharat / business

3.8 ಕೋಟಿ ನೌಕರರ ಅನ್ನ ಕಿತ್ತುಕೊಂಡ ಕೊರೊನಾ... ನೆರವು ಕೋರಿ ಟೂರಿಸಂ - ಆತಿಥ್ಯ ಒಕ್ಕೂಟದಿಂದ ಪ್ರಧಾನಿಗೆ ಪತ್ರ - ಆತಿಥ್ಯ ಉದ್ಯಮ

ಭಾರತೀಯ ಪ್ರವಾಸೋದ್ಯಮ ಮತ್ತು ಆತಿಥ್ಯ ಸಂಘಗಳ ಒಕ್ಕೂಟ (ಎಫ್​ಎಐಟಿಎಚ್​), ಸಂಕಷ್ಟ ಪೀಡಿತ ಪ್ರವಾಸೋದ್ಯಮ ಉದ್ಯೋಗಿಗಳಿಗೆ ನೇರ ವರ್ಗಾವಣೆಯೊಂದಿಗೆ ಮೂಲ ವೇತನದಷ್ಟು ಅಂದರೆ, ಹನ್ನೆರಡು ತಿಂಗಳುಗಳವರೆಗೆ ಬೆಂಬಲ ನಿಧಿ ನೀಡಬೇಕು ಎಂದು ಮನವಿ ಮಾಡಿದೆ.

tourism sector
ಪ್ರವಾಸೋದ್ಯಮ

By

Published : Mar 19, 2020, 6:11 PM IST

Updated : Mar 19, 2020, 7:27 PM IST

ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ 3.8 ಕೋಟಿ ಜನರು ಕೆಲಸವಿಲ್ಲದ ಕೈಕಟ್ಟಿ ಕುಳಿತಿದ್ದಾರೆ. ಪ್ರವಾಸಿ ಹಾಗೂ ಆತಿಥ್ಯ ಉದ್ಯಮದ ಮೇಲೆ ಶೇ 75ರಷ್ಟು ಪ್ರಭಾವ ಬೀರಿದೆ ಎಂದು ಎಫ್​​​​​​​​ಎಐಟಿಎಚ್​​​ ತಿಳಿಸಿದೆ.

ಭಾರತೀಯ ಪ್ರವಾಸೋದ್ಯಮ ಮತ್ತು ಆತಿಥ್ಯ ಸಂಘಗಳ ಒಕ್ಕೂಟ (ಎಫ್​ಎಐಟಿಎಚ್​), ಸಂಕಷ್ಟ ಪೀಡಿತ ಪ್ರವಾಸೋದ್ಯಮ ಉದ್ಯೋಗಿಗಳಿಗೆ ನೇರ ವರ್ಗಾವಣೆಯೊಂದಿಗೆ ಮೂಲ ವೇತನದಷ್ಟು ಅಂದರೆ ಹನ್ನೆರಡು ತಿಂಗಳುಗಳವರೆಗೆ ಬೆಂಬಲ ನಿಧಿ ನೀಡಬೇಕು ಎಂದು ಮನವಿ ಮಾಡಿದೆ.

ಈ ಸಾಂಕ್ರಾಮಿಕ ರೋಗದ ಪರಿಣಾಮದಿಂದಾಗಿ ಭಾರತೀಯ ಪ್ರವಾಸೋದ್ಯಮವು ದೇಶಾದ್ಯಂತ ದಿವಾಳಿಯಾಗಿದೆ. ವ್ಯವಹಾರಗಳ ಸ್ಥಗಿತಗೊಳಿಸುವಿಕೆ ಮತ್ತು ಸಾಮೂಹಿಕ ನಿರುದ್ಯೋಗ ಸೃಷ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಎಫ್​ಎಐಟಿಎಚ್ ತಿಳಿಸಿದೆ.

ಒಟ್ಟು 5.5 ಕೋಟಿ ಉದ್ಯೋಗಿಗಳ ಪೈಕಿ ಶೇ 70ರಷ್ಟು ಜನರು ನಿರುದ್ಯೋಗಿಗಳಾಗಬಹುದು. ಅಂದಾಜು ಸುಮಾರು 3.8 ಕೋಟಿ ಆಗಬಹುದು. ಉದ್ಯೋಗ ನಷ್ಟ ಮತ್ತು ವೇತನ ಕಡಿತದ ಪರಿಣಾಮವು ಈಗಾಗಲೇ ಶುರುವಾಗಿದೆ ಎಂದು ಹೇಳಿದ್ದಾರೆ.

ಭಾರತದ ಒಟ್ಟು ಪ್ರವಾಸೋದ್ಯಮ ವ್ಯವಹಾರವು ವಿದೇಶಿ ವಿನಿಮಯದಲ್ಲಿ 28 ಬಿಲಿಯನ್ ಡಾಲರ್​ ಮತ್ತು ದೇಶಿಯ ಪ್ರವಾಸೋದ್ಯಮ ಚಟುವಟಿಕೆಯು 2 ಲಕ್ಷ ಕೋಟಿ ರೂ.ಗಿಂತ ಅಧಿಕ ವಹಿವಾಟು ನಡೆಸುತ್ತಿದೆ ಎಂದು ಅಂದಾಜಿಸಲಾಗಿದೆ. ಈ ವರ್ಷದಲ್ಲಿ ಆರ್ಥಿಕತೆ ಅಪಾಯದಲ್ಲಿ ಇರುವುದರಿಂದ ನೇರ ಪ್ರವಾಸೋದ್ಯಮ ಮತ್ತು ಒಟ್ಟಾರೆ ಆರ್ಥಿಕ ಚಟುವಟಿಕೆಗಳ ಅಪಾಯ ದುಪ್ಪಟ್ಟಾಗಿದೆ ಎಂದು ಪತ್ರದಲ್ಲಿ ಹೇಳಿದೆ.

ಉದ್ಯಮಗಳ ದಿವಾಳಿತನವನ್ನು ತಡೆಗಟ್ಟಲು, ಜಿಎಸ್​ಟಿ, ಮುಂಗಡ ತೆರಿಗೆ ಪಾವತಿ, ಪಿಎಫ್, ಇಎಸ್ಐಸಿ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಕಸ್ಟಮ್ಸ್ ಸುಂಕ ಅಥವಾ ಯಾವುದೇ ರಾಜ್ಯ ಸರ್ಕಾರದ ಮಟ್ಟದಲ್ಲಿ ಅಬಕಾರಿ ಶುಲ್ಕಗಳು, ಸುಂಕಗಳು , ತೆರಿಗೆಗಳು, ವಿದ್ಯುತ್ ಮತ್ತು ನೀರಿನ ಶುಲ್ಕಗಳು, ಬ್ಯಾಂಕ್ ಖಾತರಿಗಳು ಮತ್ತು ಭದ್ರತಾ ಠೇವಣಿಗಳು ಮತ್ತು ಪ್ರವಾಸೋದ್ಯಮ, ಪ್ರಯಾಣ, ಆತಿಥ್ಯ ಮತ್ತು ವಾಯುಯಾನ ಉದ್ಯಮದಲ್ಲಿನ ಎಲ್ಲಾ ನವೀಕರಣಗಳನ್ನು ಮುಂದೂಡಬೇಕು ಎಂದೂ ಒಕ್ಕೂಟ ಮನವಿ ಮಾಡಿದೆ.

Last Updated : Mar 19, 2020, 7:27 PM IST

ABOUT THE AUTHOR

...view details