ಮುಂಬೈ:ಬ್ಯಾಂಕ್ಗಳು ಎದುರಾಗಲಿರುವ ದೋಷಗಳನ್ನು ಮೊದಲೇ ಗುರುತಿಸಬೇಕು ಮತ್ತು ಸಮಯಕ್ಕೆ ತಕ್ಕಂತೆ ಬಂಡವಾಳ ಸಂಗ್ರಹಿಸಬೇಕು, ಅವಶ್ಯಕತೆ ಯಾವಾಗ ಎಂದು ಕಾಯಬಾರದು ಎಂಬುದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬಯಸುತ್ತದೆ.
ಹೀಗೆ ಹೇಳಿದ್ದು ಆರ್ಬಿಐನ ಗವರ್ನರ್ ಶಕ್ತಿಕಾಂತ್ ದಾಸ್. ಎಸ್‌ಬಿಐನ 7ನೇ ಬ್ಯಾಂಕಿಂಗ್ ಮತ್ತು ಅರ್ಥಶಾಸ್ತ್ರ ಕಾನ್ಕ್ಲೇವ್ನಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಾಂಕ್ರಾಮಿಕ ರೋಗವನ್ನು ಹೇಗೆ ಎದುರಿಸಬೇಕೆಂಬುದರಲ್ಲಿ ಬ್ಯಾಂಕ್ಗಳು ತಮ್ಮ ದೌರ್ಬಲ್ಯ ಮತ್ತು ಸಾಮರ್ಥ್ಯಗಳ ಕಂಡುಕೊಳ್ಳಬೇಕಿದೆ. ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಆಗಾಗ್ಗೆ ಮರುಕಳಿಸಬಹುದು. ಹಣಕಾಸು ವ್ಯವಸ್ಥೆಯು ಯಾವಾಗಲು ಸಿದ್ಧವಾಗಿರಬೇಕು. ಬೆಳವಣಿಗೆಯನ್ನು ಮುಂದುವರಿಸುವಷ್ಟೇ ಆರ್ಥಿಕ ಸ್ಥಿರತೆಯು ಮುಖ್ಯವಾಗಿದೆ ಎಂದರು.