ಕರ್ನಾಟಕ

karnataka

ETV Bharat / business

ಕೊರೊನಾಕ್ಕೆ ಮಕಾಡೆ ಮಲಗಿದ ಚೀನಾ... ಜನತೆಗೆ ಕನಿಕರದ ಶಿಕ್ಷೆ, ಸಾವಿರಾರು ಕಂಪನಿಗಳು ಗೊಟಕ್​ - ಆರ್ಥಿಕತೆ ಮೇಲೆ ಕೊರೊನಾ ವೈರಸ್ ಪರಿಣಾಮ

ಜಾಗತಿಕ ವಾಹನ ಉತ್ಪಾದನೆಯ ಕಾಲು ಭಾಗದಷ್ಟು ಪಾಲು ಚೀನಾ ಹೊಂದಿದೆ. ಯುಬಿಎಸ್ ಅನ್ವಯ, ಆಟೋ ಘಟಕಗಳ ಜಾಗತಿಕ ರಫ್ತಿನ ಶೇ 8ರಷ್ಟು ಚೀನಾ ಒದಗಿಸುತ್ತದೆ. ಅನೇಕ ಘಟಕಗಳು ಸಮಯಕ್ಕೆ ಅನುಗುಣವಾಗಿ ತಯಾರಿಸುತ್ತವೆ. ಅಗತ್ಯವಿದ್ದಾಗ ಅವುಗಳನ್ನು ಪೂರೈಸುತ್ತಾರೆ. ಆ ಕಾರ್ಖಾನೆಗಳು ಅಡೆತಡೆಗಳನ್ನು ನಿವಾರಿಸಲು ಸೀಮಿತವಾದ ದಾಸ್ತಾನು ಪ್ರಮಾಣ ಹೊಂದಿವೆ. ದೇಶದ ಅತಿ ಹೆಚ್ಚು ಮಾರಾಟವಾಗುವ ಆಟೋ ಬ್ರಾಂಡ್ ವೋಕ್ಸ್‌ವ್ಯಾಗನ್ ಸೋಮವಾರ ನಿಧಾನಗತಿಯ ಸಮಸ್ಯೆಯನ್ನು ಎದುರಿಸಿದೆ.

coronavirus
ಕೊರೊನಾ

By

Published : Feb 25, 2020, 8:28 PM IST

ಬೀಜಿಂಗ್: ಸ್ಮಾರ್ಟ್​ಫೋನ್​ಗಳು, ಆಟಿಕೆಗಳು ಮತ್ತು ಇತರ ಸರಕು ತಯಾರಿಕಾ ಕಾರ್ಖಾನೆಗಳು ತಮ್ಮ ಉತ್ಪಾದನೆಯನ್ನು ಕೊರೊನಾ ಸೋಂಕು ಹಬ್ಬುವಿಕೆಯ ಭಯದಿಂದ ಸ್ಥಗಿತಗೊಳಿಸಿವೆ. ಇದರಿಂದ ಚೀನಾದ ಆರ್ಥಿಕತೆ ನಿಷ್ಕ್ರಿಯಗೊಂಡಿದ್ದು, ಇದನ್ನು ತಪ್ಪಿಸಲು ಪುನಃ ಕಾರ್ಖಾನೆಗಳನ್ನು ತೆರೆಯಲು ಹೆಣಗಾಡುತ್ತಿವೆ. ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ನೆರವಿನ ಸಹಾಯಸ್ತ ನೀಡಿದ್ದರೂ ಉತ್ಪಾದನೆ ಸಾಮಾನ್ಯ ಸ್ಥಿತಿಗೆ ಮರಳಲು ತಿಂಗಳುಗಳೇ ಬೇಕಾಗಬಹುದು ಎಂದು ಉದ್ಯಮಿಗಳು ಮತ್ತು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆಟೋದಿಂದ- ಝೀಪ್ಪರ್‌ದಿಂದ- ಮೈಕ್ರೋಚಿಪ್‌ಗಳವರೆಗೆ ಸಾವಿರಾರು ಘಟಕಗಳು ಪೂರೈಕೆಯ ಸರಪಳಿಯ ಸಮಸ್ಯೆಗಳಿಗೆ ಸಿಲುಕಿವೆ. ಚೀನಾದಲ್ಲಿ ಸೋಂಕು ವೇಗವಾಗಿ ಹಬ್ಬುತ್ತಿದೆ. ಸೋಂಕು ಉಲ್ಬಣ ಕಡಿಮೆಗೊಳಿಸಲು ಕಾರ್ಖಾನೆಗಳ ಮರುಚಾಲನೆಯ ಮೇಲೆ ನಿರ್ಬಂಧ ಹೇರಲಾಗಿದೆ. 60 ದಶಲಕ್ಷಕ್ಕೂ ಹೆಚ್ಚು ಜನರಿರುವ ನಗರಗಳಿಗೆ ಹೆಚ್ಚಿನವರ ಪ್ರವೇಶಕ್ಕೆ ನಿರಾಕರಿಸಲಾಗಿದ್ದು, ಪ್ರಯಾಣದ ನಿರ್ಬಂಧಗಳನ್ನು ಸಹ ಹೇರಲಾಗಿದೆ.

ಸ್ಮಾರ್ಟ್​ಫೋನ್- ಹ್ಯಾಂಡ್​​ಸಟ್​ಗಳ ಜೋಡೆಗೆ ಬಹುತೇಕ ಕಂಪನಿಗಳು ಚೀನಾವನ್ನೇ ಅವಲಂಬಿಸಿವೆ. ಕೆಲವು ಸರಬರಾಜುದಾರರ ಉತ್ಪಾದನೆಯು ಸಾಮಾನ್ಯ ಮಟ್ಟಕ್ಕಿಂತ ಶೇ 10ರಷ್ಟು ಕಡಿಮೆಯಾಗಿದೆ ಎಂದು ಸಂಶೋಧನಾ ಸಂಸ್ಥೆ ಕೆನಾಲಿಸ್​ನ ನಿಕೋಲ್ ಪೆಂಗ್ ಹೇಳಿದ್ದಾರೆ.

ಮತ್ತೊಂದು ಕೆಟ್ಟ ಸುದ್ದಿ ಎಂದರೆ, ಈ ಪರಿಣಾಮ ಮತ್ತಷ್ಟು ಹೆಚ್ಚಾಗಲಿದೆ. ಅದು ಆರಂಭದಲ್ಲಿ ನಿರೀಕ್ಷಿಸಿದ್ದಕ್ಕಿಂತಲೂ ಇನ್ನೂ ಕೆಟ್ಟದಾಗಿ ಇರಲಿದೆ ಎಂದು ಪೆಂಗ್ ಎಚ್ಚರಿಸಿದ್ದಾರೆ.

ಪ್ರಯಾಣ ಮತ್ತು ಚಿಲ್ಲರೆ ವ್ಯಾಪಾರಗಳ ಮೇಲಿನ ನಿರ್ಬಂಧವು ಎರಡನೇ ಅತಿದೊಡ್ಡ ಆರ್ಥಿಕತೆಯು ಭಾಗಶಃ ಸ್ಥಗಿತವಾಗಿದೆ. ಆಪಲ್ ಇಂಕ್ ಸೇರಿದಂತೆ ಬ್ರಾಂಡೆಡ್​ ಕಂಪನಿಗಳ ಸರಬರಾಜಿಗೆ ತೊಡಕು ಎದುರಾಗಿದೆ.ಈ ಅಡಚಣೆಯು ಹೆಚ್ಚು ಕಾಲ ಮುಂದುವರಿಯಲಿದೆ. ಹೆಚ್ಚಿನ ಹಾನಿಯು ಅನೇಕ ಕೈಗಾರಿಕೆಗಳು ಮತ್ತು ಇತರ ಆರ್ಥಿಕತೆಗಳ ಮೇಲೆ ಉಂಟಾಗಲಿದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.

ಜಾಗತಿಕ ಬ್ರಾಂಡ್‌ಗಳು ಮೂರು ದಶಕಗಳಿಂದ ತಮ್ಮ ಸರಕುಗಳನ್ನು ಜೋಡಿಸಲು ಕಡಿಮೆ ಪಾವತಿಯು ಮುಖೇನ ಚೀನಿ ಕಾರ್ಮಿಕರನ್ನು ಬಳಸಿಕೊಂಡಿವೆ. ಈಗ, ಅವರು ಆಟೋ, ಕಂಪ್ಯೂಟರ್ ಮತ್ತು ಇತರ ಘಟಕಗಳನ್ನು ಪೂರೈಸಲು ಚೀನಾವನ್ನು ಹೆಚ್ಚು ಅವಲಂಬಿಸಿದ್ದಾರೆ. ಆದ್ದರಿಂದ, ಕಂಪನಿಗಳ ಅಡೆತಡೆಗಳು ಚೀನಾವನ್ನು ಇಕ್ಕಟ್ಟಿಗೆ ನೂಕಬಹುದು. ಮಾರಾಟವನ್ನು ಉಸಿರುಗಟ್ಟಿಸುವ ಸ್ಥಿತಿಗೆ ಕೊಂಡೊಯ್ಯಬಹುದು.

ಅತ್ಯಂತ ಆಶಾವಾದಿ ಮುನ್ಸೂಚನೆ ಎಂದರೇ ಮಾರ್ಚ್ ವೇಳೆಗೆ ವೈರಸ್ ನಿಯಂತ್ರಣಕ್ಕೆ ತರಲಾಗುತ್ತದೆ ಎಂದು ಚೀನಾ ಸರ್ಕಾರ ಭರವಸೆ ನೀಡಿದೆ. ಉತ್ಪಾದನೆಯು ಈ ಹಿಂದಿನಂತೆ ಮರುಕಳಿಸುತ್ತದೆ. ಕಗ್ಗತ್ತಲಿನ ವಾತಾವರಣವು ಏಕಾಏಕಿ ಮೇ ಮಧ್ಯದಲ್ಲಿ ಅಥವಾ ನಂತರ ದಿನಗಳಲ್ಲಿ ಇಲ್ಲವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಸೋಂಕಿನ ಜಾಗತಿಕ ಹರಡುವಿಕೆಯನ್ನು ತಡೆಯಲು ಅಧಿಕಾರಿಗಳು ವಿಫಲವಾಗಿದ್ದಾರೆ. ವಾಹನ ತಯಾರಕರು ಮತ್ತು ಇತರ ಕಾರ್ಖಾನೆಗಳು ಮತ್ತೆ ತೆರೆಯುತ್ತಿವೆ. ಆದರೆ, ಕನಿಷ್ಠ ಮಾರ್ಚ್ ತಿಂಗಳ ಮಧ್ಯದವರೆಗೆ ಸಾಮಾನ್ಯ ಉತ್ಪಾದನೆ ಪುನಃಸ್ಥಾಪನೆ ಆಗುವುದಲ್ಲಿ ಎಂದು ವಿಶ್ಲೇಷಕರು ಹೇಳುತ್ತಾರೆ.

ಜಾಗತಿಕ ವಾಹನ ಉತ್ಪಾದನೆಯ ಕಾಲು ಭಾಗದಷ್ಟು ಪಾಲು ಚೀನಾ ಹೊಂದಿದೆ. ಯುಬಿಎಸ್ ಅನ್ವಯ, ಆಟೋ ಘಟಕಗಳ ಜಾಗತಿಕ ರಫ್ತಿನ ಶೇ 8ರಷ್ಟು ಚೀನಾ ಒದಗಿಸುತ್ತದೆ. ಅನೇಕ ಘಟಕಗಳು ಸಮಯಕ್ಕೆ ಅನುಗುಣವಾಗಿ ತಯಾರಿಸುತ್ತವೆ. ಅಗತ್ಯವಿದ್ದಾಗ ಅವುಗಳನ್ನು ಪೂರೈಸುತ್ತಾರೆ. ಆ ಕಾರ್ಖಾನೆಗಳು ಅಡೆತಡೆಗಳನ್ನು ನಿವಾರಿಸಲು ಸೀಮಿತವಾದ ದಾಸ್ತಾನು ಪ್ರಮಾಣ ಹೊಂದಿವೆ. ದೇಶದ ಅತಿ ಹೆಚ್ಚು ಮಾರಾಟವಾಗುವ ಆಟೋ ಬ್ರಾಂಡ್ ವೋಕ್ಸ್‌ವ್ಯಾಗನ್ ಸೋಮವಾರ ನಿಧಾನಗತಿಯ ಸಮಸ್ಯೆಯನ್ನು ಎದುರಿಸಿದೆ.

ಚೀನಾದಲ್ಲಿ ರಫ್ತು ಆಧಾರಿತ ಕರಾವಳಿ ಪ್ರಾಂತ್ಯಗಳಲ್ಲಿನ ಕಾರ್ಖಾನೆ ಉತ್ಪಾದನೆಯು ಸಾಮಾನ್ಯ ಮಟ್ಟಕ್ಕಿಂತ ಶೇ 70ರಷ್ಟು ಹೆಚ್ಚಾಗಿದೆ. ಸೋಂಕಿನ ಪರಿಣಾಮವು ಅಲ್ಪಾವಧಿಯಲ್ಲಿ ನಿಯಂತ್ರಣಕ್ಕೆ ಬರಬಲ್ಲದು ಎಂದು ಕ್ಯಾಬಿನೆಟ್‌ನ ಯೋಜನಾ ಸಂಸ್ಥೆ, ರಾಷ್ಟ್ರೀಯ ಅಭಿವೃದ್ಧಿ ಮತ್ತು ಸುಧಾರಣಾ ಆಯೋಗದ ಪ್ರಧಾನ ಕಾರ್ಯದರ್ಶಿ ಕಾಂಗ್ ಲಿಯಾಂಗ್ ಹೇಳಿದ್ದಾರೆ.

ಆರ್ಥಿಕ ಚಟುವಟಿಕೆಗಳು ಶೇ 45ರಷ್ಟು ಹಿಂದಕ್ಕೆ ಹೋಗಬಹುದು ಎಂದು ಸಿಟಿಗ್ರೂಪ್ ವರದಿ ತಿಳಿಸಿದೆ.

ABOUT THE AUTHOR

...view details