ನವದೆಹಲಿ: ಕೋವಿಡ್-19 ಬಿಕ್ಕಟ್ಟಿನ ನಡುವೆ ಐತಿಹಾಸಿಕ ಆಘಾತಕ್ಕೊಳಗಾದ ಕಲ್ಲಿದ್ದಲು ಉತ್ಪಾದನೆ ಸಹ ತೈಲ ಮತ್ತು ಅನಿಲ ಇಳಿಕೆಯಂತೆ 2ನೇ ವಿಶ್ವ ಯುದ್ಧದ ಬಳಿಕ ಅತಿ ದೊಡ್ಡ ಕುಸಿತಕ್ಕೆ ಒಳಗಾಗಿದೆ ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ.
ಕೋವಿಡ್-19 ವೈರಸ್ ಕಳೆದ ಏಳು ದಶಕಗಳ ಅವಧಿಯಲ್ಲಿ ಕಂಡು ಕೇಳರಿಯದಂತಹ ಜಾಗತಿಕ ಹೊಡೆತವನ್ನು ಇಂಧನ ವಲಯಕ್ಕೆ ನೀಡಿದೆ. ಇದರಿಂದ ಅತಿ ದೊಡ್ಡ ಆಘಾತವನ್ನು ಅನುಭವಿಸುತ್ತಿದೆ. ಈ ವರ್ಷ ಬೇಡಿಕೆಯ ಕುಸಿತ 2008ರ ಆರ್ಥಿಕ ಬಿಕ್ಕಟ್ಟಿನ ಪ್ರಭಾವವನ್ನು ಕುಬ್ಜಗೊಳಿಸಿದೆ. ತತ್ಪರಿಣಾಮ ವಾರ್ಷಿಕ ಸುಮಾರು ಶೇ 8ರಷ್ಟು ಇಂಗಾಲದ ಉತ್ಸರ್ಜನೆ (ಎಮಿಷನ್) ಕುಸಿತ ಉಂಟಾಗಿದೆ.
ಐಒಎ, ಈ ವರ್ಷದ ಇದುವರೆಗಿನ 100 ದಿನಗಳ ನೈಜ ದತ್ತಾಂಶದ ವಿಶ್ಲೇಷಣೆಯ ಆಧಾರದ ಮೇಲಿನ ಶಕ್ತಿ ಸಮೀಕ್ಷೆಯಲ್ಲಿ ಇಂಧನ ಬಳಕೆ ಮತ್ತು ಇಂಗಾಲ ಡೈಆಕ್ಸೈಡ್ (CO2) ಉತ್ಸರ್ಜನೆಯ ಪ್ರವೃತ್ತಿಗಳು 2020ರಲ್ಲಿ ಹೇಗೆ ವಿಕಸನಗೊಳ್ಳಲಿದೆ ಎಂಬುದನ್ನು ಅಂದಾಜಿಸಿದೆ.
ಇದು ಇಡೀ ಇಂಧನ ಪ್ರಪಂಚಕ್ಕೆ ಐತಿಹಾಸಿಕ ಆಘಾತವಾಗಿದೆ. ಇಂದಿನ ಆರೋಗ್ಯ ಮತ್ತು ಆರ್ಥಿಕ ಮುಗ್ಗಟ್ಟಿನ ಮಧ್ಯೆ ಕಲ್ಲಿದ್ದಲು, ತೈಲ ಮತ್ತು ಅನಿಲಗಳಂತಹ ಇಂಧನಗಳ ಬೇಡಿಕೆ ಕುಸಿತ ದಿಗ್ಭ್ರಮೆಗೊಳಿಸುತ್ತಿದೆ. ಈ ಹಿಂದೆ ಕೇಳಿರದಷ್ಟು ಬೇಡಿಕೆ ಇಳಿಕೆಯಾಗಿದೆ ಎಂದು ಐಒಎ ಕಾರ್ಯಕಾರಿ ನಿರ್ದೇಶಕ ಫಾಗ್ ಬಿರೋಲ್ ಹೇಳಿದ್ದಾರೆ.
2020ಕ್ಕೆ ಇಂಧನ ಬೇಡಿಕೆ ಮತ್ತು ಎನರ್ಜಿ ಸಂಬಂಧಿತ ಬೇಡಿಕೆಯು ಮುಂಬರುವ ತಿಂಗಳುಗಳಲ್ಲಿ ಹಂತಹಂತವಾಗಿ ಆರ್ಥಿಕ ಚೇತರಿಕೆಯೊಂದಿಗೆ ಬೇಡಿಕೆ ಏರಿಕೆ ಆಗಬಹುದೆಂಬ ನಿರೀಕ್ಷೆ ಇದೆ. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ 2020ರಲ್ಲಿ ಶೇ 7 ಪಟ್ಟು ಕುಸಿದು 6 ಪ್ರತಿಶತದಷ್ಟು ಇಳಿಕೆ ಆಗಬಹುದು ಎಂದು ವರದಿ ಎಚ್ಚರಿಸಿದೆ.