ಕರ್ನಾಟಕ

karnataka

ETV Bharat / business

GSTಗೆ ಪೆಟ್ರೋಲ್​ ಸೇರ್ಪಡೆ ಹೊಣೆ ರಾಜ್ಯಗಳ ಮೇಲೆ ಹೊರಿಸಬೇಡಿ: ಸೀತಾರಾಮನ್​ಗೆ ಅಮಿತ್ ತಪರಾಕಿ - ವಾಣಿಜ್ಯ ಸುದ್ದಿ

'ಈಟಿವಿ ಭಾರತ್​' ಪ್ರತಿನಿಧಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಜಿಎಸ್​ಟಿ ವ್ಯಾಪ್ತಿಗೆ ಪೆಟ್ರೋಲ್​ ಮತ್ತು ಡೀಸೆಲ್​ ತರುವ ನಿರ್ಧಾರವನ್ನು ಜಿಎಸ್​ಟಿ ಮಂಡಳಿ ಹಾಗೂ ರಾಜ್ಯಗಳು ತೀರ್ಮಾನಿಸಬೇಕು. ಒಮ್ಮೆ ಅವುಗಳು ಒಪ್ಪಿದರೆ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿಲ್ಲ ಎಂದಿದ್ದರು.

GST
ಜಿಎಸ್​ಟಿ

By

Published : Feb 11, 2020, 7:37 PM IST

ಕೋಲ್ಕತ್ತಾ:ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಯಲ್ಲಿ ಪೆಟ್ರೋಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಸೇರ್ಪಡೆ ಬಗ್ಗೆ ರಾಜ್ಯಗಳು ಮತ್ತು ಜಿಎಸ್‌ಟಿ ಮಂಡಳಿ ನಿರ್ಧರಿಸಬೇಕು ಎಂಬ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ಪಶ್ಚಿಮ ಬಂಗಾಳದ ಹಣಕಾಸು ಸಚಿವ ಅಮಿತ್ ಮಿತ್ರಾ ಪ್ರತಿಕ್ರಿಯಿಸಿದ್ದಾರೆ.

ಸೋಮವಾರ 'ಈಟಿವಿ ಭಾರತ್​' ಪ್ರತಿನಿಧಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೀತಾರಾಮನ್ ಅವರು, ಜಿಎಸ್​ಟಿ ವ್ಯಾಪ್ತಿಗೆ ಪೆಟ್ರೋಲ್​ ಮತ್ತು ಡೀಸೆಲ್​ ತರುವ ನಿರ್ಧಾರವನ್ನು ಜಿಎಸ್​ಟಿ ಮಂಡಳಿ ಹಾಗೂ ರಾಜ್ಯಗಳು ತೀರ್ಮಾನಿಸಬೇಕು. ಒಮ್ಮೆ ಅವುಗಳು ಒಪ್ಪಿದರೆ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿಲ್ಲ ಎಂದಿದ್ದರು.

ಅಮಿತ್ ಮಿತ್ರಾ ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿ, ಜಿಎಸ್‌ಟಿ ಮಂಡಳಿ ಕೇಂದ್ರದ ನೇತೃತ್ವದ ಸಂಸ್ಥೆ. ಹಣಕಾಸು ಸಚಿವರು ಜಿಎಸ್​​ಟಿ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ತಮ್ಮ ಜವಾಬ್ದಾರಿಯನ್ನು ರಾಜ್ಯಗಳ ಮೇಲೆ ಹಾಕಲು ಸಾಧ್ಯವಿಲ್ಲ ಎಂದಿದ್ದಾರೆ.

ABOUT THE AUTHOR

...view details