ಕರ್ನಾಟಕ

karnataka

ETV Bharat / business

ನವೆಂಬರ್ ತನಕ ಉಚಿತ ಪಡಿತರ ವಿತರಣೆಗೆ ಮೋದಿ ಸಚಿವ ಸಂಪುಟ ಹಸಿರು ನಿಶಾನೆ​

ದೇಶದ 81 ಕೋಟಿ ಬಡವರಿಗೆ ಪ್ರತಿ ವ್ಯಕ್ತಿಗೆ 5 ಕೆ.ಜಿ ಉಚಿತ ಆಹಾರ ಧಾನ್ಯಗಳನ್ನು ಐದು ತಿಂಗಳವರೆಗೆ ಮತ್ತು ತಿಂಗಳಿಗೆ ಒಂದು ಕೆ.ಜಿ. ದ್ವಿದಳ ಧಾನ್ಯ ನೀಡಲಾಗುವುದು. ಉಚಿತ ಆಹಾರ ಧಾನ್ಯಗಳನ್ನು ವಿತರಿಸುವ ಯೋಜನೆಯನ್ನು ನವೆಂಬರ್ ಅಂತ್ಯದವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು.

Farmer
ಗೋದಿ ಕೃಷಿಕ

By

Published : Jul 8, 2020, 5:03 PM IST

ನವದೆಹಲಿ:ಕೊರೊನಾ ವೈರಸ್ ಪ್ರೇರಿತ ಲಾಕ್‌ಡೌನ್‌ನ ಆರ್ಥಿಕ ಹೊರೆ ನಿಭಾಯಿಸಲು ದೇಶದ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸುವ ಯೋಜನೆಯನ್ನು ನವೆಂಬರ್ ಅಂತ್ಯದವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಧ್ಯಮಗೋಷ್ಚಿಯಲ್ಲಿ ಮಾಹಿತಿ ನೀಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್, 81 ಕೋಟಿ ಬಡವರಿಗೆ ಪ್ರತಿ ವ್ಯಕ್ತಿಗೆ 5 ಕೆ.ಜಿ ಉಚಿತ ಆಹಾರ ಧಾನ್ಯಗಳನ್ನು ಐದು ತಿಂಗಳವರೆಗೆ ಮತ್ತು ತಿಂಗಳಿಗೆ ಒಂದು ಕೆಜಿ ದ್ವಿದಳ ಧಾನ್ಯ ನೀಡಲಾಗುವುದು ಎಂದು ಹೇಳಿದರು.

ಈ ಯೋಜನೆಯ ಒಟ್ಟಾರೆ ವೆಚ್ಚ 1.49 ಲಕ್ಷ ಕೋಟಿ ರೂ. ಆಗಲಿದೆ. ಅಲ್ಲದೆ, ಸೆಪ್ಟೆಂಬರ್​ವರೆಗೆ 7.4 ಕೋಟಿ ಬಡ ಮಹಿಳೆಯರಿಗೆ ಮೂರು ಉಚಿತ ಎಲ್‌ಪಿಜಿ ಸಿಲಿಂಡರ್‌ ಪಡೆಯಲು ಸರ್ಕಾರ ಅನುಮತಿಸಿತು.

ABOUT THE AUTHOR

...view details