ಕರ್ನಾಟಕ

karnataka

ETV Bharat / business

ರಾಹುಲ್​ 72 ಸಾವಿರ ರೂ. ಕೊಟ್ರೆ ನಾನು 90 ಸಾವಿರ ಕೊಡ್ತೀನಿ:ಮಾಜಿ ಫುಟ್ಬಾಲ್​ ಆಟಗಾರ - ಸಿಕ್ಕಿಮೇ ಸಮ್ಮಾನ್ ಯೋಜನೆ

ಭಾರತದ ಶ್ರೇಷ್ಠ ಫುಟ್ಬಾಲ್​ ಆಟಗಾರರಲ್ಲಿ ಒಬ್ಬರಾದ ಭೈಚುಂಗ್ ಭುಟಿಯಾ, ಹಮ್ರೋ ಸಿಕ್ಕಿಂ ಪಕ್ಷ ಸ್ಥಾಪಿಸಿದ್ದು, ಯಾವುದೇ ಲಿಂಗ ಭೇದವಿಲ್ಲದೇ ಪ್ರತಿ ಕುಟುಂಬದ ಐವರು ವಯಸ್ಕರಿಗೆ ಮಾಸಿಕ 7,500 ರೂ./ ವಾರ್ಷಿಕ 90,000 ರೂ. ನೀಡುವುದಾಗಿ ಆಶ್ವಾಸ ನೀಡಿದ್ದಾರೆ.

ರಾಹುಲ್​ ಗಾಂಧಿ, ಭೈಚುಂಗ್ ಭುಟಿಯಾ

By

Published : Mar 26, 2019, 10:17 PM IST

ಗ್ಯಾಂಗ್ಟಕ್​:ಈ ಬಾರಿ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ, ಬಡವರಿಗೆ ಕನಿಷ್ಠ ಆದಾಯ ಖಾತರಿ ಯೋಜನೆಯಡಿ ವಾರ್ಷಿಕ 72 ಸಾವಿರ ರೂ. ಠೇವಣಿ ಇಡುವುದಾಗಿ' ರಾಹುಲ್‍ ಗಾಂಧಿ ಭರವಸೆ ಕೊಟ್ಟ ಬೆನ್ನಲ್ಲೇ ಫುಟ್ಬಾಲ್​ನ ಮಾಜಿ ನಾಯಕಭೈಚುಂಗ್ ಭುಟಿಯಾಒಂದು ಹೆಜ್ಜೆ ಮುಂದೆ ಹೋಗಿ 90 ಸಾವಿರ ರೂ. ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ.

ಸಿಕ್ಕಿಮ್​ನಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 'ಸಿಕ್ಕಿಮೇ ಸಮ್ಮಾನ್ ಯೋಜನೆ'ಯನ್ನು 25 ದಿನಗಳೊಳಗೆ ಅನುಷ್ಠಾನಕ್ಕೆ ತಂದು 90 ದಿನದಲ್ಲಿ ಪ್ರತಿ ತಿಂಗಳ ಮೊದಲ ದಿನದಂದು ಜನರ ಬ್ಯಾಂಕ್​ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಆರ್ಥಿಕವಾಗಿ ಸಬಲರು, ಮೇಲು ಹಂತದ ಸರ್ಕಾರಿ ನೌಕರರು, ಉದ್ಯೋಗಸ್ಥರು, ಜನಪ್ರತಿನಿಧಿಗಳು ಹಾಗೂ ಹೆಚ್ಚು ವರಮಾನದ ವೃತ್ತಿಪರರನ್ನು 'ಸಿಕ್ಕಿಮೇ ಸಮ್ಮಾನ್ ಯೋಜನೆ'ಯಿಂದ ಹೊರಗಿಡಲಾಗಿದೆ. ಕಳೆ ಹಂತದ ಸರ್ಕಾರಿ ನೌಕರರಿಗೆ ಇದರ ಲಾಭ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ಇದೇ ಏಪ್ರಿಲ್​ 11ರಂದು ಲೋಕಸಭಾ ಚುನಾವಣೆಯ ಜೊತೆಗೆ ಸಿಕ್ಕಿಮ್​​ ವಿಧಾನಸಭಾ ಚುನಾವಣೆ ನಡೆಯಲಿದೆ. ಫುಟ್ಬಾಲ್​ನಿಂದ ನಿವೃತ್ತಿ ಹೊಂದಿದ ಬಳಿಕ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯ ರಾಜಕೀಯದ ಮೇಲೆ ಕಣ್ಣಿರಿಸಿ ನೂತನ ಪಕ್ಷ ಸ್ಥಾಪಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 6,52,862 ಜನಸಂಖ್ಯೆ ಇದ್ದು, ಪ್ರತಿ ಅರ್ಹ ಫಲಾನುಭವಿಗೂ ಮಾಸಿಕ ₹ 1,500 ನೀಡಿದರೇ ವಾರ್ಷಿಕ ಸುಮಾರು 900 ಕೋಟಿ ರೂ. ಬೇಕಾಗುತ್ತದೆ. ಸಿಕ್ಕಿಂ​ನ ವಾರ್ಷಿಕ ಬಜೆಟ್​ ₹ 22,247 ಕೋಟಿ (2017-18) ಆಗಿದ್ದು, ಒಂದು ವೇಳೆ ಅಧಿಕಾರ ಪಡೆದು ಜಾರಿಗೆ ಬಂದರೇ ಒಟ್ಟು ಆಯವ್ಯದಲ್ಲಿ ಶೇ 4.04ರಷ್ಟು ಹಣ ಅವಶ್ಯವಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ABOUT THE AUTHOR

...view details